ಯರಗಟ್ಟಿ: ಸಮೀಪದ ಸೊಪ್ಪಡ್ಲ ಗ್ರಾಮದ ಶ್ರೀ ಮಾರುತೇಶ್ವರ ಮಂದಿರದ ಆವರಣದಲ್ಲಿ ಗುರುವಾರ ವಾರದ ಸಂತೆಗೆ ಚಾಲನೆ ನೀಡಲಾಯಿತು.
ಗ್ರಾಪಂ ಅಧ್ಯಕ್ಷ ಸತ್ಯವ್ವ ಗೊರಗುದ್ದಿ ವಾರದ ಸಂತೆ ಉದ್ಘಾಟಿಸಿ,”ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ವಾರದ ಸಂತೆಯಲ್ಲಿ ತರಕಾರಿ, ಕಿರಾಣಿ ಸಾಮಗ್ರಿ, ಬಟ್ಟೆ, ಸಿದ್ಧಪಡಿಸಿದ ಉಡುಪು, ಪಾದರಕ್ಷೆ ಮುಂತಾದ ವಸ್ತುಗಳನ್ನು ಮಾರಾಟ ಮಾಡಲು ಯರಗಟ್ಟಿ, ಸವದತ್ತಿ, ರಾಮದುರ್ಗ, ಗೋಕಾಕ, ಲೋಕಾಪೂರ ಮುಂತಾದ ನಗರಗಳಿಂದ ವ್ಯಾಪಾರಸ್ಥರು ಬರಲಿದ್ದು, ಅವರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು”ಎಂದು ತಿಳಿಸಿದರು.
ಭಾಗೋಜಿಕೊಪ್ಪದ ಪೂಜ್ಯ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳು ಮಾತನಾಡಿ,”ಗುರುವಾರ ಸಂತೆಗೆ ಆಗಮಿಸುವ ಕುರಿತು ಸುತ್ತಮುತ್ತಲಿನ ನಗರ, ಪಟ್ಟಣ ಗ್ರಾಮಗಳ ವ್ಯಾಪಾರಸ್ಥರೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು, ಗ್ರಾಪಂ ಅಧ್ಯಕ್ಷ ಸತ್ಯವ್ವ ಗೋರಗುದ್ದಿ ಅವರ ಆಸಕ್ತಿಯಿಂದಾಗಿ ವಾರದ ಸಂತೆ ಆರಂಭಗೊಂಡಿದೆ”ಎಂದರು.
ಹಿರಿಯ ಮುಖಂಡರಾದ ಮಾಜಿ ಸೈಸನೀಕ ಬಸವರಾಜ ಹರಳಿ, ಪಿಡಿಓ ಆಯ್. ಎಮ್. ಮುಲ್ಲಾ, ಅಮಯ್ಯ ಹೊಸಮಠ, ಶಾಂತಯ್ಯ ಹೊಸಮಠ, ಎಮ್. ಬಿ. ಚಲಕಂಢಿ, ಮಹಾದೇವಪ್ಪ ಹುರಕಡ್ಲಿ, ಚಂದ್ರಶೇಖರ ಹರಳಿ, ಶಿವಪುತ್ರಪ್ಪ ಕಾಶನ್ನವರ, ಈರಣ್ಣಾ ಪಟ್ಟಣಶೆಟ್ಟಿ, ಆಯ್. ಕೆ. ಗೌಡರ, ಮಹಾಮತೇಶ ಚಿಲಕಂಡಿ, ಕುಮಾರ ಹಿರೇಮಠ, ನಾಗಪ್ಪ ಮೆಟಗುಡ್ಡ, ಸುರೇಶ ಗೌಡರ, ಯಲ್ಲಪ್ಪ ಬಡೇನ್ನವರ, ಮಹಾದೇವ ಯಂಡ್ರಾವಿ, ಬಸವರಾಜ ಬಡೆನ್ನವರ, ಎಮ್. ಎಫ್. ನದಾಫ, ರವಿ ಸುಳ್ಳನವರ ಸೇರಿದಂತೆ ಮುಂತಾದವರು ಇದ್ದರು.


