ಸಂಕೇಶ್ವರ : ದೀಪಾವಳಿ ಹಬ್ಬದ ನಿಮಿತ್ಯವಾಗಿ ಶ್ರೀ ಮತಿ ಗೋದಾಬಾಯಿ ಕರನಿಂಗ ಮೆಮೊರಿಯಲ್ ಪೌಂಡೇಶನ್ ವತಿಯಿಂದ ಪಟ್ಟಣದಲ್ಲಿನ
ಜೋಪಡಿಯಲ್ಲಿ ವಾಸಿಸುವ ನಿವಾಸಿಗಳಿ ಸಿಹಿ ಬಾಕ್ಸ್ ಗಳನ್ನು ವಿತರಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.ನಿಖಿಲ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಿಖಿಲ್ ಗಂಗರೆಡ್ಡಿ ಅವರ ನೇತೃತ್ವದಲ್ಲಿ ಜೋಪಡಿ ಮನೆಗಳಲ್ಲಿ ವಾಸಿಸುವ ನಿವಾಸಿಗಳಿಗೆ ಹಾಗೂ ಹೊರ ರಾಜ್ಯದಿಂದ ಬಂದ ರಾಷ್ಟ್ರೀಯ ಹೆದ್ದಾರಿಯ ಕೂಲಿ ಕಾರ್ಮಿಕರಿಗೆ
ಸುಮಾರು 250 ಸಿಹಿ ಬಾಕ್ಸ್ ಗಳನ್ನು ವಿತರಿಸುವ ಮೂಲಕ ದೀಪಾವಳಿ ಹಬ್ಬ ಆಚರಿಸಿದರು.
ಶ್ರೀ ಮತಿ ಗೋದಾಬಾಯಿ ಕರನಿಂಗ ಮೆಮೊರಿಯಲ್ಪೌಂಡೇಶನವು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆ ಪಡೆಯುತ್ತಿದೆ.ಈ ಸಂಧರ್ಭದಲ್ಲಿ ಫೌಂಡೇಶನ್ ಸದಸ್ಯರಾದ ಕಿರಣ ಕಾಂಬಳೆ, ಕಾಶಿನಾಥ ಕರಾಳೆ, ಪ್ರವೀಣ ಮಗದುಮ್ಮ, ಮೌಲಾ ಖನದಾಳೆ, ರಾಜು ನಡಮನಿ ಹಾಜರಿದ್ದರು