Pratibha Boi
WhatsApp Group Join Now
Telegram Group Join Now

ರಾಮದುರ್ಗ: ಮನಿಹಾಳ-ಸುರೇಬಾನ ಗ್ರಾಮದ ಶ್ರೀ ಗುರುದೇವ ಆತ್ಮಾನಂದ ಮಹಾಸ್ವಾಮಿಗಳವರ ೪೩ ನೇ ಪುಣ್ಯಸ್ಮರಣೋತ್ಸವ, ಶ್ರೀಗಳ ಧರ್ಮಪತ್ನಿ ದೇವಮ್ಮನವರ ೩೬ ನೇ ಹಾಗೂ ಜಗದ್ಗುರು ಶ್ರೀ ಆತ್ಮಾನಂದರ ಪುತ್ರರಾದ ಶ್ರೀ ನಿರಂಜನ ಮಹಾಸ್ವಾಮಿಗಳ ೧೩ ನೇ ಪುಣ್ಯಾರಾಧನೆ ಮತ್ತು ಓಂ ನಮಃ ಸುಖಾಯ ಮಹಾಮಂತ್ರದ ೭೫ ನೇ ಅಮೃತ ಮಹೋತ್ಸವದ ಕಾರ್ಯಕ್ರಮ ಡಿ. ೩ ರಂದು ಬೆಳಿಗ್ಗೆ ೯.೪೫ಕ್ಕೆ ಜರುಗಲಿದೆ.
ಸಮಾರಂಭದ ಸಾನಿಧ್ಯವನ್ನು ಆತ್ಮಾನಂದ ಪುಣ್ಯಾಶ್ರಮದ ಶ್ರೀ ಗುರುದೇವ ಸಮರ್ಥ ಶಿವಾನಂದ ಸ್ವಾಮೀಜಿಗಳು ವಹಿಸುವರು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಆಶೀರ್ವಚನ ವಿವಿಧ ಕ್ಷೇತ್ರಗಳಿಂದ ಬಂದಂತ ಮಹನೀಯರು ಬರಮಾಡಿಕೊಳ್ಳುವುದು ಹಾಗೂ ನಾಗನೂರ ಗದಗದ ಶಿವಾನಂದ ಮಠದ ಶ್ರೀ ಬಸವರಾಜ ಪಂಡಿತರು ವಹಿಸಲಿದ್ದಾರೆ. ಸುತ್ತಮುತ್ತಲಿನ ಗ್ರಾಮದ ಸದ್ಭಕ್ತ ಮಂಡಳಿಯವರ, ಸುರೇಬಾನ-ಮನಿಹಾಳ ರೇವಡಿಕೊಪ್ಪ, ಹಂಪಿಹೊಳಿ, ಶಿವಪೇಟೆಯ ಭಕ್ತಾದಿಗಳು ಮುಂತಾದವರು ಉಪಸ್ಥಿತರಿರುವರು. ಮಧ್ಯಾಹ್ನ ೧.೦೦ ಗಂಟೆಗೆ ಮಹಾಪ್ರಸಾದೊಂದಿಗೆ ಕಾರ್ಯಕ್ರಮ ಸಂಪನ್ಗೊಳ್ಳಲಿದೆ ಎಂದು ಮಠದ ಭಕ್ತಾಧಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

WhatsApp Group Join Now
Telegram Group Join Now
Share This Article