ಹುಲಜಯಂತಿ ಜಾತ್ರೆ : ಸಾರಿಗೆ ಸಂಸ್ಥೆ ೨೨ ಲಕ್ಷ ರೂ ಆದಾಯ

Pratibha Boi
ಹುಲಜಯಂತಿ ಜಾತ್ರೆ : ಸಾರಿಗೆ ಸಂಸ್ಥೆ ೨೨ ಲಕ್ಷ ರೂ ಆದಾಯ
WhatsApp Group Join Now
Telegram Group Join Now

ಇಂಡಿ : ಇಂದು ಮುಕ್ತಾಯಗೊಂಡ ಹುಲಜಯಂತಿ ಜಾತ್ರೆಗೆ ಇಂಡಿ ಘಟಕದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ೨೨ ಲಕ್ಷ ರೂ ಆದಾಯವಾಗಿದೆ ಎಂದು ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ ತಿಳಿಸಿದ್ದಾರೆ.
ಇಂದು ಹುಲಜಂತಿ ಜಾತ್ರೆ ನಿಮಿತ್ಯ ಹೋದ ಬಸ್ಸಿನ ಕೊನೆಗೆ ಬಂದ ಬಸ್ಸಿಗೆ ಪೂಜೆ ಸಲ್ಲಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂಡಿಯಿಂದ ಹುಲಜಯಂತಿಗೆ ೪೫ ಬಸ್ಸುಗಳು ೨೪೧ ಟ್ರೀಪ್ ಗಳು ಸೇರಿ ಒಟ್ಟು ೨೨ ಲಕ್ಷ ಆದಾಯ ಬಂದಿದ್ದು ಇದು ವಿಜಯಪುರ ಜಿಲ್ಲೆಯಲ್ಲಿ ಡಿಪೋಗಳಲ್ಲಿ ಹುಲಜಂತಿ ಜಾತ್ರೆಗೆ ಇಂಡಿ ಡಿಪೋ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.
ಇಂಡಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಿಂದ ಅಂದಾಜು ೪೦ ಸಾವಿರಕ್ಕೂ ಅಧಿಕ ಪ್ರಾಯಾಣಿಕರು ಪ್ರಯಾಣ ಮಾಡಿರುವದಾಗಿ ತಿಳಿಸಿದ್ದಾರೆ.
ಆನಂದ ಬಡಿಗೇರ, ಎಂ.ಆರ್.ಪಾರ್ಥನಳ್ಳಿ, ಎನ್.ಎಸ್.ಹೊಟಗೊಂಡ, ಎಲ್,ಆರ್.ರಾಠೋಡ, ಜಿ.ಎಂ.ಸೋನಾವನೆ,ಟಿ.ಕೆ.ರಾಠೋಡ, ವಾಯ್.ಬಿ.ಬಿಸೆ, ಗಂಗಾಧರ ಸಾಲೇಗಾಂವ , ರಾವುತಪ್ಪ ಹೊನಕಟ್ಟಿ, ಜಿ.ಕೆ.ಸರಸಂಬಿ ಮತ್ತಿತರಿದ್ದರು.

WhatsApp Group Join Now
Telegram Group Join Now
Share This Article