ಸಿಂದಗಿ: ತಾಲೂಕಿನ ಬ್ಯಾಕೋಡ ಗ್ರಾಮದ ಹರಿಜನ ಕೇರಿಯ ಹತ್ತಿರವಿರುವ ತೆರೆದ ಭಾವಿಯ ತಡೆಗೋಡೆ ಕುಸಿದು ಬಿದ್ದು ೧ ತಿಂಗಳಾದರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸದಿರವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ತಡೆ ಗೋಡೆಯನ್ನು ಪುನಃರ್ ನಿರ್ಮಾಣ ಮಾಡದೇ ಅಧಿಕಾರಿಗಳು ನಿಷ್ಕಾಳಜಿ ವಹಿಸಿದ್ದು, ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸಂರ್ಪೂಣ ತಡೆ ಗೋಡೆಯು ಭಾವಿಯಲ್ಲಿ ಬಿದ್ದಿದೆ. ಕೊಂಚ್ ನಜರುಚೂಕಾದರೆ ವಾಹನಗಳು ಭಾವಿಯಲ್ಲಿ ಬಿದ್ದು ದೊಡ್ಡ ಅಪಘಾತವಾಗುವುದಲ್ಲದೇ ಜೀವಗಳು ಜೀವ ಹೋಗುವ ಸ್ಥಿತಿಯಿದೆ. ಅಲ್ಲದೇ ಬ್ಯಾಕೋಡ ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಆ ಭಾವಿ ಹತ್ತಿರದಿಂದಲೇ ಶಾಲೆಗೆ ಹಾದು ಹೋಗುತ್ತಾರೆ. ಅಲ್ಲದೇ ಈ ಮಾರ್ಗವಾಗಿ ಕಲಕೇರಿ, ಬೆಂಗಳೂರು, ತಾಳಿಕೋಟಿ ಹಾಗೂ ನೂರಕ್ಕೂ ಅಧಿಕ ಖಾಸಗಿ ವಾಹನಗಳು ಸಂಚರಿಸುತ್ತವೆ. ಮತ್ತು ಸಿಂದಗಿ-ಬ್ಯಾಕೋಡ ರಸ್ತೆಯು ಸಂರ್ಪೂಣ ತಗ್ಗು ಗುಂಡಿ ತುಂಬಿದ್ದು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ತಿರಗಾಡುವುದಾಗಿದೆ. ಬ್ಯಾಕೋಡ ಗ್ರಾಮದ ಸಾರ್ವಜನಿಕರು ಹಾಗೂ ಅನೇಕ ಗ್ರಾಮಗಳ ಸಾರ್ವಜನಿಕರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಹಾಗೂ ಜನಪ್ರತಿನಿದಿಗಳ ಗಮನಕ್ಕೆ ತಂದರು ಕ್ಯಾರೆ ಎನ್ನುತ್ತಿಲ್ಲ. ಈ ಭಾವಿಯಲ್ಲಿ ಅಫಘಾತವಾಗಿ ಜೀವಗಳು ಕಳೆದುಕೊಳ್ಳುವ ಮುಂಚೆ ತಡೆ ಗೋಡೆಯನ್ನು ನಿರ್ಮಾಣ ಮಾಡಿ ಮುಂದಾಗುವ ಅನಾಹುತಗಳನ್ನು ತಪ್ಪಿಸದಿದ್ದರೆ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಬಿ.ಜೆ.ಪಿ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾವಳಸಂಗ ಎಚ್ಚರಿಕೆ ನೀಡದ್ದಾರೆ.
ಕುಸಿದು ಬಿದ್ದ ಭಾವಿಯ ತಡೆಗೋಡೆ : ತಿಂಗಳಾದರು ಗಮನ ಹರಿಸದ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
