“ದೇಶಾಭಿಮಾನ ಮತ್ತು ಧರ್ಮಾಭಿಮಾನ ಎಲ್ಲರಲ್ಲೂ ಬೆಳೆದು ಬರಬೇಕು”

Pratibha Boi
“ದೇಶಾಭಿಮಾನ ಮತ್ತು ಧರ್ಮಾಭಿಮಾನ ಎಲ್ಲರಲ್ಲೂ ಬೆಳೆದು ಬರಬೇಕು”
WhatsApp Group Join Now
Telegram Group Join Now

ಇಂಡಿ : ಮನುಷ್ಯ ಜೀವನ ಪವಿತ್ರ ಪಾವನ. ಅರಿತು ಬಾಳುವದರಲ್ಲಿ ಸುಖ ಶಾಂತಿಯಿದೆ. ಬದುಕಿನ ಉತ್ಕರ್ಷತೆ ಮತ್ತು ಶ್ರೇಯಸ್ಸಿದೆ. ಮನುಷ್ಯ ದೊಡ್ಡದೊಡ್ಡ ಮಾತು ಆಡುವದರಿಂದ ದೊಡ್ಡವರಾಗಲ್ಲ. ದೊಡ್ಡ ಮನಸ್ಸು ಮತ್ತು ದೊಡ್ಡ ಗುಣಗಳಿಂದ ಮನುಷ್ಯನಿಗೆ ದೊಡ್ಡಸ್ತಿಕೆ ಪ್ರಾಪ್ತಿಯಾಗಲಿದೆ ಎಂದು ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ದಾನಮ್ಮದೇವಿ ದೇವಸ್ಥಾನದಲ್ಲಿ ದಾನಮ್ಮಾದೇವಿ ೪ ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ಯ ನಡೆದ ಬಾಲ ಮುತ್ಯೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ದೀಪೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನ ನಮಗೆ ಏನು ಕೊಟ್ಟಿದೆ ಎಂಬುದಕಿಂತ ನಾವು ಬೇರೆಯವರಿಗೆ ಏನು ಕೊಟ್ಟಿದ್ದೇವೆ ಎಂಬುದು ಮುಖ್ಯ. ಸ್ವಾಭಿಮಾನದ ಕೊರತೆ ಯಿಂದ ಅನೇಕ ನೋವು ಅನುಭವಿಸುವ ಪರಿಸ್ಥಿತಿ ಇದೆ.ದೇಶಾಭಿಮಾನ ಮತ್ತು ಧರ್ಮಾಭಿಮಾನ ಎಲ್ಲರಲ್ಲೂ ಬೆಳೆದು ಬರಬೇಕು. ಮನುಷ್ಯನ ಮನಸ್ಸು ಶಾಂತ ಪ್ರಶಾಂತಗೊಳ್ಳಲು ಸಾದನೆ ಬೇಕು. ಚಂಚಲ ಮನಸ್ಸನ್ನು ತಣ್ಣ ಗಿಡುವ ಜೀವನವೇ ಆಧ್ಯಾತ್ಮ. ಆದ್ಯಾತ್ಮದ ಬದುಕು ಬಲಗೊಳ್ಳಲು ಆಧ್ಯಾತ್ಮದ ಅರಿವು ಸಾದನೆ ನಿರಂತರವಾಗಿರಬೇಕು ಎಂದರು.
ಆಳೂರ ಶಂಕರಾನಂದ ಶಿವಾಚಾರ್ಯರು ಮಾತನಾಡಿ ನೀರು ಎರೆದವರಿಗೂ ಕಡಿಯಲು ಬಂದವರಿಗೂ ಮರ ನೆರಳು ನೀಡಿ ಹಣ್ಣು ಕೊಡುತ್ತದೆ. ಆ ಮರದ ಸ್ವಭಾವ ಮನುಷ್ಯನ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಉಜ್ವಲಗೊಳ್ಳುತ್ತದೆ ಎಂದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾ ಮಾಜಿ ಅಧ್ಯಕ ಕಾಸುಗೌಡ ಬಿರಾದಾರ, ರಾಘವೇಂದ್ರ ಕುಲಕರ್ಣಿ, ವೈ .ಜಿ.ಬಿರಾದಾರ ಮಾತನಾಡಿದರು.
ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ದೇವಸ್ಥಾನ ಸಮಿತಿಯ ಅಧ್ಯಕ್ಷ ಅನೀಲ ಪ್ರಸಾದ ಏಳಗಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಡಿ.ಡಿ.ಮಡಗೊಂಡ, ಅನಂತ ಜೈನ, ಪಶು ವೈದ್ಯಾಧಿಕಾರಿ ಡಾ. ಲಕ್ಷ್ಮೀಶ ಕಟ್ಟಿಮನಿ, ಅನೀಲಗೌಡ ಬಿರಾದಾರ, ಮುದುಕು ಕುಂಬಾರ, ಬಾಳು ಮುಳಜಿ, ಅರವಿಂದ ಹಂಜಗಿ, ರಾಜಶೇಖರ ತಾಂಬೆ, ಮಲ್ಲಿಕಾರ್ಜುನ ಬಿರಾದಾರ, ಸಂಗಮೇಶ ಕಕ್ಕಳಮೇಲಿ, ಶೈಲೇಶ ಬೀಳಗಿ, ಜಗದೀಶ ಕ್ಷತ್ರಿ , ಬಾಬು ಹಂಜಗಿ , ರವಿಗೌಡ ಪಾಟೀಲ, ಮುರಳೀಧರ ಭಜಂತ್ರಿ , ನೀಖಿಲ ಬಜಂತ್ರಿ ಕುಮಾರಿ ಸ್ಪಂದನಾ ಬಜಂತ್ರಿ, ಅರ್ಚಕ ದಾನಯ್ಯ ಶಾಸ್ತ್ರೀ ಮತ್ತಿತರಿದ್ದರು. ಅನೀಲಪ್ರಸಾದ ಏಳಗಿ ಪೂಜಾ ಏಳಗಿ ದಂಪತಿಗಳನ್ನು ಸನ್ಮಾನಿಸಲಾಯಿತು.

 

WhatsApp Group Join Now
Telegram Group Join Now
Share This Article