ಕಾರ್ಯನೀರತ ಪತ್ರಕರ್ತರ ಸಂಘದ ಚುನಾವಣೆ : ಅಶೋಕ ಯಡಳ್ಳಿ ಮತಯಾಚನೆ

Pratibha Boi
ಕಾರ್ಯನೀರತ ಪತ್ರಕರ್ತರ ಸಂಘದ ಚುನಾವಣೆ : ಅಶೋಕ ಯಡಳ್ಳಿ ಮತಯಾಚನೆ
WhatsApp Group Join Now
Telegram Group Join Now

ಇಂಡಿ: ಕರ್ನಾಟಕ ಕಾರ್ಯನೀರತ ಪತ್ರಕರ್ತರ ಸಂಘ ರಿ.ಬೆಂಗಳೂರು ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಇದೇ.ನ ೯ರಂದು ಜರುಗಲಿರುವ ಚುನಾವಣೆ ಪ್ರಚಾರಾರ್ಥವಾಗಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಟಿವಿ೯ ವಿಜಯಪುರ ಜಿಲ್ಲಾ ವರದಿಗಾರ ಅಶೋಕ ಯಡಳ್ಳಿ ಅವರು ಜಿಲ್ಲಾ ಪತ್ರಿಕಾ ಮಿತ್ರರೊಂದಿಗೆ ಪಟ್ಟಣದ ನೌಕರರ ಸಭಾ ಭವಭನದಲ್ಲಿ ಇಂಡಿ ಕಾನಿಪ ಸಂಘದ ಸರ್ವ ಸದಸ್ಯರು ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಅಶೋಕ ಯಡಳ್ಳಿ ಮತಯಾಚನೆ ಮಾಡಿ ಮಾತನಾಡಿ ಈಗಾಗಲೆ ಪತ್ರಕರ್ತರ ನೊವು ನಲಿವುಗಳ ಬಗ್ಗೆ ನನಗೆ ಸಂಪೂರ್ಣ ಪರಿಜ್ಞಾನವಿದ್ದು ಅವರ ಕಷ್ಟು ಸುಖಗಳಿಗೆ ಸ್ಪಂದಿಸುತ್ತಾ ಬಂದಿದ್ದೆನೆ. ಹಾಗೆ ನಮ್ಮ ಸಂಘದ ಎಳಿಗೆಗಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಅವುಗಳನ್ನು ಕಾರ್ಯ ರೂಪಕ್ಕೆ ತರಬೇಕು ಎಂಬ ಚಿಂತನೆ ಇದೆ. ಗ್ರಾಮಿಣ ಭಾಗ ಪತ್ರಿಕಾ ಮಿತ್ರರೊಂದಿಗೆ ನಿಕಟ ಸಂಪರ್ಕದಲ್ಲಿದ್ದುಕೊಂಡು ನಿಮ್ಮ ಆಗು ಹೊಗುಗಳ ಬಗ್ಗೆ ನಮ್ಮ ಸಂಘದಲ್ಲಿ ಚರ್ಚಿಸುಚ ಮೂಲಕ ಕಾರ್ಯ ರೂಪಕ್ಕೆ ತರಲು ಎಲ್ಲರೊಂದಿಗೆ ಒಟ್ಟಾಗಿ ಶ್ರಮಿಸುತ್ತೆವೆ. ಆದ್ದರಿಂದ ತಾವು ನನಗೆ ಮತ ನೀಡುವ ಮೂಲಕ ಅವಕಾಶ ಮಾಡಿ ಕೊಡಬೇಕು ಎಂದು ಮನಿ ಮಾಡಿ ಮತಯಾಚನೆ ಮಾಡಿದರು.
ಮಾಜಿ ಕಾನಿಪ ಸಂಘದ ಅಧ್ಯಕ್ಷರಾದ ಶರಣು ಮಸಳಿ, ರಾಜು ಕೊಂಡಗೂಳಿ ಹಾಗೂ ಇಂದು ಶೇಖರ ಮಣ್ಣೂರ, ಶಶಿಕಾಂತ ಮೇಂಡೆಗಾರ, ದೇವೆಂದ್ರ ಹೇಳವರ. ಯು.ಟಿ.ಕೋಳೆಕರ ಮುಂತಾದವರು ಮಾತನಾಡಿ ಕಾನಿಪ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಶೋಕ ಯಡಳ್ಳಿ ಪರವಾಗಿ ಮತಯಾಚಿಸಿ ಕಳೇದ ಸುಮಾರು ೧೮ ವರ್ಷಗಳ ಕಾಲ ವಿಜಯಪುರ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು ನಮ್ಮ ಸಂಘದ ಎಳಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೆ ಇಲ್ಲಿಯವರೆಗೆ ಸಂಘದ ಯಾವುದೆ ಚುನಾವಣೆಯಗಳಲ್ಲಿ ನಿಲ್ಲದೆ ಇದ್ದರು ಸಹ ಸಕ್ರಿಯವಾಗಿ ನಮ್ಮ ಸಂಘದ ಚುನಾವಣೆಗಳಲ್ಲಿ ಎಲ್ಲರ ಜೊತೆ ಬೆರೆತು ಬೆಂಬಲ ನೀಡುತ್ತಾ ಬಂದಿದ್ದಾರೆ. ಹಾಗಾಗಿ ಇವರನ್ನು ಈ ಬಾರಿ ಕಾನಿಪ ಸಂಘದ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಸದಾಶಯದಿಂದ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿದೆ. ಆದ್ದರಿಂದ ಎಲ್ಲ ನಮ್ಮ ಕಾನಿಪ ಸಂಘದ ಸರ್ವ ಸದಸ್ಯರು ಅಶೋಕ ಯಡಳ್ಳಿಯವರಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ರಾಜಕುಮಾರ ಚಾಬುಕಸವಾರ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ಪತ್ರಿಕಾ ಮಿತ್ರರಾದ ಸಿತಾರಾಮ ಕುಲಕರ್ಣಿ, ಪ್ರಕಾಶ ಬೇಣ್ಣುರ, ಸಮೀರ ಇನಾಮದಾರ, ಗುರುರಾಜ ಗದ್ದನಕೇರಿ, ಮೋಹನ ಕುಲಕರ್ಣಿ, ರಾಹುಲ ಆಪ್ಟೆ, ಸುಧಿಂದ್ರ ಕುಲಕರ್ಣಿ, ಕಾನಿಪ ಇಂಡಿ ಘಟಕದ ಅದ್ಯಕ್ಷ ಸಬುಶಾಮಾ ಹವಾಲ್ದಾರ, ಉಮೇಶ ಬಳಬಟ್ಟಿ, ಸದ್ದಾಮ ಜಮಾದಾರ, ಯಲಗೊಂಡ ಬೇವನೂರ, ಲಕ್ಷ್ಮಣ ಹಿರೇಕುರಬರ, ಅರವಿಂದ ಖಡೆಖಡೆ, ಭೀರಪ್ಪ ಹೊಸುರ, ಸಿದ್ದು ಹತ್ತಳ್ಳಿ, ಶಂಕರ ಜಮಾದಾರ, ಅಶೋಕ ಕುಲಕರ್ಣಿ, ಲಾಲಸಿಂಗ ರಾಠೋಡ, ಅಲ್ಲಬಾಕ್ಷ ಗೊರೆ, ನಾಗರಾಜ ಆಸಂಗಿ, ಆನಂದ ಗಣಾಚಾರಿ, ಹಸನ ಮುಜಾವರ, ಜಹಾಂಗಿರ ದೇಸಾಯಿ, ಪ್ರವಿಣ ಮಠ, ಸೇರಿದಂತೆ ಅನೇಕರು ಇದ್ದರು.

 

WhatsApp Group Join Now
Telegram Group Join Now
Share This Article