ಸಂಕೇಶ್ವರ ,ಅ.೧೫: ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪುರುಷ ಮತ್ತು ಮಹಿಳೆಯರಿಗೆ ಆಯೋಜಿಸಿದ್ದ ೩ನೇ ಆವೃತ್ತಿಯ ಬ್ಯಾಡ್ಮಿಂಟನ್ ಪ್ರೀಮಿಯರ್ ಪಂದ್ಯಾವಳಿಗಳು ಸ್ಥಳೀಯ ನಿಖಿಲ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಯಶಸ್ವಿಯಾಗಿ ಜರುಗಿದವು.
ಪಂದ್ಯಾವಳಿ ಉದ್ಘಾಟಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ಗಡೇದ ಮಾತನಾಡಿ, ಕ್ರೀಡೆಗಳಲ್ಲಿ ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಅಗತ್ಯವಾಗಿದೆ ಎಂದರು.
ಕೋವಿಡ್ ದಲ್ಲಿ ಮೊದಲಿಗೆ ಆರೋಗ್ಯ ಇಲಾಖೆ ವತಿಯಿಂದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ನಂತರ ನಿಖಿಲ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬ್ಯಾಡ್ಮಿಂಟನ್ ಪ್ರೀಮಿಯರ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ.
ಆರೋಗ್ಯ ಇಲಾಖೆ ನೌಕರರಿಗೆ ಬಿಡುವಿಲ್ಲದ ಕೆಲಸದ ಮಧ್ಯೆ ಈ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ನಂತರ ನಿಖಿಲ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಿಖಿಲ್ ಗಂಗರೆಡ್ಡಿ ಅವರು ಬಹುಮಾನ ವಿತರಿಸಿ ಮಾತನಾಡಿ, ನಮ್ಮ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಬ್ಯಾಡ್ಮಿಂಟನ್ ಪ್ರೀಮಿಯರ್ ಪಂದ್ಯಾವಳಿಗಳು ಯಶಸ್ವಿಯಾಗಿ ಜರುಗುತ್ತಿದ್ದು, ಈ ವರ್ಷ ಆರೋಗ್ಯ ಇಲಾಖೆಯ ಮಹಿಳಾ ವೈದ್ಯರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ಒಳ್ಳೆಯ ಬೆಳವಣಿಗೆ, ಇನ್ನೂ ಬೇರೆ ಇಲಾಖೆಯವರು ಕೂಡ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಆಸಕ್ತರಿಗೆ ನಿಖಿಲ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಾಗೂ ಶ್ರೀ ಗೋದಾಬಾಯಿ ಕರನಿಂಗ ಫೌಂಡೇಶನ್ ವತಿಯಿಂದ ಪೋತ್ಸಾಹ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ಅಧೀಕ್ಷಕ ನವೀನ ಗಂಗರೆಡ್ಡಿ, ಮುಖ್ಯ ಅತಿಥಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಾಬಾಸಾಹೇಬ ಕುಂಬಾರ ಮಾತನಾಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬೋವಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅವಿನಾಶ ಹೊಳೆಪ್ಪಗೋಳ, ಹುಕ್ಕೇರಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ರವೀಂದ್ರ ಅಂಟಿನ್,
ಶಾಂತಾರಾಮ ಬಾಗೇವಾಡಿ, ಎಸ್.ಎನ್.ಬೆಳಗಾವಿ, ವಿಕ್ರಮ ಕರನಿಂಗ, ಸಂತೋಷ ಪಾಟೀಲ, ಉತ್ತಮಸಿಂಗ ರಜಪೂತ, ದಯಾನಂದ ತೇಗೂರ, ಮಧುಕರ ಕರನಿಂಗ, ವಿಜಯ ಕುಂಬಾರ, ದೀಪಕ ಅಗ್ನಿಹೋತ್ರಿ, ಕಾಶಿನಾಥ ಕರಾಳೆ, ರಾಜು ನಡುಮನಿ, ಮೌಲಾ ಖನದಾಳೆ, ರಾಜು ಕರನಿಂಗ, ಮಹೇಶ ಮೇಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
೪೦ ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಡಾ.ಪ್ರಶಾಂತ ಹೊತ್ತಗಿಮಠ, ವಿಜಯ ಕುಂಬಾರ (ಪ್ರಥಮ), ಡಾ.ಬೋವಿ, ಮಲೀಕ್ (ದ್ವಿತೀಯ) ಸ್ಥಾನ ಪಡೆದರೆ, ೪೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರ ವಿಭಾಗದಲ್ಲಿ ಡಾ.ಸುಮೀತ ಮತ್ತು ಡಾ.ಶಿವಾನಂದ (ಪ್ರಥಮ), ಚೇತನ, ಸಚಿನ್ (ದ್ವಿತೀಯ) ಸ್ಥಾನ ಗಿಟ್ಟಿಸಿಕೊಂಡರು.
ಇನ್ನು ಪುರುಷ-ಮಹಿಳಾ ಮಿಶ್ರ ಡಬಲ್ಸ್ ನಲ್ಲಿ ಡಾ.ಪ್ರಶಾಂತ ಮತ್ತು ಡಾ.ದೀಪಾ (ಪ್ರಥಮ), ಡಾ. ಸುಮೀತ್ ಮತ್ತು ಆಯೇಷಾ (ದ್ವಿತೀಯ) ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ ಡಾ.ದೀಪಾ ಮತ್ತು ಡಾ.ಆಯೇಷಾ (ಪ್ರಥಮ), ರಾಣಿ ಮತ್ತು ಡಾ.ವಿದ್ಯಾ (ದ್ವಿತೀಯ) ಸ್ಥಾನ ಪಡೆದರು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
