ಹುನಗುಂದ; ಕಬ್ಬು ಬೆಳೆದ ರೈತರು ಟನ್ನ ಕಬ್ಬಿಗೆ ೩೫೦೦/- ಗಳನ್ನು ಸರ್ಕಾರ ಮತ್ತು ಕಾರ್ಖಾನೆ ಮಾಲಿPರು ಒಮ್ಮತದಿಂದ ದರ ನಿಗದಿ ಮಾಡಿ ಘೋಷಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಭ್ರಷ್ಟಚಾರ ನಿಮೂಲನೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೈನ ರಾಜ್ಯ ಹೋರಾಟ ಸಂಘಟನೆಯು ರಸ್ತೆ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ ಗ್ರೇಡ್-೨ ತಹಶೀಲ್ದಾರ ಮಹೇಶ ಸಂದಿಗವಾಡ ಅವರಿಗೆ ಮನವಿ ಸಲ್ಲಿಸಿದರು. ಶುಕ್ರವಾರ ಮದ್ಯಾಹ್ನ ೧೨ ಘಂಟೆಗೆ ನಗರದ ಶ್ರೀ ವಿಜಯ ಮಹಾಂತೇಶ ವೃತ್ತದಲ್ಲಿ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆಯ ನೇತೃತ್ವ ವಹಿಸಿದ ಸಂಘಟನೆಯ ಉಪಾಧ್ಯಕ್ಷ ನಾಗರಾಜ ಹೂಗಾರ ಮಾತನಾಡಿ ಈಗಾಗಲೆ ರಾಜ್ಯಾದ್ಯಂತ ಕಳೆದ ತಿಂಗಳಿಂದ ಕಬ್ಬಿನ ದರ ರೂ. ೩೫೦೦/- ನಿಗದಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಈವರೆಗೆ ಯಾವುದೆ ಸರ್ಕಾರ ಕ್ಯಾರೆ ಎನ್ನದೆ ತಿರುಗಿಯೂ ಸಹಿತ ನೋಡಿಲ್ಲ. ತಮ್ಮ ರಾಜಕೀಯ ಹುಚ್ಚಾಟದಲ್ಲಿ ತೊಡಗಿ ದೇಶಕ್ಕೆ ಅನ್ನ ಕೊಡುವ ರೈತರನ್ನು ನಿರ್ಲಕ್ಷಿಸಿ ಮರೆತಿದ್ದಾರೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ…॒॒ಎ॒ಂಬಂತೆ ಈಗ ಕಾಲಾವಕಾಶದ ಜೊತೆಗೆ ಸರ್ಕಾರ ರೈತರ ತಾಳ್ಮೆಯನ್ನು ಕೆಣಕುತ್ತಿದೆ. ತಕ್ಷಣ ಯಾವುದೆ ಮುಲಾಜ ಕಾಯದೆ ಟನ್ ಕಬ್ಬಿಗೆ ರೂ. ೩೫೦೦/- ಘೋಷಿಸಬೇಕು. ತಪ್ಪಿದರೆ ರಾಜ್ಯಾದ್ಯಂತ ಈ ಪ್ರತಿಭಟನೆ ಮತ್ತಷ್ಟು ಉಗ್ರ ರೂಪ ತಾಳುತ್ತದೆ ಎಂದು ನಾಗರಾಜ ಹೂಗಾರ ಸರ್ಕಾರವನ್ನು ಎಚ್ಚರಿಸಿದರು.
ಮಹಾಲಿಂಗಪ್ಪ ಅವಾರಿ, ವೀರನಗೌಡ ಪಾಟೀಲ, ಮಹಾಂತಪ್ಪ ವಾಲೀಕಾರ, ರಹಿಮಾನಸಾಬ ಮುಲ್ಲಾ, ಹಸನಪ್ಪ ಪೂಜಾರಿ, ಮಂಜುನಾಥ ಕುರಿ, ಖಾಜೇಸಾಬ ಮುಲ್ಲಾ, ಮಲ್ಲಪ್ಪ ಮೇಟಿ, ರುದ್ರಪ್ಪ ಬೆನಕನಡೋಣಿ ಮತ್ತು ಭೀರ್ಪ ಕುರಿ ಸೇರಿದಂತೆ ಇತರರು ಭಾಗವಹಿಸಿದ್ದರು. ಭಾಕ್ಸ್; ರಾಜ್ಯಾದ್ಯಂತ ಶುಕ್ರವಾರ ತೀವ್ರ ಸ್ವರೂಪ ಪಡೆದ ಕಬ್ಬಿನ ಬೆಲೆ ಹೆಚ್ಚಿಸುವಂತೆ ನಡೆಸಿದ ರೈತರ ಪ್ರತಿಭಟನೆ ಹೋರಾಟದ ಬಿಸಿಯೂ ಹುನಗುಂದ ತಾಲೂಕಿಗೂ ತಟ್ಟಿದೆ. ನಗರಕ್ಕೆ ಮತ್ತು ಗ್ರಾಮೀಣ ಪ್ರದೇಶಕ್ಕೆ ಕೆಲವು ಬಸ್ಸುಗಳು ಹೋದರೆ ಕೆಲವು ಸಾರಿಗೆಗಳು ನಿಲ್ದಾಣದಲ್ಲಿಯೆ ನಿಂತಿದ್ದವು. ಇದರಿಂದ ಹೋಗಿ ಬರುವ ಪ್ರಯಾಣಿಕರು ಹರಸಾಹಸ ಪಡುವ ಜೊತೆಗೆ ತೊಂದರೆಗಳನ್ನು ಅನುಭವಿಸುವಂತಾಗಿತ್ತು. ಇದರಿಂದ ನಗರದಲ್ಲಿ ವ್ಯಾಪಾರ ವಹಿವಾಟು ಎಂದಿನಂತಿರದೆ ಜನಜಂಗುಳಿಯಲ್ಲಿ ಕಡಿಮೆ ವ್ಯತ್ಯಾಸ ಕಾಣುವಂತಿತ್ತು.
ಕಬ್ಬಿನ ದರ ರೂ. ೩೫೦೦/- ನಿಗದಿಗೆ ಒತ್ತಾಯ : ಪ್ರತಿಭಟನೆ


