Pratibha Boi
WhatsApp Group Join Now
Telegram Group Join Now

ಯರಗಟ್ಟಿ: ಸಮೀಪದ ಕುರುಬಗಟ್ಪಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರಿ ಸಂಘದ ಉದ್ಘಾಟನೆ.ಸಮೀಪದ ಕುರುಬಗಟ್ಟಿ ಗ್ರಾಮದ ನೂತನ ಹಾಲು ಉತ್ಪಾದಕರ ಸಹಕಾರಿ ಸಂಘ ಮತ್ತು ಕಟ್ಟಡವನ್ನು ಮಂಗಳವಾರ ಭವ್ಯವಾಗಿ ಉದ್ಘಾಟಿಸಿದ ಶಾಸಕ ವಿಶ್ವಾಸ ವೈದ್ಯ ಮಾತನಾಡಿದ ಅವರು
ಹಾಲು ಉತ್ಪಾದಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘದ ಈ ಹೆಜ್ಜೆ ಶ್ಲಾಘನೀಯವೆಂದರು ಮುಂಬರುವ ದಿನಗಳಲ್ಲಿ ಯರಗಟ್ಟಿ ತಾಲೂಕಿನ ಪ್ರತಿ ಗ್ರಾಮಕ್ಕೂಂದು ಕೆಎಂಎಫ್ ಡೈರಿ ನಿರ್ಮಾಣಮಾಡಿ ರೈತರಿಗೆ ಅನುಕೂಲ ಮಾಡಿಕೊಡುವ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.ಕೆಎಂಎಫ್ ನಿರ್ದೇಶಕಾರದ ಶಂಕರ ಇಟ್ನಾಳ, ಅಜೀತಕುಮಾರ ದೇಸಾಯಿ, ಸದೆಪ್ಪ ವಾರಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಗ್ರಾ. ಪಂ. ಅಧ್ಯಕ್ಷ ಲಕ್ಕಪ್ಪ ಸನ್ನಿಂಗವನ್ನರ, ವಿಠ್ಠಲ ಬಂಟನೂರ, ಚಾಯಪ್ಪ ಹುಂಡೇಕಾರ, ಕೆಎಂಎಫ್ ಉಪ ವ್ಯವಸ್ಥಾಪಕ ರಾಜೇಂದ್ರ ಮೇಳವಂಕಿ, ಕೆಎಂಎಫ್ ವಿಸ್ತರಣಾಧಿಕಾರಿಗಳ ರವಿ ತಳವಾರ, ಬಸವರಾಜ ಕೂಳ್ಳೂರ, ವಿರಭದ್ರಪ್ಪ ಕುರುಬಗಟ್ಟಿ, ದ್ಯಾಮಣ್ಣಾ ಬಂಡಿವಡ್ಡರ, ಮಲಿಕಸಾಬ ಬಾಗವಾನ, ನೆಕ್ಕುತ್ತಾ ಕಳ್ಳಿಗುದ್ದಿ, ರಾಮಚಂದ್ರ ಪಟಾತ, ಪಡೆಪ್ಪ ನರಿ, ಹೊನ್ನಪ್ಪ ಖಂಡ್ರಿ, ಮೌಲಾಸಾಬ ನದಾಫ, ಮಹಾಂತೇಶ ಗಟನಟ್ಟಿ, ಪುಂಡಲೀಕ ಪೂಜೇರ, ಬೀರಪ್ಪ ಸಣ್ಣನಿಂಗನ್ನವರ ಸೇರಿದಂತೆ ಸ್ಥಳೀಯ ಗಣ್ಯರು, ರೈತರು ಮತ್ತು ಹಾಲು ಉತ್ಪಾದಕರು ಉಪಸ್ಥಿತರಿದ್ದರು.

 

 

WhatsApp Group Join Now
Telegram Group Join Now
Share This Article