ಎಡೆಬಿಡದೆ ಸುರಿದ ಮಳೆ : ಸಾವಿರಾರು ಕ್ವಿಂಟಲ್ ಉಳ್ಳಾಗಡ್ಡಿ ನಾಶ

Pratibha Boi
ಎಡೆಬಿಡದೆ ಸುರಿದ ಮಳೆ : ಸಾವಿರಾರು ಕ್ವಿಂಟಲ್ ಉಳ್ಳಾಗಡ್ಡಿ ನಾಶ
WhatsApp Group Join Now
Telegram Group Join Now

ಯರಗಟ್ಟಿ: ನೀರಾವರಿ ಮತ್ತು ಒಣಬೇಸಾಯದಲ್ಲಿ ಉಳ್ಳಾಗಡ್ಡಿ ಬೆಳೆದ ರೈತರಿಗೆ ಈ ಬಾರಿ ಎಡೆಬಿಡದೆ ಸುರಿದ ಮಳೆಯ ಪರಿಣಾಮ ಕೊಳೆ ರೋಗ ತಗುಲಿದೆ. ಇದರಿಂದ ಸಾವಿರಾರು ಕ್ವಿಂಟಲ್ ಉಳ್ಳಾಗಡ್ಡಿ ನಾಶವಾಗಿದೆ. ಯರಗಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಮಳೆಗೆ ಕೆರೆಕಟ್ಟೆ ತುಂಬಿದ್ದು, ತೇವಾಂಶ ಹೆಚ್ಚಾಗಿದೆ.

ಪ್ರತಿ ವ? ರೈತರು ಹೆಚ್ಚಿನ ಪ್ರಮಾಣದಲ್ಲಿ ಉಳ್ಳಾಗಡ್ಡಿ ಬೆಳೆಯುತ್ತಾರೆ. ದರ ಏರಿಳಿತದ ನಡುವೆ ಈರುಳ್ಳಿ ಬೆಳೆಯುವ ಕೃಷಿಕರ ಸಂಖ್ಯೆ ಹೆಚ್ಚುತ್ತಿದೆ. ಈ ವ? ಉಳ್ಳಾಗಡ್ಡಿ ಬೆಳೆದ ರೈತರು ನಿರಂತರ ಮಳೆಯಿಂದಾಗಿ ಹೈರಾಣಾಗಿದ್ದಾರೆ. ಅಲ್ಪಸ್ವಲ್ಪ ಉಳಿಸಿಕೊಂಡರೂ ರೋಗಭಾದೆ ಕಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಈರುಳ್ಳಿ ದರ ಉತ್ತಮವಾಗಿಯೇ ಇದೆಯಾದರೂ ಅತಿವೃಷ್ಟಿಯಿಂದಾಗಿ ಉಳ್ಳಾಗಡ್ಡಿ ಹೊಲದಲ್ಲೇ ಕೊಳೆತು ಹೋಗಿದೆ.

ಮಳೆ ಸತತವಾಗಿ ಬಿದ್ದ ಹಿನ್ನೆಲೆಯಲ್ಲಿ ಬೆಳೆಗೆ ರೋಗ ತಗುಲಿದ್ದು, ತೇವಾಂಶವೇ ಈರುಳ್ಳಿ ಬೆಳೆಗೆ ಮುಳುವಾಗಿ ಪರಿಣಮಿಸಿದೆ. ಸತ್ತಿಗೇರಿ, ಯರಗಣವಿ, ಶಿವಾಪೂರ, ಯರಝರ್ವಿ, ಮಾಡಮಗೇರಿ ಬೂದಿಗೊಪ್ಪ ಗ್ರಾಮಗಳಲ್ಲಿ ಈರುಳ್ಳಿ ಬೆಳೆ ನೆಲಕಚ್ಚಿದೆ.

ನಾವು ಮೂರು ಎಕರೆ ಉಳ್ಳಾಗಡ್ಡಿ ಬೆಳೆದಿದ್ದು ಉತ್ತಮವಾದ ಗಡ್ಡೆ ಬಂದಿದೆ. ಮಳೆಯ ತೇವಾಂಶದಿಂದ ರೋಗ ತಗುಲಿ ಅಂದಾಜು ೨೦೦ ಕ್ವಿಂಟಲ್ ಬೆಳೆ ಕೊಳೆತು ಹೋಗಿದೆ ಎಂದರು ಕಳೆದ ವರ್ಷ ೪ ಎಕರೆ ಜಮೀನಲ್ಲಿ ೧೩ ಲಕ್ಷ ಮೌಲ್ಯದ ಉಳ್ಳಾಗಡ್ಡಿ ಬೆಳೆ ಬಂದಿತ್ತು ಎಂದು ಯರಗಟ್ಟಿ ರೈತ ರಂಗಪ್ಪ ವಜ್ರಮಟ್ಟಿ ತಮ್ಮ ಅಳಲನ್ನು ತೋಡಿಕೊಂಡರು.

ಒಂದು ಎಕರೆಗೆ ಬೀಜ, ಗೊಬ್ಬರ, ಕೀಟನಾಶಕ ಹೀಗೆ ?೩೦ ರಿಂದ ?೪೦ ಸಾವಿರ ವೆಚ್ಚ ಮಾಡಿದವರಿಗೆ ನ? ಉಂಟಾಗಿದೆ. ಈರುಳ್ಳಿ ಚೆನ್ನಾಗಿ ಇಳುವರಿ ಬಂದಿದ್ದರೂ ಕೆಲವೆಡೆ ರೋಗದ ಕಾಟದಿಂದ ಬಿತ್ತನೆಗೆ ಮಾಡಿದ ಖರ್ಚು ಕೈಗೆಟುಕದೇ ರೈತರು ಕಂಗಾಲಾಗಿದ್ದಾರೆ.

ಯರಗಟ್ಟಿ ಹೋಬಳಿಯಲ್ಲಿ ಪ್ರದೇಶದಲ್ಲಿ ಅತಿ ಹೆಚ್ಚು ರೈತರು ಈರುಳ್ಳಿ ಬೆಳೆದಿದ್ದು ೧೫ ರಿಂದ ೧೭ ಸಾವಿರ ಹೆಕ್ಟೇರ್ ಈರುಳ್ಳಿ ಮಣ್ಣುಪಾಲಾಗಿದೆ. ಮಳೆಗೆ ಈರುಳ್ಳಿ ಕೈಕೊಟ್ಟಿದ್ದರಿಂದ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಪೂರೈಕೆ ಕಡಿಮೆಯಾಗಿ ದರ ಹೆಚ್ಚಾಗಿದೆ ಎಂದು ಪ್ರಗತಿಪರ ರೈತ ರವಿ ಸಜ್ಜನರ ಹೇಳಿದರು. ಸಾಕ? ಪ್ರಮಾಣದಲ್ಲಿ ರೈತರು ಈರುಳ್ಳಿ ಬೆಳೆದರೂ ಈರುಳ್ಳಿ ಲಾಭ ರವದಿಯಲ್ಲಿ ಹೋಯಿತು ಎಂಬಂತಾಗಿದೆ.

ಹೇಳಿಕೆ : ಈಗಾಗಲೇ ನಮ್ಮಗಮನ್ನಕ್ಕೆ ಬಂದುದ್ದು ನಾವು ನಮ್ಮ ತೋಟಗಾರಿಕೆ ಇಲಾಖೆಯ ಎಎಚ್‌ಓಗಳಿಗೆ ಸರ್ವ ಮಾಡಲು ತಿಳ್ಳಿಸಿದ್ದೆನೆ ಹಾಗೂ ನಾನು ಕೂಡಾ ಯರಗಟ್ಟಿ-ಸವದತ್ತಿ ವ್ಯಾಪ್ತಿಯಲ್ಲಿ ರೈಜರ ಜಮೀಜುಗಳಿಗೆ ಭೇಡಿನೀಡಿ ಪರಿಶೀಲಿಸಿ ಸರಕಾರಕ್ಕೆ ವರದಿಸಲ್ಲಿಸುತ್ತೇನೆ.

 

 

WhatsApp Group Join Now
Telegram Group Join Now
Share This Article