ಹುನಗುಂದ: ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಪಟ್ಟಣವನ್ನು ಸ್ವಚ್ಛ ಮತ್ತು ಸುಂದರಗೊಳಿಸುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅಗಾಧವಾದದ್ದು ಎಂದು ಶಾಸಕ ವಿಜಯಾನಂದ ಕಾಶಪನವರ ಹೇಳಿದರು. ನಗರದ ಗುರುಭವನದಲ್ಲಿ ಪುರಸಭೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು ಎನ್ನುವಂತ ಸಂದೇಶವನ್ನು ರಾ?ಪಿತ ಮಹಾತ್ಮ ಗಾಂಧೀಜಿ ಅವರು ನೀಡಿದರು. ಇದರಿಂದ ನಮ್ಮ ಜವಾಬ್ದಾರಿ ಅರಿಯಲು ಸಾಧ್ಯವಾಗುತ್ತದೆ. ಪೌರಕಾರ್ಮಿಕರಿಲ್ಲದಿದ್ದರೆ ಸ್ವಚ್ಛ ಸುಂದರ ಭಾರತವನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಸಾರ್ವಜನಿಕರಿಗೆ ತಮ್ಮನ್ನು ತಾವು ಅರ್ಪಿಸಿಕ ಪೌರ ಕಾರ್ಮಿಕರಿಗೆ ನಮ್ಮ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುವ ಜೊತೆಗೆ ಇತ್ತೀಚಿಗೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ವಿನೂತನ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆದಾಗ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊರಗುತ್ತಿಗೆ ಪೌರಕಾರ್ಮಿಕರನ್ನು ಖಾಯಂ ಮಾಡಿ ಅವರು ವಿಶೇ?ವಾಗಿ ೭ ಸಾವಿರ ಗೌರವ ಧನವನ್ನು ನೀಡಲಾಗುತ್ತಿದೆ. ಇಲ್ಲಿನೂ ಕೂಡಾ ನಮ್ಮ ಪುರಸಭೆ ವತಿಯಿಂದ ಅರ್ಹ ಪೌರಕಾರ್ಮಿಕರಿಗೆ ನಿವೇಶನವನ್ನು ನೀಡಿ ಮನೆ ಕಟ್ಟಿ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ವಿಶೇ? ಉಪನ್ಯಾಸ ನೀಡಿ ಮಾತನಾಡಿ ಅಭದ್ರತೆ ಮತ್ತು ಅನಿಶ್ಚಿತ ಭವಿ?ದ ಜೊತೆಗೆ ಆರೋಗ್ಯ ಸಂಬಂಧಿತ ಅನೇಕ ಸವಾಲುಗಳ ಮಧ್ಯೆಯೇ ವೃತ್ತಿ ಬದ್ಧತೆ ಮೆರೆಯುವ ಪೌರ ಕಾರ್ಮಿಕರನ್ನು ನಿಜ ಕಾಯಕ ಜೀವಿಗಳು ಅವರನ್ನು ಸ್ವಚ್ಛತೆಯ ಮತ್ತು ಸೇನಾನಿಗಳೆಂದು ಕರೆಯಬೇಕು. ತಮ್ಮನ್ನು ತಾವು ಸುಟ್ಟುಕೊಂಡು ಇತರೆಲ್ಲರಿಗೂ ಬೆಳಕು ನೀಡುವ ಪೌರ ಕಾರ್ಮಿಕರ ಬಗ್ಗೆ ಸಾರ್ವಜನಿಕರು ಕೀಳರಮೆ, ಅಸಡ್ಡೆ ಭಾವನೆಯಿಂದ ನೋಡೋದ್ದನ್ನು ಬಿಟ್ಟು ಸಮಾಜದಲ್ಲಿನ ಇಂತಹ ವೃತ್ತಿಗಳನ್ನು ಮಾನವೀಯ ನೆಲೆಯಲ್ಲಿ ನೋಡಿದಾಗ ಮಾತ್ರ ಅವುಗಳ ವಾಸ್ತವತೆ ಅರಿಯಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆಯ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಪಟ್ಟಣದ ಸೌಂದರ್ಯದಲ್ಲಿ ಪೌರ ಕಾರ್ಮಿಕರ ಪಾತ್ರ ತುಂಬ ಮಹತ್ವದ್ದಾಗಿದ್ದು ಅವರ ಬಗ್ಗೆ ಜನಸಾಮಾನ್ಯರಲ್ಲಿರುವ ಧೋರಣೆ ಬದಲಾಗಬೇಕು ಎಂದರು.
ಗಚ್ಚಿನಮಠದ ಅಮರೇಶ್ವರ ದೇವರು ಸಾನಿಧ್ಯವಹಿಸಿದ್ದರು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು ಮತ್ತು ಎಲ್ಲ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಡುವಿನಮನಿ, ಸದಸ್ಯರಾದ ಚಂದ್ರು ತಳವಾರ, ಪರವೇಜ ಖಾಜಿ,ಮಹಮ್ಮದ ದೋಟಿಹಾಳ,ಮೈನು ಧನ್ನೂರ, ನಾಮ ನಿರ್ದೇಶನ ಸದಸ್ಯರಾದ ಮಲ್ಲಣ್ಣ ಅಂಟರತಾನಿ, ರಾಜು ಹಡಪದ, ಮುಖಂಡರಾದ ಮಲ್ಲಿಕಾರ್ಜುನ ಹೂಗಾರ, ಅಧ್ಯಕ್ಷ ಮಹಾಂತೇಶ ತಾರಿವಾಳ, ಪ್ರಧಾನ ಮುತ್ತು ಲೋಕಾಪುರ, ಪೌರಕಾರ್ಮಿಕರ ಕಾರ್ಯದರ್ಶಿ ಶ್ರೀನಿವಾಸ ಬದಾಮಿ, ಖಜಾಂಚಿ ಬಸವರಾಜ ಚಲವಾದಿ ಸೇರಿದಂತೆ ಅನೇಕರು ಇದ್ದರು. ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಮುತ್ತು ಹುಣಶ್ಯಾಳ ಸ್ವಾಗತಿಸಿದರು, ಸಂಘದ ಉಪಾಧ್ಯಕ್ಷ ಶ್ಯಾಮಸುಂದರ ತಳಕೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅಗಾಧ : ಕಾಶಪನವರ


