ಇಂಡಿ : ತಾಲೂಕಿನ ಎಲ್ಲ ಕಡೆ ಪ್ರತಿದಿನ ಸತತ ಮಳೆಯಾಗುತ್ತಿದ್ದು ಬೆಳೆ ಇರುವ ಕಡೆ ನೀರು ನಿಂತಿದ್ದರೆ ಅಂತಹ ಹೊಲಗಳಲ್ಲಿ ಹರಿ ಅಥವಾ ಬಸಿ ಗಾಲುವೆ ಮಾಡಿ ನೀರು ಹಾಕಲು ಪ್ರಯತ್ನಿಸಬೇಕೆಂದು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ರೈತರಿಗೆ ಸಲಹೆ ನೀಡಿದ್ದಾರೆ.
ತಾಲೂಕಿನ ವಿವಿಧ ಕಡೆ ರೈತರ ಹೊಲಗಳಿಗೆ ಭೇಟಿ ನೀಡಿ ಅವರಿಗೆ ಸಲಹೆ ನೀಡಿ ಉಪ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅದಲ್ಲದೆ ಬೆಳೆ ಇರುವ ನೀರು ನಿಂತ ಹೊಲಗಳಲ್ಲಿ ಬಸಿ ಗಾಲುವೆ ನಿರ್ಮಾಣ ಮಾಡಿ ಆ ಬಸಿಗಾಲುವೆಯಿಂದ ನೀರು ಹೊಲದಿಂದ ಹೊರಹಾಕಬೇಕು. ಹೊಲದಲ್ಲಿಯೇ ನೀರು ಉಳಿದರೆ ಬೆಳೆ ಹಾಳಾಗುವ ಸಾದ್ಯತೆ ಹೆಚ್ಚು. ಬೆಳೆಗಳಿಗೆ ಶೇ ೨ ರಷ್ಟು ಯುರಿಯಾ ಸಿಂಪರಣೆ ಮಾಡುವದು ಒಳಿತು ಎಂದು ಪವಾರ ಸಲಹೆ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಪ್ರತಿದಿನ ೪೦ ಮಿಮಿ ಕ್ಕೂ ಹೆಚ್ಚು ಅಥವಾ ವಾಡಿಕೆಗಿಂದ ಮಳೆಯಾಗುತ್ತಿದ್ದು ಮತ್ತೆ ಮೋಡ ಕವಿದ ವಾತಾವರಣ ಇದೆ.
ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಕೃಷಿ ಅಧಿಕಾರಿ ಮಹಾಂತೇಶ.ಸೆಟ್ಟೆಣ್ಣನವರ.ಮತ್ತಿತರಿದ್ದರು.
ಹೊಲದಲ್ಲಿಯೇ ನೀರು ಉಳಿದರೆ ಬೆಳೆ ಹಾಳಾಗುವ ಸಾದ್ಯತೆ ಹೆಚ್ಚು : ಚಂದ್ರಕಾಂತ ಪವಾರ
