೧೦ವರ್ಷಗಳಿಂದ ಸಂಘದ ಲಾಭಾಂಶ ಯಾತಾ ಸ್ಥಿತಿಯಲ್ಲಿದೆ : ಮಹಾಂತೇಶ ಹೊಸೂರ

Pratibha Boi
೧೦ವರ್ಷಗಳಿಂದ ಸಂಘದ ಲಾಭಾಂಶ ಯಾತಾ ಸ್ಥಿತಿಯಲ್ಲಿದೆ : ಮಹಾಂತೇಶ ಹೊಸೂರ
WhatsApp Group Join Now
Telegram Group Join Now

ಹುನಗುಂದ; ನಮ್ಮ ತಾಲೂಕ ಕೃಷಿಗೆ ಹೆಸರಾಗಿದ್ದು, ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಶೇರುದರರು ವಿವಿದ ಭಾಗಗಳಿಂದ ಸಕಾಲಕ್ಕೆ ಪಡೆದ ಸಾಲವನ್ನು ಅವದಿಯೊಳಗೆ ತುಂಬಿ ಸಂಘದ ಅಭಿವೃದ್ದಿಗೆ ಮತ್ತು ಮತ್ತೊಬ್ಬ ಸದಸ್ಯರ ಆರ್ಥಿಕ ಸಮಸ್ಯೆಗೆ ಸಹಕರಿಸಬೇಕೆಂದು ಸಂಘದ ಅಧ್ಯಕ್ಷ ಮಹಾಂತೇಶ ಹೊಸೂರ ಹೇಳಿದರು.

ಇಲ್ಲಿನ ಬಸವ ಮಂಟಪದ ಹಿಂಬಾಗದಲ್ಲಿ ನಡೆದ ಸಂಘದ ೧೧೨ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತ ಸಂಘದ ಬಹುತೇಕ ಸದಸ್ಯರು ಕೃಷಿ ಉದ್ಯೋಗವನ್ನು ಮೂಲವಾಗಿಸಿಕೊಂಡು ಅದರಿಂದ ಬರುವ ಆದಾಯವನ್ನು ಮಾತ್ರ ಇಂಥ ಸಂಘ-ಸಂಸ್ಥೆಗಳಿಗೆ ಸಕಾಲದಲ್ಲಿ ತುಂಬುವದು ಕಷ್ಟ ಸಾಧ್ಯ. ಇದರಿಂದ ಕಳೆದ ೧೦ವರ್ಷಗಳಿಂದ ಸಂಘದ ಲಾಭಾಂಶ ಯಾತಾ ಸ್ಥಿತಿಯಲ್ಲಿದೆ. ತಮ್ಮ ದುಡಿಕೆಯಲ್ಲಿ ಸದಸ್ಯರು ನಮ್ಮ ಸಂಘದಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸ ಬೇಕೆಂದು ಅವರು ಮನವಿ ಮಾಡಿದರು.

ಸಂಘದ ಸದಸ್ಯರಿಗೆ ಹೆಚ್ಚುವರಿ ಸಾಲ ನೀಡುವಂತೆ ವಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಸಾಕಷ್ಟು ಬಾರಿ ಸಂಘವು ಮನವಿ ಮಾಡಿದೆ. ಈ ಕುರಿತು ಈ ಸಾಲಿನಲ್ಲಿ ಸಂಘದ ಕೆಲವು ಸದಸ್ಯರನ್ನು ಕರೆದುಕೊಂಡು ಜಿಲ್ಲಾ ಬಿಡಿಸಿಸಿ ಬ್ಯಾಂಕಿಗೆ ತೆರಳಿ ಹೆಚ್ಚುವರಿ ಸಾಲವನ್ನು ನೀಡುವಂತೆ ಮನವಿ ಮಾಡಿಕೊಳಲಾಗುವದು. ನಮ್ಮ ತಾಲೂಕಿನ ಭೂಮಿ ಗುಣಧರ್ಮಕ್ಕೆ ತಕ್ಕಂತೆ ನಮಗೆ ಅನ್ವಯಿಸುವ ರಸಾಯನಿಕ ಗೊಬ್ಬರಗಳನ್ನು ಕೊರತೆಯಗದಂತೆ ರೈತರಿಗೆ ಒದಗಿಸಬೇಕೆಂದು ಸಂಘದ ಸದಸ್ಯರುಗಳ ಪ್ರಶ್ನೆಗೆ ಈಗಾಗಲೆ ಸಾಕಷ್ಟು ಬಾರಿ ಜಿಲ್ಲೆಯ ಅಧಿಕಾರಿಗಳಿಗೆ ಈ ಬಗ್ಗೆ ಸಾಕಷ್ಟು ಮನವಿ ಮಾಡಿದರೂ ಎಲ್ಲ ರಸಾಯನಿಕ ಗೊಬ್ಬರಗಳನ್ನು ಪಡೆಯಲೇಬೇಕು ಎಂದಾಗ ನಾವು ಒಂದಕ್ಕೆ ಮತ್ತೊಂದು ಜೋಡಣೆಯಲ್ಲಿ ರಸಗೊಬ್ಬರ ಖರೀದಿಸಿ ರೈತರಿಗೆ ವಿತರಿಸುವಾಗ ಕೆಲವು ರೈತರು ಕೆಲವು ಗೊಬ್ಬರವನ್ನು ನಿರಾಕರಿಸುತ್ತಾರೆ. ಇಂಥ ಸಂದರ್ಭದಲ್ಲಿ ಸಂಘವು ಹಾನಿ ಅನುಭವಿಸಬೇಕಾಗುತ್ತದೆ ಎಂದು ಮಹಾಂತೇಶ ಹೊಸೂರು ತಿಳಿಸಿದರು. ನಿರ್ದೇಶಕ ದೇವಪ್ಪ ಡಂಬಳ ಮಾತನಾಡಿ ಜಿಲ್ಲೆಯ ಕೆಲವು ನೀರಾವರಿ ಭಾಗಗಳಲ್ಲಿ ಹೆಚ್ಚುವರಿ ಸಾಲ ಮಂಜೂರಾಗಿದೆ. ಅದೆ ರೀತಿ ನಮ್ಮ ರೈತರಿಗೆ ನಮ್ಮ ಸಂಘದಿಂದ ಹೆಚ್ಚುವರಿ ಸಾಲ ಒದಗಿಸುವಂತೆ ಬಿಡಿಸಿಸಿ ಬ್ಯಾಂಕ ಅಧ್ಯಕ್ಷರ ಗಮನ ಸೆಳೆಯಲಾಗುವದು.

ಸಂಘದ ಶೇರುದಾರರು ವರ್ಷದ ಡಿವಿಡೆಂಡನ್ನು ಸಂಘಕ್ಕೆ ಕೊಟ್ಟರೆ ರೈತರ ಮಾಲನ್ನು ದಾಸ್ತಾನು ಸಂಗ್ರಹಿಸಲು ಕೋಲ್ಡ ರೂಮ ನಿರ್ಮಿಸಲಾಗುವದು. ಜೊತೆಗೆ ಸರ್ಕಾರದಿಂದ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಕೂಡಾ ಸಲ್ಲಿಸಲಾಗುವದು ಎಂದರು. ಮುಖ್ಯ ಕಾರ್‍ಯನಿರ್ವಾಹಕ ಸಂಗಪ್ಪ ಹಳ್ಳೂರ ೨೦೨೪-೨೫ ಸಾಲಿನ ಸಾಲ ಹಂಚಿಕೆ ಮತ್ತು ಠೇವುಗಳ ಮಾಹಿತಿ ಹಾಗೂ ಲಾಭಾಳಶಗಳ ವಿವರವನ್ನು ಸಭೆಗೆ ನೀಡಿದರು. ಸಂಘದ ಉಪಾಧ್ಯಕ್ಷ ಬಸಪ್ಪ ಹಾದಿಮನಿ, ನಿರ್ದೇಶಕ ರವಿ ಹುಚನೂರ, ರವಿ ಹೂಲಗೇರಿ, ದೊಡ್ಡಬಸಪ್ಪ ಬೆಳ್ಳಿಹಾಳ, ಕುಮಾರ ಘಟ್ಟಿಗನೂರ, ಚೇತನ ಮುಕ್ಕಣ್ಣವರ, ಸಂಗಮೇಶ ಭದ್ರಶಟ್ಟಿ, ದೀಪಾ ಸುಂಕದ, ಅನ್ನಪೂರ್ಣ ಹೊಸೂರ, ಮತ್ತು ಸುಪರ್‌ವೈಸರ್ ಜಿ.ಎಚ್. ಇಲಕಲ್ಲ ಹಾಗೂ ಮಹಾಂತೇಶ ತಂಗಡಗಿ ಇದ್ದರು. ಸಂಘದ ಶೇರುದಾರ ಸದಸ್ಯರು ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದರು.

WhatsApp Group Join Now
Telegram Group Join Now
Share This Article