ಅಕ್ಕಮಹಾದೇವಿ ಸೌಹಾರ್ದ ಸಂಘ ಸಾಮಾಜಿಕ ಕಾರ್ಯ ಸಹ ಮಾಡುತ್ತಿರುವುದು ಹೆಮ್ಮೆಯ ಸಂಗತಿ : ರಾವೂರ

Pratibha Boi
ಅಕ್ಕಮಹಾದೇವಿ ಸೌಹಾರ್ದ ಸಂಘ ಸಾಮಾಜಿಕ ಕಾರ್ಯ ಸಹ ಮಾಡುತ್ತಿರುವುದು ಹೆಮ್ಮೆಯ ಸಂಗತಿ : ರಾವೂರ
WhatsApp Group Join Now
Telegram Group Join Now

ಇಂಡಿ: ಅಕ್ಕಮಹಾದೇವಿ ಸೌಹಾರ್ದ ಸಂಘ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದಿಂದ ಸಾಮಾಜಿಕ ಕಾರ್ಯಗಳನ್ನು ಸಹ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಉಪತಹಸಿಲ್ದಾರ ಬಸವರಾಜ ರಾವೂರ ಹೇಳಿದರು.
ಶುಕ್ರವಾರ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಸಂಘದ ನಾಲ್ಕನೇ ವ?ದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಕೇವಲ ನಾಲ್ಕು ವ?ದಲ್ಲಿ ಸಂಘ ಉತ್ತಮ ಆದಾಯದಲ್ಲಿ ಬರುವ ಜೊತೆಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಹೋಗುತ್ತಿದೆ ಎಂದರು.
ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ವಿ.ಪಿ. ನಾಯಕ್ ಮಾತನಾಡಿ, ಸಂಘ ಸಂಸ್ಥೆಗಳು ಬೆಳೆಯಬೇಕಾದರೆ ಪ್ರಾಮಾಣಿಕ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಅವಶ್ಯಕ. ಅಕ್ಕಮಹಾದೇವಿ ಸೌಹಾರ್ದ ಸಂಘದಲ್ಲಿ ಪ್ರಾಮಾಣಿಕತೆಯಿಂದ ಕಾರ್ಯ ಮಾಡಿದ್ದರಿಂದಲೇ ಸಂಘ ಉತ್ತಮವಾಗಿ ಬೆಳೆಯುತ್ತಿದೆ. ಈ ಸಂಘದಿಂದ ಸಾಧಕರಿಗೆ ಸನ್ಮಾನ ಸೇರಿದಂತೆ ವಿಶೇ? ಕಾರ್ಯಗಳನ್ನು ಮಾಡಲಾಗುತ್ತಿದೆ. ಆಡಳಿತ ಮಂಡಳಿಯವರು ಕ್ರಿಯಾಶೀಲರಾಗಿದ್ದು ಈ ಸಂಸ್ಥೆ ಇನ್ನ? ಎತ್ತರಕ್ಕೆ ಬೆಳೆಯಲಿದೆ. ಈ ಸಂಘ ಇನ್ನೂ ನೂರಾರು ಜನರಿಗೆ ಕೆಲಸ ಕೊಡುವ? ಬೆಳೆದು ದೊಡ್ಡದಾಗಲಿ ಎಂದು ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಉಮೇಶ ಬಳಬಟ್ಟಿ ಮಾತನಾಡಿ, ನಮ್ಮ ಸೌಹಾರ್ದದಿಂದ ಶೀಘ್ರದಲ್ಲಿ ಲಿಂಬೆ ಉಪ್ಪಿನಕಾಯಿ ತಯಾರಿಸಿ, ಸಂಘದಿಂದ ಮಾರಾಟ ಮಾಡುವ ಕಾರ್ಯಯೋಜನೆ ರೂಪಿಸಿಕೊಳ್ಳಲಾಗಿದೆ, ಸಂಘದಿಂದ ಇನ್ನೂ ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಗಳನ್ನು ಮಾಡಲು ಆಡಳಿತ ಮಂಡಳಿ ಬದ್ಧವಿದೆ. ಸಂಘದಲ್ಲಿ ಸಾಲ ಸೌಲಭ್ಯ ಇದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು. ಸಕಾಲದಲ್ಲಿ ಸಾಲ ಮರುಪಾವತಿಸಿ ತಾವು ಏಳಿಗೆಯಾಗಿ ಸಂಘವನ್ನು ಸಹ ಉತ್ತುಂಗಕ್ಕೆ ಒಯ್ಯುವ ಕಾರ್ಯ ಸಂಘದ ಸದಸ್ಯರು ಮಾಡಬೇಕು ಎಂದರು.
ವೇದಿಕೆಯಲ್ಲಿ ಸಹಕಾರ ಇಲಾಖೆ ಅಧಿಕಾರಿ ಕೆ.ಎಚ್.ವಡ್ಡರ, ಗುಡ್ಡದ ಬಸವರಾಜೇಂದ್ರ ಸಂಘದ ವ್ಯವಸ್ಥಾಪಕಿ ವಿದ್ಯಾಶ್ರೀ ಪಾಟೀಲ ಇದ್ದರು.
ಸಂಘದ ಉಪಾಧ್ಯಕ್ಷ ಯಲಗೊಂಡ ಬೇವನೂರ, ಗೌರವಾಧ್ಯಕ್ಷ ಮಂಜುನಾಥ ಕಾಮಗೊಂಡ, ನಿರ್ದೇಶಕರಾದ ವಿಠ್ಠಲ ಪಟ್ಟಣ, ರಮೇಶ ಹತ್ತಿ, ಶಿವಾನಂದ ಮಠಪತಿ, ಚಂದ್ರಾಮ ಮೇಡೆದಾರ, ಸಿದ್ದಾರ್ಥ ಅರಳಿ, ಮಹಾಂತೇಶ ಮುಡಕೆ, ಬಸವರಾಜ ದಶವಂತ, ಸಂಘದ ವ್ಯವಸ್ಥಾಪಕ ಅಶೋಕ ಬಳಬಟ್ಟಿ, ಸಿಬ್ಬಂದಿಗಳಾದ ಶ್ರೀಕಾಂತ ಗಡಗಲಿ, ಸಚಿನ ಮೇಡೆದಾರ, ಸಚಿನ್ ದೇವಣಗಾಂವ, ಮಲ್ಲಿಕಾರ್ಜುನ ಹಿಕ್ಕಲಗುಂತಿ, ಮಹೇಶ ಬಳಬಟ್ಟಿ, ಧೂಳಪ್ಪ ಜಿದ್ದಿಮನಿ ಸೇರಿದಂತೆ ಅನೇಕರು ಇದ್ದರು.

 

WhatsApp Group Join Now
Telegram Group Join Now
Share This Article