ಸಿಂದಗಿ: ಕನಕದಾಸರು ಅಂದಿನ ಸಮ ಸಮಾಜದ ಹರಿಕಾರರಾಗಿದ್ದರು ಎಂದು ಪ್ರಯೋಗಾಲಯ ಅಧಿಕಾರಿ ರಾಜಶೇಖರ ನರಗೋದಿ ಹೇಳಿದರು.
ಶನಿವಾರದಂದು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಸಂತ ಕನಕದಾಸರ ಜಯಂತಿಯನ್ನುದ್ದೇಶಿ ಮಾತನಾಡಿ, ದಾಸರ ಹುಟ್ಟಿದಾಗ ತಿಮ್ಮಪನಾಯನಾಗಿ ಬೆಳದಾಗ ಕನಕನಾಯಕನಾಗಿ ಕೊನೆಗೆ ಕನಕದಾಸರಾಗಿ ಪರಿವರ್ತನೆಯಾದರು ತಾವು ಪರಿವರ್ತನೆಯಾಗುವುದಲ್ಲದೇ ದಾಸ ಸಾಹಿತ್ಯದ ಮೂಲಕ ಸಮಾಜವನ್ನು ಪರಿವರ್ತಿಸಿದರು ಎಂದರು.
ಈ ವೇಳೆ ಆಯುಷ್ ವೈಧ್ಯಾಧಿಕಾರಿ ಡಾ.ಮಹಾಂತೇಶ ಹಿರೇಮಠ, ಆಪ್ತ ಸಮಾಲೋಚನ ಎಂ.ಪಿ.ಸಾಗರ ಮಾತನಾಡಿದರು.
ಸುರೇಶ ಪಾಟೀಲ, ಲವ ಗಾಣಿಗೇರ, ಜಗದೀಶ ಡೋಣುರ, ನಿಂಗರಾಜ ಹಿರೇಕುರುಬರ, ಮಹಾಂತೇಶ ಹಿರೇಕುರುಬರ, ಡಾ.ವಿಜಯ ಮಹಾಂತೇಶ ಡಾ.ರಮೇಶ ರಾಠೋಡ, ಸುನೀಲ ನೇಮಶೆಟ್ಟಿ, ಸಂತೋಷ ಬುಳ್ಳಾ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿದ್ದರು.


