ಹುನಗುಂದ: ಪರಿಶಿ? ಪಂಗಡದ ನಾಯಕ, ತಳವಾರ ಹೆಸರಿನಲ್ಲಿ ಪ್ರವರ್ಗ-೧ರಲ್ಲಿರುವ ಸಮುದಾಯಗಳು ಅಕ್ರಮವಾಗಿ ಪರಿಶಿ? ಪಂಗಡದ ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ಪಡೆದು ವಂಚಿಸುತ್ತಿರುವುದು ಹಾಗೂ ಪ್ರಬಲ ಅನ್ಯ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸುವುದನ್ನು ವಿರೋಧಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಹುನಗುಂದ ಘಟಕದಿಂದ ಗುರುವಾರ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿ ಶಿರಸ್ತೇದಾರ ಶ್ರವಣಕುಮಾರ ಮುಂಡೇವಾಡಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕ ಅಧ್ಯಕ್ಷ ಚಂದ್ರು ತಳವಾರ ಮಾತನಾಡಿ ಭಾರತೀಯ ಸಂಸ್ಕೃತಿಯ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಹಾಗೂ ಶೋಷಿತ ಸಮುದಾಯಗಳ ಧ್ವನಿ ಮಹಾ ಮಾನವತವಾದಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಮೀಸಲಾತಿ ಕಬಳಿಸುವ ಕೆಲಸವಾಗುತ್ತಿದೆ. ನಾಯಕ, ತಳವಾರ ಹೆಸರಿನಲ್ಲಿ ರಾಜ್ಯದಲ್ಲಿ ೨ ಲಕ್ಷಕ್ಕೂ ಹೆಚ್ಚಿಗೆ ನಕಲಿ ಜಾತಿ ಪ್ರಮಾಣ ಪತ್ರಗಳು ತೆಗೆದುಕೊಂಡು ಅನೇಕ ಸೌಲಭ್ಯಗಳನ್ನು ವಾಮ ಮಾರ್ಗದಲ್ಲಿ ಪಡೆದು ನಿಜವಾದ ಪರಿಶಿ? ಪಂಗಡದ ಜನಾಂಗಕ್ಕೆ ವಂಚಿಸುತ್ತಿರುವ ವಿ?ಯವನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತಂದ್ರೂ ಕೂಡಾ ವಂಚನೆ ಹಾವಳಿ ನಿಂತಿಲ್ಲ ಅದಕ್ಕೆ ಕಡಿವಾಣ ಹಾಕದಿರುವುದು ವಿ?ದನೀಯ ಸಂಗತಿ. ಇದರಿಂದ ನೈಜ ಪರಿಶಿ? ಪಂಗಡದ ನಾಯಕ, ತಳವಾರ ಜಾತಿಯ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ
ಬಡ್ತಿಯಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಘಣಘೋರ ಅನ್ಯಾಯವಾಗುತ್ತಿದೆ. ಇನ್ನು ಶಾಲಾ ದಾಖಲತೆಯಲ್ಲಿ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೆರ, ಕೊಲಿ ಮುಂತಾದ ಹೆಸರುಗಳ ಬದಲಿಗೆ ನಕಲಿ ತಳವಾರ ಅಂತ ನಮೂದಿಸಿ ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡೆಯುತ್ತಿದ್ದು ಇದು ತಕ್ಷಣವೇ ನಿಲ್ಲಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವಿ.ಮ. ಬ್ಯಾಂಕ್ ಉಪಾಧ್ಯಕ್ಷ ಹಾಗೂ ಸಮಾಜದ ಮು ಖಂಡ ಸೋಮಶೇಖರ ಬಲಕುಂದಿ ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರ ಅನ್ಯರಿಗೆ ಪರಿಶಿ? ಪಂಗಡದ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದರಿಂದಲೇ ಅಧಿಕಾರವನ್ನು
ಕಳೆದುಕೊಂಡಿದೆ. ಸರ್ಕಾರ ತಕ್ಷಣ ಪರಿಶಿ? ಪಂಗಡ ನಕಲಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಬೇಕು, ನಕಲಿ ಪ್ರಮಾಣ ಪತ್ರವನ್ನು ಪಡೆದ ವ್ಯಕ್ತಿಗಳ ಮೇಲೆ ಮತ್ತು ನೀಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು, ಪರಿಶಿ? ಪಂಗಡದವರಲ್ಲದ ಪ್ರಬಲ ಜಾತಿಗಳನ್ನು ಪರಿಶಿ? ಪಂಗಡಕ್ಕೆ ಸೇರಿಸುವ ಪ್ರಕ್ರಿಯೆನ್ನು ಪ್ರಕ್ರಿಯೆನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಹಿರೇಗೌಡರ, ವಿಜಯ ಸುಣಕಲ್ಲ, ಗೌಡಪ್ಪ ಗೌಡರ, ಮುತ್ತಪ್ಪ ಗುಡದಣ್ಣನವರ, ಗ್ಯಾನಪ್ಪ ತಳವಾರ ಸೇರಿದಂತೆ ಅನೇಕರು ಇದ್ದರ
ಪ್ರಬಲ ಅನ್ಯ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸುವುದನ್ನು ವಿರೋಧಿಸಿ ಪ್ರತಿಭಟನೆ


