ಇಂಡಿ : ಪವಿತ್ರ ಕಾರ್ತಿಕ ಮಾಸದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮ ಭಕ್ತರ ಬದುಕಿನಲ್ಲಿ ಸಕಾರಾತ್ಮಕ ಜ್ಞಾನ ಚಿಂತನೆಗಳು ಮೂಡಿ ಬದಲಾವಣೆಗಳಿಗೆ ಪ್ರೇರಣೆ ಸಿಗಲಿ ಎಂದು ಬಾಲಗಾಂವ ಕಾತ್ರಾಳದ ಅಮೃತಾನಂದ ಶ್ರೀಗಳು ಹೇಳಿದರು.
ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಛಟ್ಟಿ ಜಾತ್ರೆ ನಿಮಿತ್ಯ ನಡೆದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣರು ಕೌಟುಂಬಿಕ ಜೀವನದಲ್ಲಿ ಎದುರಾದ ಕಷ್ಟಗಳನ್ನು ಎದುರಿಸಿ ಆಧ್ಯಾತ್ಮಿಕ ಸಾಧನೆಯಿಂದ ಪರಶಿವ ಮಲ್ಲಿಕಾರ್ಜುನ ಕೃಪೆಗೆ ಪಾತ್ರರಾಗಿ ಎಲ್ಲರನ್ನೂ ಉದ್ದರಿಸಿ ಸಮಾಜಕ್ಕೆ ಮಾನವೀಯ ಸಂದೇಶಗಳನ್ನುನೀಡಿದ್ದಾರೆ. ಅವರ ಆಧರ್ಶ ಮೈ ಗುಡಿಸಿಕೊಂಡು ಸದೃಡ ಸಾಮರಸ್ಯದ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.
ಮಾತೋಶ್ರೀ ವಿದ್ಯಾತಾಯಿ ಮಾತನಾಡಿ ಪ್ರಸಕ್ತ ದಿನಗಳಲ್ಲಿ ನಾವೆಲ್ಲರೂ ಧರ್ಮ ಸಂಸ್ಕೃತಿ ಧಾರ್ಮಿಕ ಆಚರಣೆಗಳನ್ನು ಉಳಿಸಿ ಬೆಳೆಸುವ ಮೂಲಕ ದೇಶದ ಐಕ್ಯತೆಗೆ ಶಕ್ತಿ ತುಂಬಬೇಕು. ಜನರಲ್ಲಿ ನಾಯಕತ್ವ ಗುಣಗಳಿದ್ದು ಜನರ ಪ್ರೀತಿ ವಿಶ್ವಾಸ ಗಳಿಸಿ ವಿಶಿಷ್ಠವಾಗಿ ಗುರುತಿಸಿ ಕೊಂಡಿದ್ದು ಅವರಿಗೆ ಶಕ್ತಿ ತುಂಬಬೇಕು ಎಂದರು.
ಬಿಜೆಪಿ ದುರೀಣ ಕಾಸುಗೌಡ ಬಿರಾದಾರ , ಮಲ್ಲಿಕಾರ್ಜುನ ಶಾಸ್ತ್ರೀಗಳು, ಮಾವಿನಮರದ ಶಿಕ್ಷಕರು ವೇದಿಕೆಯ ಮೇಲಿದ್ದರು. ಗಣ್ಯರಾದ ಬಿ.ಎಸ್.ಪಾಟೀಲ ಇವರನ್ನು ಸನ್ಮಾನಿಸಲಾಯಿತು.
ವೀರುಪಾಕ್ಷಯ್ಯ ಮಠಪತಿ, ಶಿವಶಂಕರ ಮೇತ್ರಿ, ಶ್ರೀಶೈಲ ಭಾಸಗಿ , ಮುತ್ತು ಪಾಟೀಲ, ಸುನೀಲ ವಾಲಿ, ನಾಗಪ್ಪಗೌಡ ಬಿರಾದಾರ, ಪುಟ್ಟುಗೌಡ ಬಿರಾದಾರ, ಸಂಗಣ್ಣ ಉಪ್ಪಿನ, ಸಿದ್ದು ನಾಯಿಕೊಡಿ, ಅಶೋಕ ಬಿರಾದಾರ, ಶ್ರೀಶೈಲ ಉಪ್ಪಾರ, ಸಿದ್ದು ಮಠಪತಿ , ಅರವಿಂದ ಮೈದರಗಿ ಸಾತಪ್ಪ ಮೇತ್ರಿ ಶಂಕರ ಕುಂಬಾರ ಶಂಕರ ನಾವಿ ನಿಂಗಪ್ಪ ರೇಖಾ ಸಿದ್ರಾಮಪ್ಪಗೌಡ ಬಿರಾದಾರ ಮತ್ತಿತರಿದ್ದರು
ಭಕ್ತರ ಬದುಕಿನಲ್ಲಿ ಸಕಾರಾತ್ಮಕ ಜ್ಞಾನ ಚಿಂತನೆಗಳು ಮೂಡಿ ಬದಲಾವಣೆಗಳಿಗೆ ಪ್ರೇರಣೆ ಸಿಗಲಿ : ಶ್ರೀಗಳು


