ಕಾಗವಾಡ:ಮಹರ್ಷಿ ವಾಲ್ಮೀಕಿಯವರು ಪವಿತ್ರ ರಾಮಾಯಣ ರಚನೆ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ್ದಾರೆ ಎಂದು ತಹಸೀಲ್ದಾರ ರವಿಂದ್ರ ಹಾದಿಮನಿ ಹೇಳಿದರು.
ಅವರು ದಿ 7ರಂದು ಮಂಗಳವಾರ ಪಟ್ಟಣದ ಮಲ್ಲಿಕಾರ್ಜುನ ಪ್ರೌಢಶಾಲೆಯ ಸಭಾವನದಲ್ಲಿ ತಾಲೂಕಾಡಳಿತ, ತಾಲೂಕಾ ಪಂಚಾಯತ್, ಪಟ್ಟಣಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಾಲ್ಮೀಕಿಯವರ ತತ್ವಾದರ್ಶ ಸಾರ್ವಕಾಲಿಕ. ಮಹರ್ಷಿ ವಾಲ್ಮೀಕಿ, ಜಗಜ್ಯೋತಿ ಬಸವಣ್ಣನವರು, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಇನ್ನಿತರ ಮಹಾತ್ಮರು, ದೇಶಭಕ್ತರು, ಸಂತರು, ಶರಣರು, ಒಂದೇ ಜಾತಿ, ಮತಕ್ಕೆ ಸೀಮಿತರಾದ ವ್ಯಕ್ತಿಗಳಲ್ಲ. ಇವರು ನಾಡಿನ ಜನಾಂಗಕ್ಕೆ ನೀಡಿದ ಕೊಡುಗೆ ಅನನ್ಯ. ಇಂತವರ ಜಯಂತಿ, ಕಾರ್ಯಕ್ರಮಗಳನ್ನು ಸರ್ವ ಧರ್ಮದ ಜನರು ಒಟ್ಟಾಗಿ ಅರ್ಥಪೂರ್ಣವಾಗಿ ಆಚರಿಸಬೇಕು. ಇವರ ತತ್ವ ಸಂದೇಶಗಳನ್ನು ಮುಂದಿನ ಜನಾಂಗದವರಿಗೂ ತಿಳಿಯಪಡಿಸುವ ಮೂಲಕ ಮಹಾತ್ಮರ ಹೆಸರು ಅಜರಾಮರವಾಗಿ ಉಳಿಯುಂತಾಗಬೇಕು ಎಂದರು
ವಾಲ್ಮೀಕಿ ಸಮಾಜ ತಾಲುಕಾ ಅಧ್ಯಕ್ಷ , ರಮೇಶ ನಾಯಕ ,ಮಾತನಾಡಿ ಸಮಾಜ ಭಾಂಧವರು ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಸಮಾಜವು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದ ಅವರು ಹೇಣ್ಣು ಮಕ್ಕಳನ್ನು ಕರುಳ ಬಳ್ಳಿ ಎಂದು ಬೇಗನೆ ವಿವಾಹ ಮಾಡದೇ ಅವರಿಗೆ ಹೇಚ್ಚಿನ ಶಿಕ್ಷಣ ಕಲಿಸಿ ಸರಕಾರಿ ಅಧಿಕಾರಿ ಯಾಗುವಂತೆ ಪ್ರೇರೇಪಣೆ ನೀಡಬೇಕು ಎಂದರು.
ಇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಉಪತಹಸಿಲ್ದಾರ ರಶ್ಮಿ ಜಕಾತಿ,ತಾಪಂ ಕಾರ್ಯನಿರ್ವಾಹಕ ವಿರಣ್ಣಾ ವಾಲಿ ,ಪಪಂ ಮುಖ್ಯಾಧಿಕಾರಿ ಕೆ ಕೆ ಗಾವಡೆ ಸಿ ಡಿ ಪಿ ಒ ರವಿಂದ್ರ ಗುದಗೇನ್ನವರ, ಸಮಾಜಕಲ್ಯಾಣಧಿಕಾರಿ ಸದಾಶಿವ ಮಾಂಗ, ಪಿ ಎಸ್ ಐ ರಾಘವೇಂದ್ರ ಖೋತ,ರಾಜಶೇಖರ ಹಿರೇಮನಿ, ವಿಜಯ ಮಹಾಂತೇಶ ಸವದಿ, ಎಮ್ ಆರ್ ಪಾಟೀಲ, ಸುರೇಖಾ ಬಸನಾಯಕ, ಮಹಾದೇವಿ ಮಾಕನ್ನವರ, ಕೆ ಎಸ್ ಹುಳೋಲ್ಕರ,ವಾಲ್ಮೀಕಿ ಸಮಾಜ ಬಾಂಧವರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸ್ವಾಗತಿಸಿ ಎಚ್.ಪಿ ನಾಯಿಕ ಟಿ.ಬಿ ಟೋಣಗೆ ನಿರೂಪಿಸಿದರು ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ ಮದಭಾವಿ,ವಂದಿಸಿದರು.