ಅಟಲ್ ಜೀ  ದೇಶ ಮೊದಲೆಂಬ ಅಚಲ ನಿಷ್ಠೆಯುಳ್ಳವರಾಗಿದ್ದರು : ಸುಭಾಷ ಪಾಟೀಲ

Hasiru Kranti
ಅಟಲ್ ಜೀ  ದೇಶ ಮೊದಲೆಂಬ ಅಚಲ ನಿಷ್ಠೆಯುಳ್ಳವರಾಗಿದ್ದರು : ಸುಭಾಷ ಪಾಟೀಲ
WhatsApp Group Join Now
Telegram Group Join Now
ಬೆಳಗಾವಿ.ನಗರದ ಧರ್ಮನಾಥ ಸರ್ಕಲ್ ಹತ್ತಿರವಿರುವ ಬಿಜೆಪಿ ಕಚೇರಿಯಲ್ಲಿ ಭಾರತರತ್ನ ದಿ.ಅಟಲ್ ಬಿಹಾರಿ ವಾಜಪೇಯಿರವರ ಜನ್ಮಶತಮಾನೋತ್ಸವದ ನಿಮಿತ್ತ “ಅಟಲ್ ಸ್ಮೃತಿ ವರ್ಷ” ಕಾರ್ಯಕ್ರಮ ಅಂಗವಾಗಿ ಅಟಲ್ ಜಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ದೇಶಿಸಿ
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ  ಮಾತನಾಡಿ ಕಾಂಗ್ರೆಸ್ ಉನ್ನತ ನಾಯಕರನ್ನು ಮುಲಾಜಿಲ್ಲದೆ ಖಂಡನೆ ಮಾಡ್ತಾ ಇದ್ದರು, ಅವರ ಮೊದಲು ನನ್ನ ದೇಶ ಆ ನಂತರ ನಾನು ಎಂಬ  ಅಚಲ ದೇಶ ಪ್ರೇಮ ನಿಷ್ಠೆಯುಳ್ಳವರಾಗಿದ್ದರು.ಅಮೇರಿಕ ದೇಶದ ಪರಮಾಣು ಒಪ್ಪಂದ ವಿರೋಧಿಸಿ ದೇಶ ರಕ್ಷಣೆಗೆ ಪರಮಾಣು ಪರೀಕ್ಷೆ ಮಾಡಿ ಸೈ ಎನ್ನಿಸಿಕೊಂಡರು, ದೇಶದ ರಸ್ತೆ ಅಗಲೀಕರಣಕ್ಕೆ ಮೂಲ ಕಾರಣಿಕರ್ತರು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಎಂದು ಹೇಳಿದರು.
      ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ  ಮಹಾಂತೇಶ ದೊಡ್ಡಗೌಡರ   ಮಾತನಾಡಿ ಅಟಲ್ ಜೀ ಅವರ  ಮಾತು ಅವರ ನಡೆ ಅವರ ಸಾಧನೆ ಅವರ ಆಡಳಿತ ಅವರ ಸಂಘಟನಾ ಕಾರ್ಯಗಳು ಪ್ರತಿಯೊಂದು ಕೂಡ ಅಸಾಮಾನ್ಯ
ಆದರೆ ಅವೆಲ್ಲವನ್ನು ಬೆಸೆದ ಕೊಂಡಿ ಎಂದರೆ ದೇಶ ಮೊದಲು ಎನ್ನುವ ಅವರ ಅಚಲನಿಷ್ಠೆ!
ಅಟಲ್ ಜಿ ಜನ್ಮ ಶತಮಾನೋತ್ಸವದ ವರ್ಷದಲ್ಲಿ ಅವರು ಕಂಡ ವಿಕಸಿತ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಪ್ರಯತ್ನ ನಡೆಸುವುದೇ ಆ ಮಹಾನ್ ನಾಯಕನಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವ.
ನೆಹರು ಇಂದಿರಾಗಾಂಧಿ ಅವರಂತಹ ನಾಯಕರ ವಿರುದ್ಧ ಅಟಲ್ ಜಿ ಯಾವುದೇ ಮುಲಾಜಿಲ್ಲದೇ ತೀವ್ರ ಟೀಕೆ ಮಾಡುತ್ತಿದ್ದರು.
ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿರಬಹುದು ಆದರೆ ಅಟಲ್ ಜಿ ಅವರಿಗೆ ಯಾರು ಶತ್ರುಗಳಿರಲಿಲ್ಲ.
ಅವರ ರಾಜಕೀಯ ವಿರೋಧಿಗಳಿಗೂ ಅವರ ದೇಶಭಕ್ತಿ ಅವರ ಸಿದ್ಧಾಂತ ನಿಷ್ಠೆ ಅವರ ಸೌಮ್ಯ ಸ್ವಭಾವ ಮತ್ತು ಎಲ್ಲರನ್ನೂ ಒಳಗೊಂಡ ಚಿಂತನೆಗಳ ಬಗ್ಗೆ ಚೆನ್ನಾಗಿ ತಿಳಿದಿತ್ತು.
ಅಂತಹ ಅಜಾತಶತ್ರು ಅಟಲ್ ಜಿ ಎಂದು ಹೇಳಿದರು.
     ಈ ಸಂದರ್ಭದಲ್ಲಿ ಓ.ಬಿ.ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಅಭಿಯಾನದ ಜಿಲ್ಲಾ ಸಹ ಸಂಚಾಲಕರಾದ ಸುಭಾಷ್ ಸಣ್ಣವೀರಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಮಾದಮ್ಮನವರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ನಯನಾ ಭಸ್ಮೆ ಹಾಗೂ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article