ಸಂಘದಿಂದ ರೈತರಿಗೆ ಉಪಯೋಗವಾಗುವ ಕೆಲಸವನ್ನು ಮಾಡುತ್ತೇನೆ : ವಿಠ್ಠಲ ಬಂಟನೂರ

Pratibha Boi
ಸಂಘದಿಂದ ರೈತರಿಗೆ ಉಪಯೋಗವಾಗುವ ಕೆಲಸವನ್ನು ಮಾಡುತ್ತೇನೆ : ವಿಠ್ಠಲ ಬಂಟನೂರ
WhatsApp Group Join Now
Telegram Group Join Now

ಯರಗಟ್ಟಿ: ಸಮೀಪದ ರೈನಾಪೂರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರೈನಾಪೂರ ೨೦೨೪ ೨೫ನೇ ಸಾಲಿನ ೮೩ನೇ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ ನಡೆಯಿತು.ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ವಿಠ್ಠಲ ಬಂಟನೂರ ಮಾತನಾಡಿ, ಹಿಂದಿನ ಸಹಕಾರ ವರ್ಷದ ಮಂಡಳಿಯು ಮಂಡಿಸಿದ ವಾರ್ಷಿಕ ವರದಿಯನ್ನು ಪರಿಗಣಿಸುವದು. ಹಿಂದಿನ ಸಹಕಾರ ವರ್ಷದ ಲೆಕ್ಕ ಪರಿಶೋಧನಾ ವರದಿ ಮತ್ತು ಅದರ ಬಗೆಗಿನ ಮಂಡಳಿ ವರದಿಯನ್ನು ಪರಿಗಣಿಸಿದುವುದು.ನಿರ್ದಿಷ್ಟ ಮೀಸಲು ಮತ್ತು ಇತರ ನಿಧಿಗಳು ಸೃಜಿಸುದು. ರೈತರಿಗೆ ಏನಾದರೂ ಸಂಘದಿಂದ ಉಪಯೋಗವಾಗುವ ಕೆಲಸವನ್ನು ಮಾಡುತ್ತೇನೆ.

ಬೀಜ ಗೊಬ್ಬರವನ್ನು ರೈತರಿಗೆ ತಂದು ಮುಟ್ಟಿಸುವ ವ್ಯವಸ್ಥೆಯನ್ನು ನಾವು ಎಲ್ಲ ಆಡಳಿತ ಮಂಡಳಿಯವರು ಬರುವ ಮುಂದಿನ ಸಮಯದಲ್ಲಿ ರೈತರಿಗೆ ಉಪಯೋಗ ವಾಗುವಂತೆ ಮನಮುಟ್ಟುವ ಒಳ್ಳೆಯ ಕೆಲಸವನ್ನು ಮಾಡುತ್ತೇವೆ.ಪ್ರಸ್ತುತ ವರ್ಷದಲ್ಲಿ ಸಂಘದಿಂದ ರೈತರಿಗೆ ೬ ಕೊಟಿ ೩೬ ಲಕ್ಷ ಸಾಲ ನೀಡಿದೆ ಮತ್ತು ವಿವಿಧ ಬ್ಯಾಂಕುಗಳಲ್ಲಿ ೨,೦೬,೧೦,೦೮೧,೦೦ ಠೇವಣಿ ಇಡಲಾಗಿದೆ ಹಾಗೂ ಪ್ರಸ್ತುತ ವರ್ಷದ ೨೦,೬೫,೩೧೧-೦೦ ಲಾಭ ಗಳಿಸಿದ ಎಂದು ಸಂಘದ ಅಧ್ಯಕ್ಷ ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಆನಂದ ಪಟ್ಟಣಶೆಟ್ಟಿ, ನಿರ್ದೇಶಕರಾದ ಬಸವರಾಜ ಪಟ್ಟಣಶೆಟ್ಟಿ, ಭೀಮಪ್ಪ ಕಳ್ಳಿಗುದ್ದಿ, ಹೇಮರೆಡ್ಡಿ ಚುಳಕಿ, ಹನಮಂತ ಶಿದ್ನಾಳ, ಮಂಜುನಾಥ ದಳವಾಯಿ, ಭೀಮಪ್ಪ ಮುಡೆನ್ನವರ, ಮುದಕಪ್ಪ ಜೂಗನವರ, ಸುಧಾ ಪಟ್ಟಣಶೆಟ್ಟಿ, ಶಾಂತವ್ವ ಶಿದ್ನಾಳ, ಪಡೆಪ್ಪ ನರಗಟ್ಟಿ, ಎಸ್. ಎಮ್. ಪತ್ತಾರ, ಸಿಬ್ಬಂದಿ ವರ್ಗದವರಾದ ಬಸವರಾಜ ಪಟ್ಟಣಶೆಟ್ಟಿ, ಯಲ್ಲಪ್ಪ ತಳವಾರ ಹಾಗೂ ಶೇರುದಾರರು ಗ್ರಾಮಸ್ಥರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article