ಇಂಡಿ : ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಶ್ರೀ ದಾನಮ್ಮಾದೇವಿ ೪ ನೇ ವರ್ಷದ ಜಾತ್ರಾ ಮಹೋತ್ಸವ ೧೯ ಮತ್ತು ೨೦ ರಂದು ನಡೆಯುವವು ಎಂದು ಜಾತ್ರಾ ಸಮಿತಿಯ ಅನೀಲ ಪ್ರಸಾದ ಏಳಗಿ ತಿಳಿಸಿದ್ದಾರೆ.
ದೇವಸ್ಥಾನ ಆವರಣದಲ್ಲಿ ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರ ಸಾನಿದ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
೧೯ ರಂದು ಬುಧವಾರ ಸಾಯಂಕಾಲ ೪ ಗಂಟೆಗೆ ಬಾಲ ಮುತ್ಯೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಂತರ ೫ ಗಂಟೆಗೆಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಯಂಕಾಲ ೬ ಗಂಟೆಗೆ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ, ಗುರುವಾರ ೨೦ ರಂದು ಛಟ್ಟಿ ಅಮವಾಸೆ ಬೆಳಗ್ಗೆ ೫ ಗಂಟೆಗೆ ಶ್ರೀ ದಾನಮ್ಮದೇವಿ ಮೂರ್ತಿಗೆ ರುದ್ರಾಭಿಷೇಕ ನಂತರ ೯ ಗಂಟೆಗೆ ಎಸ್ಟರ ಪೆಟ್ರೋಲ ಪಂಪ ಹಿಂದುಗಡೆ ಸಿಂದಗಿ ರಸ್ತೆ ಬನ್ನಿ ಮಂಟಪದಿಂದ ಪಲ್ಲಕ್ಕಿ ಮಹೋತ್ಸವ ಶ್ರೀ ದಾನೇಶ್ವರಿ ಕಾಲೋನಿ ಸಿಂದಗಿ ರಸ್ತೆಯಿಂದ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ದಾನಮ್ಮದೇವಿ ದೇವಸ್ಥಾನಕ್ಕೆ ತಲುಪುವದು ಅದೇ ದಿನ ಸಾಯಂಕಾಲ ೪ ಗಂಟೆಗೆಧರ್ಮಸಭೆ ಹಾಗೂ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಂತರ ಸಾಯಂಕಾಲ ೮ ಘಂಟೆಗೆ ಶ್ರೀ ವಿರೇಶ ವಾಲಿ ಕಲಾತಂಡ ವಿಜಯಪುರ ಇವರಿಂದ ಹಾಸ್ಯ ಹಾಗೂ ರಸಮಂಜರಿ ಕಾರ್ಯಕ್ರಮ ಜರುಗುವದು.
ಅನೇಕ ಪೂಜ್ಯರು ಮತ್ತು ಶಾಸಕ ಯಶವಂತರಾಯಗೌಡ ಪಾಟೀಲರು, ಸಂಸದ ರಮೇಶ ಜಿಗಜಿಣಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಬುರಕುಲೆ, ಡಾ|| ಮಲ್ಲಿಕಾರ್ಜುನ ಬಿರಾದಾರ, ಶಿವಾನಂದ ತಾಂಬೆ, ದಾನಯ್ಯಾ ಮಠಪತಿ, ರಾಜು ತಾಂಬೆ, ಪ್ರಶಾಂತ ಗುಂದಗಿ ,ರಾಜೇಶ್ವರಿ ಕ್ಷತ್ರಿ, ಶಶಿಕಲಾ ಬೆಟಗೇರಿ, ಪೂಜಾ ಏಳಗಿ, ಶ್ಯಾಮಲಾ ಬಗಲಿ, ಶೋಭಾ ದೇಸಾಯಿ , ಭಾರತಿ ಪತ್ರಿಮಠ, ಮಂಗಲಾ ಲಾಳಸಂಗಿ, ಸೀತಲ ನಾಡಗೌಡ, ಬೌರಮ್ಮ ಬಿರಾದಾರ,ಅನೀತಾ ಗಣಿ ಮತ್ತಿತರಿದ್ದರು.
ನಾಳೆಯಿಂದ ಶ್ರೀ ದಾನಮ್ಮಾದೇವಿ ೪ ನೇ ವರ್ಷದ ಜಾತ್ರಾ ಮಹೋತ್ಸವ


