ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಬೇಕು : ಡಾ.ರವಿ ಗೋಲಾ

Pratibha Boi
ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಬೇಕು : ಡಾ.ರವಿ ಗೋಲಾ
WhatsApp Group Join Now
Telegram Group Join Now

ಸಿಂದಗಿ:ಶಿಕ್ಷಕ ವೃತ್ತಿ ಪವಿತ್ರ ವೃತ್ತಿ. ಶಿಕ್ಷಕರು ಕೇವಲ ಪಠ್ಯ ವಿ?ಯಗಳಲ್ಲದೇ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ನಿರಂತರ ಅಧ್ಯಯನ ಶೀಲರಾಗಬೇಕು ಎಂದು ಜಿ.ಪಿ. ಪೋರವಾಲ ಕಲಾ ವಾಣೀಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ಪದವಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಹೇಳಿದರು.
ಪಟ್ಟಣದ ಶ್ರೀಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಲಾಯನ್ಸ್ ಕ್ಲಬ್ ಸಿಂದಗಿ ಹಾಗೂ ಮಾತೋಶ್ರೀ ಗುರುಬಸಮ್ಮ ಹ. ಸೋಮಾಪುರ ಸೇವಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಕೆ.ಎಚ್. ಸೋಮಾಪುರ ಅವರ ಕೃತಿಗಳ ಉಚಿತ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುಸ್ತಕ ಓದುವುದರಿಂದ ನೆಮ್ಮದಿ, ಆತ್ಮಸ್ಥೈರ್ಯ, ವಿಶ್ವಾಸ, ಸಾಧನೆಯ ಗುರಿ ಹಾಗೂ ಸಮಾಜಮುಖಿ ಬದುಕು ಮೂಡುತ್ತದೆ. ಓದು ಬದುಕನ್ನು ಬೆಳಗಿಸುವ ಶಕ್ತಿಯನ್ನು ಹೊಂದಿದೆ ಎಂದರು.
ಈ ವೇಳೆ ಪತ್ರಕರ್ತ ಶಾಂತೂ ಹಿರೇಮಠ, ಲಯನ್ ಕ್ಲಬ್ ತಾಲೂಕಾಧ್ಯಕ್ಷ ಎಸ್.ಎಸ್.ಪಾಟೀಲ, ಕೃತಿಯ ಕರ್ತೃ ಕೆ.ಎಚ್.ಸೋಮಾಪುರ, ಪ್ರಾಚಾರ್ಯ ಬಿ.ಎಂ.ಸಿಂಗನಹಳ್ಳಿ, ಪ್ರಾಚಾರ್ಯ ಜೆ.ಸಿ.ನಂದಿಕೋಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಐ.ಬಿ.ಬಿರಾದಾರ, ಪಿ.ಎಂ.ಮಡಿವಾಳರ್, ಎಸ್.ಬಿ.ಚಾಗಶೆಟ್ಟಿ, ಎನ್.ಬಿ. ಪೂಜಾರಿ, ಡಾ.ಶರಣಬಸವ ಜೋಗುರ, ಡಾ.ಅಂಬರೀಶ ಬಿರಾದಾರ, ಶರಣು ಬೂದಿಹಾಳ, ಪ್ರಶಾಂತ ಕುಲಕರ್ಣಿ, ಭಾಗ್ಯಜ್ಯೋತಿ ದಸ್ಮಾ, ಚನ್ನು ಕತ್ತಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಾರ್ಥಿಗಳು ಇದ್ದರು. ಕಾರ್ಯಕ್ರಮವನ್ನು ಭುವನೇಶ್ವರಿ ನಾವದಗಿ ನಿರೂಪಿಸಿದರು. ದಾನಯ್ಯ ಮಠಪತಿ ಸ್ವಾಗತಿಸಿದರು. ರೇವಣಸಿದ್ದ ಹಾಲಕೇರಿ ವಂದಿಸಿದರು.

WhatsApp Group Join Now
Telegram Group Join Now
Share This Article