ಇಂಡಿ,ಸೆ.೨೨: : ಸಹಕಾರಿ ಬ್ಯಾಂಕುಗಳು ಅರ್ಥಿಕವಾಗಿ ಬಲಾಡ್ಯಗೊಳ್ಳಬೇಕಾದರೆ ದುಡಿಯುವ ಬಂಡವಾಳ ನಿರಂತರ ದುಡಿಮೆಯಲ್ಲಿರಬೇಕು, ಇದರಿಂದ ದುಡಿಯುವ ಕೈಗಳಿಗೆ ಕೆಲಸ ಹೊಟ್ಟೆಗೆ ಅನ್ನ ಸಿಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಕಟ್ಟಿದ ಬಾಗವಾನ ಅಲ್ಪ ಸಂಖ್ಯಾತರ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ ಮತ್ತು ೨೦೨೪-೨೫ ನೇ ಸಾಲಿನ ೨೮ ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸರಕಾರಿ ಸ್ವಾಮ್ಯದ ಬ್ಯಾಂಕ ಗಳಿಗಿಂತಲೂ ಸಹಕಾರಿ ಕೋ ಆಪ್ ಬ್ಯಾಂಕುಗಳು ಸೇರಿದಂತೆ ಸತ್ತಾರ ಬಾಗವಾನರ ಸಹಕಾರಿ ಬ್ಯಾಂಕು ಬಡಜನರಿಗೆ, ಜನ ಸಾಮಾನ್ಯರಿಗೆ ಸಹಕಾರಿ ಯಾಗಿವೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಬಾಗವಾನ ಬ್ಯಾಂಕು ಈ ಭಾಗದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡಿದೆ ಎಂದರು.ಸತ್ತಾರ ಬಾಗವಾನರವರು ಹೆಚ್ಚು ಕಲಿತಿಲ್ಲವಾದರೂ ಸಹಕಾರಿರಂಗದಲ್ಲಿ ಅತೀ ಯಶಸ್ವಿಯಾಗಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಸಹಕಾರಿ ಸಂಘಗಳು ಅತಿ ಯಶಸ್ವಿಯಾಗಿದ್ದು ಸರಳ ವಿಧಾನ ಮೂಲಕ ಸಾಲ ಕೊಡುವ ವ್ಯವಸ್ಥ ಸಹಕಾರಿ ಬ್ಯಾಂಕಿನಲ್ಲಿದೆ ಎಂದರು.
ಸಹಕಾರಿ ರತ್ನ ಪುರಸ್ಕೃತರು ಅಧ್ಯಕ್ಷರು ಶಾಂತೇಶ್ವರ ಬ್ಯಾಂಕಿನ ಶ್ರೀಮಂತ ಇಂಡಿ ಮಾತನಾಡಿ ಬಾಗವಾನ ಬ್ಯಾಂಕು ಗ್ರಾಹಕರೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ವ್ಯವಹರಿಸಿ ಅರ್ಥ ವ್ಯವಸ್ಥೆ ಬೆಳೆಸಿಕೊಂಡ ಬಾಗವಾನ ಬ್ಯಾಂಕು ೨೮ ವರ್ಷ ಗಳನ್ನು ಪೂರೈಸಲು ಸಾದ್ಯವಾಗಿದೆ. ಹಣ ನಿರಂತರ ಚಲಾವಣೆಯಲ್ಲಿದ್ದರೆ ಬ್ಯಾಂಕು ಅರ್ಥಿಕವಾಗಿ ಬಲಗೊಳ್ಳಬಹುದು ಆಡಳಿತ ಮಂಡಳಿಯ ಕಠಿಣ ಪರಿಶ್ರಮ ಗ್ರಾಹಕರೊಂದಿಗಿರುವ ಅನ್ಯುನತೆಯೇ ಶ್ರೇಯೋಭಿವೃದ್ದಿ ಕಂಡಿದೆ. ಬಾಗವಾನ ಬ್ಯಾಂಕು ಇನ್ನೂ ಹೆಚ್ಚು ಸಹಕಾರಿಯಾಗಿ ಬೆಳೆಯಲಿ ಎಂದು ಹಾರೈಸಿದರು.
ಉಪಾಧ್ಯಕ್ಷರು ಭೀಮಾಶಂಕರ ಕಾರಖಾನೆಯ ಎಮ್.ಆರ್.ಪಾಟೀಲ ಬ್ಯಾಂಕು ನಡೆದು ಬಂದ ದಾರಿ ಮತ್ತು ಸಂಘದ ಗಳಿಸಿದ ಲಾಭಾಂಶದ ಬಗ್ಗೆ ತಿಳಿಸಿದರು.ಉಪಾಧ್ಯಕ್ಷರು ಅಂಜುಮನ್ ಎ ಇಸ್ಲಾಂ ವಿಜಯಪುರದ ಸೈಯದ್ ಜೈನುಲಾಜಿದಿನ್ ಪೀರಜಾದೆ, ಬಾಗವಾನ ಅಲ್ಪ ಸಂಖ್ಯಾತರ ಬ್ಯಾಂಕಿನ ಅಧ್ಯಕ್ಷ ಸತ್ತಾರ ಬಾಗವಾನ,ಅಬ್ದುಲ್ ರಹಮಾನ ಅಂತುಲೆ, ಇಲಿಯಾಸ ಬೋರಾಮಣಿ,ಶಿವಲಿಂಗಪ್ಪ ಓಂಕಾರಿ ಮಾತನಾಡಿದರು.ವೇದಿಕೆಯ ಮೇಲೆ ಪೂಜ್ಯ ಅಭಿನವ ಪುಂಡಲಿಂಗ ಶ್ರೀಗಳು ಗೋಳಸಾರ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಕಲ್ಲನಗೌಡ ಪಾಟೀಲ, ಪ್ರಶಾಂತ ಕಾಳೆ, ಜಟ್ಟೆಪ್ಪ ರವಳಿ, ಜಂಟಿ ನಿರ್ದೇಶಕರು ಸಹಕಾರಿ ಸಂಘದ ಎಸ್.ಎಸ್. ಬರ್ಮಾ, ಸಹಾಯಕ ನಿರ್ದೇಶಕ ನಾಗೇಂದ್ರ ಕಟ್ಟಿಮನಿ, ನಿರೀಕ್ಷಕರು ವಿಜಯಕುಮಾರ ನಾಯಕ, ಈರಣ್ಣ ತೆಲ್ಲೂರ, ಅಯೂಬ ಬಾಗವಾನ, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನಿರ್ಮಲಾ ಕೊಂಕಣಗಾಂವ, ಜಾವೇದ ಮೋಮಿನ, ರಾಜು ಪತಂಗೆ, ಡಾ|| ರಾಜೇಶ ಕೋಳೆಕರ ಮತ್ತಿತರಿದ್ದರು.


