ಇಂಡಿ: ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಇಂದು ಅ. ೧೧ ರಂದು ಸಂಜೆ ೫ ಗಂಟೆಗೆ ಶ್ರೀ ಗೋಸಾಯಿ ಮಹಾ ಸಂಸ್ಥಾನಮಠ ಬೆಂಗಳೂರಿನ ಮರಾಠಾ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತಿ ಶ್ರೀ ಇವರಿಂದ ಆದ್ಯಾತ್ಮಿಕ ಪ್ರವಚನ ಮತ್ತು ಸಂಗೀತ ಕಾರ್ಯಕ್ರಮ ಗ್ರಾಮದ ಅಂಬಾಭವಾನಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಉದ್ದಿಮೆದಾರ ವಿಜಯಕುಮಾರ ಭೋಸಲೆ ತಿಳಿಸಿದ್ದಾರೆ.
ಶ್ರೀ ಗಳು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಯಲ್ಲಿ ಸಂಸ್ಕೃತ ಮತ್ತು ಸಂಗೀತ ವಿಷಯದಲ್ಲಿ ಬಂಗಾರದ ಪದಕ ಪಡೆದಿದ್ದಾರೆ. ಆಧ್ಯಾತ್ಮ ಸಾದನೆಗಾಗಿ ಗೃಹ ಪರಿತ್ಯಾಗ , ಕರ್ನಾಟಕ ಪ್ರವಾಸದ ಸಮಯದಲ್ಲಿ ಪೂಜ್ಯರುಗಳ ಮಾರ್ಗಧರ್ಶನ,ಸಂಗೀತ ಸಾಧನೆ, ಸರಸ್ವತಿ ಮಾತೆಯ ವಿಶೇಷ ಉಪಾಸಣೆ ಮಾಡಿದ್ದು ಆದ್ಯಾತ್ಮಿಕ ಪ್ರಚವನ ನೀಡುವಲ್ಲಿ ಖ್ಯಾತಿ ಹೊಂದಿದ್ದಾರೆ.
ನವರಾತ್ರಿಯ ನಂತರ ತುಳಜಾಪುರದಲ್ಲಿ ಹುಣ್ಣಿಮೆ ಕಾರ್ಯಕ್ರಮ ನಂತರ ಬಳ್ಳೊಳ್ಳಿ ಗ್ರಾಮದಲ್ಲಿ ಅಂಬಾಭವಾನಿ ಮಾತೆಯ ಕುರಿತು ಆದ್ಯಾತ್ಮಿಕ ಪ್ರವಚನ ನೀಡಲಿದ್ದಾರೆ .
ಗೋ ಪೂಜೆ, ಗುರು ದೀಕ್ಷೆ, ಜ್ಞಾನೇಶ್ವರಿ ಪಾರಾಯಣ, ಶ್ರೀಮದ ಭಗವತ್ ಗೀತಾ ಪಾರಾಯಣ, ಭಜನೆ ಸಭಾ ಕಾರ್ಯಕ್ರಮ, ಶ್ರೀಗಳ ಪಾದಪೂಜೆ ಹಾಗೂ ಆರ್ಶೀವಚನ ಮತ್ತು ಪ್ರಸಾದ ವಿತರಣೆ ನಡೆಯಲಿದೆ ಎಂದು ವಿಜಯಕುಮಾರ ಭೋಸಲೆ ತಿಳಿಸಿದ್ದಾರೆ.
ಇಂದು ಆದ್ಯಾತ್ಮಿಕ ಪ್ರವಚನ ಮತ್ತು ಸಂಗೀತ ಕಾರ್ಯಕ್ರಮ
