Pratibha Boi
WhatsApp Group Join Now
Telegram Group Join Now

ಯರಗಟ್ಟಿ: ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಾಣಿಕೆ/ ಮಾರಾಟ/ಬೆಳೆಯುತ್ತಿದ್ದವರ ಮೇಲೆ ದಾಳಿ ಮಾಡಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿದ ಒಟ್ಟು ೧೨ ಪ್ರಕರಣಗಳಲ್ಲಿ ಅಂದಾಜು ರೂ. ೨೫.೨೭.೪೫೦/- ಕಿಮ್ಮತ್ತಿನ ೪೫೫ ಕೆಜಿ ೫೮೨ ಗ್ರಾಂ ಮಾದಕ ವಸ್ತುಗಳನ್ನು ನ್ಯಾಯಾಲಯದ ಹಾಗೂ ಮಾಲಿನ್ಯ ನಿಯಂತ್ರಣಾಧಿಕಾರಿಗಳ ಅನುಮತಿಯೊಂದಿಗೆ ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮೀಟಿಯು ದಿನಾಂಕ: ೨೫.೦೯.೨೦೨೫ ರಂದು ಬೆಳಿಗ್ಗೆ ೧೧:೩೦ ಗಂಟೆಗೆ ಯರಗಟ್ಟಿ ಸಮೀಪದ ತಾಲೂಕಿನ ಮುರಗೋಡ ಪೊಲೀಸ್ ಠಾಣಾ ವ್ಯಾಪಿಯ ಹಾರೂಗೊಪ್ಪ ಗ್ರಾಮ ಹದ್ದಿಯ ರಿ,ಸ. ನಂ:೨೯/೨ ನೇದ್ದರಲ್ಲಿಯ ದಿ ಬೆಳಗಾಂ ಗ್ರೀನ್ ಎನ್ವಿರಾನ್‌ಮೆಂಟಲ್ ಮ್ಯಾನೇಜ್‌ಮೆಂಟ್ ಪ್ರಾ.ಅ. ಹಾರೂಗೊಪ್ಪ ನೇದ್ದರಲ್ಲಿ ಮಾದಕ ವಸ್ತುಗಳನ್ನು ನಿಯಮಾನುಸಾರ ನಾಶಪಡಿಸಲಾಯಿತು.

ಈ ವೇಳೆ ಎಸ್. ಪಿ. ಭೀಮಾಶಂಕರ ಗುಳೆದ, ಹೆಚ್ಚುವರಿ ಪೊಲೀಸ್ ವರಿ?ಧಿಕಾರಿ ಆರ್. ಬಿ. ಬಸರಗಿ, ಚಿಕ್ಕೋಡಿ ಡಿಎಸ್ಪಿ ಜಿ. ಡಿ. ಗೌಡರ, ಗೋಕಾಕ ಡಿಎಸ್ಪಿ ರವಿ ಡಿ. ನಾಯಿಕ, ಮುರಗೋಡ ಸಿಪಿಐ ಐ ಎಂ ಮಠಪತಿ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಇದ್ದರು.

 

WhatsApp Group Join Now
Telegram Group Join Now
Share This Article