ಹುನಗುಂದ; ದಿನಾಂಕ: ೨೫-೦೯-೨೦೨೫ ರ ಗುರುವಾರ ಅಪರಾನ್ಹದ ವೇಳೆಗೆ ಸ್ಥಳಿಯ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಹುನಗುಂದ ತಾಲೂಕಿನ ತಹಶೀಲ್ದಾರ ವ ತಾಲೂಕು ದಂಡಾಧಿಕಾರಿಗಳಾದ ಶ್ರೀ ಪ್ರದೀಪ ಕುಮಾರ ಹಿರೇಮಠರವರು ಸ್ವಯಂ ಅಧಿಕಾರ ಹಸ್ತಾಂತರ ಪಡೆದುಕೊಂಡರು. ಇಲಕಲ್ಲ ಪಟ್ಟಣದ ಅಂಜುಮನ್ ಏ ಇಸ್ಲಾಂ ಸಂಸ್ಥೆಯು ಒಂದು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಾಗಿದ್ದು ಕನ್ನಡ ಮತ್ತು ಆಂಗ್ಲ ಮಾಧ್ಯಮದ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲದೆ ಪಿ.ಯು ಕಾಲೇಜ ಶಿಕ್ಷಣ ನೀಡುತ್ತಿರುವ ಸಂಸ್ಥೆಯಾಗಿದೆ ಈ ಸಂಸ್ಥೆಗೆ ಇದ್ದ ಆಡಳಿತ ಮಂಡಳಿಯ ಅವಧಿಯು ದಿನಾಂಕ: ೧೦-೦೬-೨೦೨೫ಕ್ಕೆ ಮುಕ್ತಾಯವಾದ ಕಾರಣಕ್ಕೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಹುನಗುಂದ ತಾಲೂಕಿನ ಕಂದಾಯ ಇಲಾಖೆಯ ಮುಖ್ಯಸ್ಥರಾಗಿರುವ ತಹಶೀಲ್ದಾರ ವ ದಂಡಾಧಿಕಾರಿಯಾದ ಶ್ರೀ ಪ್ರದೀಪ ಕುಮಾರ ಹಿರೇಮಠ ರನ್ನು ಆಡಳಿತಾಧಿಕಾರಿಯಾಗಿ ೬ ತಿಂಗಳ ಅವಧಿಗೆ ನೇಮಿಸಿ ಆದೇಶ ಮಾಡಿತ್ತು ಈ ಹಿನ್ನಲೇಯಲ್ಲಿ ಗುರುವಾರ ತಹಶೀಲ್ದಾರರು ಅಧಿಕಾರ ಸ್ವೀಕರಿಸಿದರು.


