ಹನಗುಂದ: ತಾಲೂಕಿನ ಧನ್ನೂರ ಗ್ರಾಮದ ಶ್ರೀ ಶಾರದಾ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆ ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸಳೆದರು.ಮಅಂಗವಾಗಿ ನವೆಂಬರ್ ೧೪ ಇದು ಬರಿ ಕ್ಯಾಲೆಂಡರ್‌ನಲ್ಲಿ ಬರುವ ದಿನವಲ್ಲ. ಅದು ಪ್ರತಿ ಮಗುವಿನಲ್ಲೂ ಇರುವ ಮುಗ್ಧತೆ, ಸಂತೋ?ವನ್ನು ಆಚರಿಸುವ ದಿನವಾಗಿದೆ. ಚಾಚಾ ನೆಹರೂ ಅವರಿಗೆ ಮಕ್ಕಳೆಂದರೆ ಬಲು ಪ್ರೀತಿ. ಮಕ್ಕಳೇ ದೇಶದ ಭವಿ? ಎನ್ನುತ್ತಿದ್ದರು. ಹೀಗಾಗಿ ಅವರ ಜನ್ಮದಿನವನ್ನೇ ಮಕ್ಕಳ ದಿನವನ್ನಾಗಿ ಆಚರಿಸುವ ಪರಿಪಾಠ ಬೆಳೆದು ಬಂದಿದೆ. ನಮ್ಮ ಜೀವನದಲ್ಲಿ ಖುಷಿ ತುಂಬುವ ಚಿಕ್ಕ ಮಕ್ಕಳಿಗೆ ಪ್ರೀತಿ, ಪ್ರೋತ್ಸಾಹ ಮತ್ತು ಸಕಾರಾತ್ಮಕತೆಯನ್ನು ವ್ಯಕ್ತಪಡಿಸಲು ಈ ದಿನ ಮೀಸಲಾಗಿದೆ. ಮಕ್ಕಳಿಗ? ಸೀಮಿತವಲ್ಲ. ದೊಡ್ಡವರಿಗೂ ಅವರ ಬಾಲ್ಯದ ದಿನಗಳನ್ನು ಒಂದು ಕ್ಷಣ ಮೆಲುಕು ಹಾಕಿ, ಹಿಂದೆ ಕಳೆದ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳಲು ಇರುವ ದಿನವೂ ಕೂಡಾ ಹೌದು. ಅಂತಹ ದಿನದಂದು ಪುಟ್ಟ ಪುಟ್ಟ ಪುಟಾಣಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ಭಾರತ ನೆಲದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಇಲ್ಲೀನ ಆಚಾರ, ವಿಚಾರ, ಪ್ರಾಚೀನ ಉಡುಗೆಯನ್ನು ಪ್ರತಿಬಿಂಬಿಸುವ ಜೊತೆಗೆ ಈ ಆಧುನಿಕ ಕಾಲಘಟ್ಟದಲ್ಲಿ ಭಾರತೀಯಪುರ? ಮತ್ತು ನಾರಿಯರ ಉಡುಗೆ ತೊಡುಗೆಗಳು ಮಾಯವಾಗಿ ಪಾಶ್ಚಿಮಾತ್ಯ ದೇಶಗಳ ಸಮವಸ್ತ್ರಕ್ಕೆ ಮಾರುಹೋಗಿ ಈ ಮಣ್ಣಿನ ಹೆಣ್ಣು ಮಕ್ಕಳ ಗೌರವಿತ ಸಂಪ್ರಾದಯಕ ಉಡುಗೆ ತೊಡುಗೆ ಮಹತ್ವಗಳೇನಿದೆ ಎನ್ನುವುದನ್ನು ಸಾಂಪ್ರದಾಯಿಕ ಪುರು?ರ ಉಡುಗೆಗಳೇನು ಎನ್ನುವುದನ್ನು ಈ ಪುಟ್ಟ ಮಕ್ಕಳು ಉಡುಗೆ ತೊಡುಗೆ ತೊಟ್ಟು ನಿಜವಾದ ಭಾರತೀಯ ಉಡುಗೆಯ ತೋರಿಸುವ ಕಾರ್ಯವನ್ನು ಮಾಡಿದ್ದಾರೆ. ನಿಜಕ್ಕೂ ಇಲ್ಲಿನ ಶಿಕ್ಷಕರ ಈ ನೆಲದ ಗುಣ ಧರ್ಮದ ಕುರಿತು ಮಕ್ಕಳಲ್ಲಿ ಜೀವ ತುಂಬುವ ಕೆಲಸ ಮಾಡಿದ್ದು ನಿಜಕ್ಕೂ ಶ್ಲಾಘನೀಯ.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಮಲ್ಲಯ್ಯ ಹಿರೇಮಠ, ಆಡಳಿತ ಅಧಿಕಾರಿ ರಾಮು ಲಿಂಗನಹಳ್ಳಿ, ಮುಖ್ಯೋಪಾಧ್ಯಾಯ ಮಹಾದೇವಿ ಗಡ್ಡಿಮಠ, ಶಿಕ್ಷಕರಾದ ಮಹೇಶ ಹಿರೇಮಠ, ಭಾರತಿ ಹಳ್ಳೂರ, ನಾಗಮ್ಮ ಮಾದರ, ಮಲ್ಲಮ್ಮ ಸೇರಿದಂತೆ ಅನೇಕರು ಶಿಕ್ಷಕರಿದ್ದರು.


