Pratibha Boi
WhatsApp Group Join Now
Telegram Group Join Now
ಅಥಣಿ : ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸುವ ಉದ್ದೇಶದಿಂದ ಅಥಣಿಯ ಸಿದ್ದೇಶ್ವರ ದೇವಸ್ಥಾನದಿಂದ ಮಂಗಸೂಳಿ ಮಲ್ಲಯ್ಯ ದೇವಸ್ಥಾನದವರೆಗೆ ದಿನಾಂಕ 31/11/2025  ರಂದು  ಬೃಹತ್ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಥಣಿ ತಾಲೂಕ ಜಯ ಕರ್ನಾಟಕ ಸಂಘಟನೆ ತಾಲೂಕ ಅಧ್ಯಕ್ಷ ಆಕಾಶ ನಂದಗಾವ ಹೇಳಿದರು.
 ಅವರು ಅಥಣಿ ಪಟ್ಟಣದಲ್ಲಿ ಪತ್ರಿಕಾ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಥಣಿ ತಾಲೂಕು ಮಹಾರಾಷ್ಟ್ರ ಗಡಿ ಭಾಗವನ್ನು ಹೊಂದಿದ್ದು ಗಡಿನಾಡಿನ ಹಳ್ಳಿಗಳಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಕನ್ನಡ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ನವಂಬರ್ 1 ಕನ್ನಡ ರಾಜ್ಯೋತ್ಸವವನ್ನು ಪ್ರತಿ ಹಳ್ಳಿಗಳಲ್ಲೂ ವಿಜೃಂಭಣೆಯಿಂದ ಆಚರಿಸುವಂತೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 500 ಕ್ಕೂ ಮಿಕ್ಕಿ ಬೈಕ್ ಗಳ ಮೂಲಕ ಬೃಹತ್ ರ್ಯಾಲಿ  ಹಮ್ಮಿಕೊಳ್ಳ ಲಾಗಿದೆ. ಈ ವೇಳೆ ಕನ್ನಡ ರಹಿತ ಮರಾಠಿ ನಾಮಫಲಕ , ನಾಮಫಲಕ ಬ್ಯಾನರ್, ಬಂಟಿಂಗ್ಸ್ ಯಾವುದೇ ಇದ್ದರೂ ತೆಗೆದುಹಾಕಲಾಗುವುದು ಈ ಕುರಿತು ಈಗಾಗಲೇ ಗಡಿ ಭಾಗದಲ್ಲಿರುವ ಹಾಗೂ ತಾಲೂಕಿನ ಗ್ರಾಮ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು  ಸಕಲ ಸಿದ್ಧತೆ ಮಾಡಿಕೊಂಡಿದ್ದು ಈ ಬಾರಿ ಬೃಹತ್ ಹಾಗೂ ಅಭೂತಪೂರ್ವ ರಾಜ್ಯೋತ್ಸವ ಜಾಗೃತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ತಾಲೂಕು ಉಸ್ತುವಾರಿ ರವಿ ಬಡಕಂಬಿ ಮಾತನಾಡಿ ಗಡಿ ಭಾಗದಲ್ಲಿ ಕೆಲವು ಹಳ್ಳಿಗಳಲ್ಲಿ ಶೇಕಡಾ 60ರಷ್ಟು ಮರಾಠಿ ಪ್ರಭಾವ ಎದ್ದು ಕಾಣುತ್ತಿದೆ. ಇಲ್ಲೆಲ್ಲ ಕನ್ನಡದ ಕಡೆಗಣನೆ ಆಗುತ್ತಿದ್ದು ಕನ್ನಡ ಜಾಗೃತಿಯ ಜೊತೆಗೆ ಗಡಿ ಭಾಗದಲ್ಲಿರುವ ಕನ್ನಡ ರಹಿತ ನಾಮಫಲಕಗಳನ್ನು ತೆಗೆದುಹಾಕಲಾಗುವುದು ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವುದ ಕ್ಕಾಗಿ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳ ಲಾಗಿದೆ ಎಂದು ಹೇಳಿದರು.
 ಈ ವೇಳೆ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ಮಾಧ್ಯಮ ಪ್ರತಿನಿಧಿ ಸಂತೋಷ್ ಬಡಕಂಬಿ ಮಾತನಾಡಿ ಈ ಬಾರಿ ಗಡಿನಾಡಿನಲ್ಲಿ ಕನ್ನಡ ಕಲರವ ಮೂಡಿಸುವ ದೃಷ್ಟಿಯಿಂದ ವಿಭಿನ್ನವಾಗಿ ಬೈಕ್  ರ್ಯಾಲಿಯನ್ನ ಹಮ್ಮಿಕೊಳ್ಳಲಾಗಿದೆ. ಈ ವೇಳೆ ವಿಶೇಷವಾಗಿ ಕನ್ನಡ ಜಾಗೃತಿಗಾಗಿ ನಾಡು ನುಡಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
 ಇವಳೆ ಜೈ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ  ಆಕಾಶ ನಂದಗಾಂವ, ತಾಲೂಕು ಉಸ್ತುವಾರಿ  ರವಿ ಬಡಕಂಬಿ, ಮಾಧ್ಯಮ ಪ್ರತಿನಿಧಿ  ಸಂತೋಷ ಬಡಕಂಬಿ,ಹಣಮಂತ ಕೊಳಗೇರಿ ಪ್ರದಾನ ಕಾರ್ಯದರ್ಶಿ, ಸಿದ್ದರಾಯ ತಾಂವಶಿ ಕಾರ್ಯದರ್ಶಿ,ಸೊಯಬ ಮುಲ್ಲಾ , ರಾಮನಗೌಡ ಪಾಟೀಲ್,  ಹಣಮಂತ ಬೋಸಲೇ,  ಸಿದ್ದಾರೂಢ ಬಣ್ಣದ, ಅಭಿಷೇಕ್ ಇಚಲಕರಂಜಿ,ಆಕಾಶ ದರೂರ  ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article