ಇಂಡಿ : ತಾಯಿ ಹೆಸರಲ್ಲಿ ಒಂದು ಗಿಡ ( ಏಕ ಪೇಡ್ ಮಾ ಕೆ ನಾಮ ) ಅಭಿಯಾನದಡಿ ಐದು ಸಾವಿರ ಸಸಿಗಳನ್ನು ನೆಡುವ ಮೂಲಕ ಶೈಕ್ಷಣಿಕ ಜಿಲ್ಲೆ ವಿಜಯಪುರದಲ್ಲಿ ಇಂಡಿ ತಾಲೂಕು ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.
ಜೂನ ೫ ರ ವಿಶ್ವ ಪರಿಸರ ದಿನದಿಂದ ಹಸಿರು ಹೆಚ್ಚಿಸುವ ಉದ್ದೇಶದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕ ಪೇಡ ಮಾ ಕೆ ನಾಮ ಆರಂಭಿಸಿ ೪ ತಿಂಗಳಿಂದ ತಾಲೂಕಿನಾದಂತ ಈ ಆಭಿಯಾನಕ್ಕೆ ಬೆಂಬಲವಾಗಿ ಶಾಲೆಗಳು ಭಾಗವಹಿಸಿದ್ದು ಸೆ. ೩೦ ಕ್ಕೆ ಮುಕ್ತಾಯಗೊಂಡಿದೆ.
ಇಂಡಿ ಶೈಕ್ಷಣಿಕ ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೂಚನೆಯಂತೆ ಈ ಎಲ್ಲ ಶಾಲೆಯಲ್ಲಿ ತಾಯಿ ಹೆಸರಲ್ಲಿ ಒಂದು ಗಿಡ ಅಭಿಯಾನ ನಡೆಸುವ ಮೂಲಕ ೫೧೧೨ ಸಸಿಗಳನ್ನು ನಡೆಸಲಾಗಿದೆ. ಸರಕಾರಿ ೨೪, ಅನುದಾನಿತ ೨೫, ಅನುದಾನ ರಹಿತ ೩೨ ಪ್ರಾಢಶಾಲೆಗಳು, ಸರಕಾರಿ ೧೬೨ ಕಿರಿಯ ಪ್ರಾಥಮಿಕ, ೧೧೫ ಹಿರಿಯ ಪ್ರಾಥಮಿಕ, ಅನುದಾನ ೧೦ ಅನುದಾನ ರಹಿತ ೭೨ ಪ್ರಾಥಮಿಕ ಶಾಲೆಗಳಿವೆ . ಅದಲ್ಲದೆ ತಾಲೂಕಿನ ನಾದ ಕೆ ಡಿ ಸರಕಾರಿ ಪ್ರಾಡಶಾಲೆ, ಸರಕಾರಿ ಲಚ್ಯಾಣ ಪ್ರಾಡಶಾಲೆ, ಬಂಥನಾಳದ ಮುರಾರಜಿ ವಸತಿ ಶಾಲೆ ಸೇರಿದಂತೆ ಅನೇಕ ಶಾಲೆಗಳು ಹಸಿರು ಕಂಗೊಳಿಸುತ್ತಿದೆ, sಅದರಲ್ಲೂ ತಾಲೂಕಿನಲ್ಲಿ ಅರ್ಧಕ್ಕೂ ಹೆಚ್ಚು ಶಾಲಾ ಮಕ್ಕಳು ಗಿಡಗಳನ್ನು ನೆಟ್ಟಿ ಪೋಷಿಸುತ್ತಿದ್ದಾರೆ.
ಹೀಗೆ ನೆಡಲಾದ ಸಸಿಗಳನ್ನು ಮಕ್ಕಳು ಬಿಡುವಿನ ಸಮಯದಲ್ಲಿ ಅವುಗಳಿಗೆ ನೀರು ಹಾಕಿ ಪೋಷಣೆ ಮಾಡಲಿದ್ದಾರೆ.
ಕೋಟ್
ಅಭಿಯಾನ ಯಶಸ್ವಿಗೊಳಿಸಲು ಶಿಕ್ಷಕರು ಸಿಆರ್‌ಪಿ ಗಳು ಮತ್ತು ಇತರರು ಜವಾಬ್ದಾರಿ ವಹಿಸಿಕೊಂಡು ಮಕ್ಕಳಿಗೆ ಗಿಡ ನೆಡುವಂತೆ ಪ್ರೋತ್ಸಾಹಿಸಿದ್ದರು. ಗಿಡ ನೆಡಲು ವಿಶೇಷ ಕ್ಲಬ್ ರಚಿಸಲಾಗಿತ್ತು. ಜತೆಗೆ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಸೇರಿ ಎಲ್ಲ ಶಾಲೆಗಳ ಆಡಳಿತಮಂಡಳಿಗಳಿಗೆ ಈ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಮನವರಿಕೆ ಮಾಡಲಾಗಿತ್ತು. ಅರಣ್ಯ ಇಲಾಖೆ ನೀಡಿದ ಸಸಿ ಮಾತ್ರವಲ್ಲದೆ ಶಿಕ್ಷಕರು ಮಕ್ಕಳ ಪೋಷಕರು ಸ್ವಯಂ ಖರ್ಚಿನಲ್ಲಿ ಸಸ್ಯಗಳನ್ನು ತಂದು ನೆಟ್ಟಿದ್ದಾರೆ.
ಮಂಜುನಾಥ ಧುಳೆ
ವಲಯ ಅರಣ್ಯ ಅಧಿಕಾರಿ ಸಾಮಾಜಿಕ ಅರಣ್ಯ ಇಂಡಿ
ಕೋಟ್
ಪ್ರತಿ ಸಸಿ ನೆಡುವ ಮಗುವಿನ ಹೆಸರನ್ನು ಆನ್ ಲೈನ್ ಮೂಲಕ ನೋಂದಣಿ ಮಾಡಲಾಗುತ್ತಿದೆ. ಶಾಲೆಯ ಪ್ರತಿ ಮಗುವು ತಾಯಿಯೊಂದಿಗೆ ಸಸಿ ನೆಟ್ಟು ಫೋಟೋ ತೆಗೆದು ಅದನ್ನು ಇಲಾಖೆ ವೈಬ್ ಸೈಟ್ ಗೆ ಅಪ್ಲೋಡ ಮಾಡಬೇಕಾಗುತ್ತದೆ. ಶಿಕ್ಷಕರು ಮಕ್ಕಳ ಫೋಟೋಗಳನ್ನು ಅಪ್ಲೋಡ ಮಾಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಗಿಡ ನೆಡುವ ಅಭಿಯಾನ ಸೆ.೩೦ ಕ್ಕೆ ವರೆಗೆ ಫೋಟೋ ಅಪಲೋಡ ಮಾಡಲು ಅವಕಾರ ನೀಡಲಾಗಿದೆ.
ಎಸ್.ಜಿ.ಸಂಗಾಲಕ ಪ್ರಾದೇಶಿಕ ಅರಣ್ಯ ಇಂಡಿ.
ಕೋಟ್
ಮಕ್ಕಳ ಶಿಕ್ಷಕರ ಗ್ರಾಮಸ್ಥರ ಸಹಾಯದಿಂದ ಗಿಡಗಳನ್ನು ತಾಯಿಯ ಹೆಸರಿನಲ್ಲಿಪೋಷಣೆ ಮಾಡಲಾಗುತ್ತಿದೆ.
ಸತೀಶ ಸಜ್ಜನ ಪ್ರಾಚಾರ್ಯರರು ಮುರಾರಜಿ ದೇಸಾಯಿವಸತಿ ಶಾಲೆ ಬಂಥನಾಳ.
ಫೋಟೊ ಕ್ಯಾಪ್ಸನ್ -೧೬ ಇಂಡಿ ೦೧
ಮುರಾರಾಜಿ ವಸತಿ ಶಾಲೆ ಬಂಥನಾಳ
ತಾಯಿ ಹೆಸರಲ್ಲಿ ಒಂದು ಗಿಡ ಅಭಿಯಾನ : ಇಂಡಿ ತಾಲೂಕು ಪ್ರಥಮ
