ಹುನಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ೧೯ ಲಕ್ಷ ರೂ. ನಿವ್ವಳ ಲಾಭ

Pratibha Boi
ಹುನಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ೧೯ ಲಕ್ಷ ರೂ. ನಿವ್ವಳ ಲಾಭ
WhatsApp Group Join Now
Telegram Group Join Now

ಹುನಗುಂದ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ೧೯೦೯೯೮೪.೬೦ ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಮಹಾಂತೇಶ ಹೊಸೂರ ಹೇಳಿದರು. ನಗರದ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದಲ್ಲಿ ಶುಕ್ರವಾರ ೧೧೨ನೇ ೨೦೨೪-೨೫ನೇ ವಾರ್ಷಿಕ ವರದಿ ಮತ್ತು ಅಢಾವೆ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತ ಸದ್ಯಕ್ಕೆ ಸಂಘವು ಹುನಗುಂದ, ಬಾದವಾಡಗಿ ಮತ್ತು ತಿಮ್ಮಾಪೂರ ಸೇರಿ ೬೮೯೮ ಸದಸ್ಯರನ್ನು ಹೊಂದಿದೆ. ಸಂಘವು ೪೭೫.೫೧ ಲಕ್ಷ ರೂ. ಮೇಂಬರ್ ?ರು ಬಂಡವಾಳದ ಜೊತೆಗೆ ೪೩೭೫.೬೪ ಠೇವುಗಳನ್ನು ಹೊಂದಿದೆ. ಮೇಂಬರ್ ಬಿಕೆಸಿಸಿ ಸಾಲ, ಟ್ರ್ಯಾಕ್ಟರ ಸಾಲ, ಬಿನ್‌ಶೇತ್ಕಿ ಸಾಲ ಹೀಗೆ ೧೧ಬಗೆಯ ಸಾಲಗಳನ್ನು ೪೯೮೬.೨೨ ಲಕ್ಷ ನೀಡಿದೆ. ಇನ್ನೂ ರೈತರಿಗೆ ಬೆಳೆ ಸಾಲ ಹೆಚ್ಚಿಸಲು ಪ್ರಯತ್ನಿಸಲಾಗುವದು ಎಂದು ಸಂಘದ ಅಧ್ಯಕ್ಷ ಮಹಾಂತೇಶ ಹೊಸೂರ ತಿಳಿಸಿದರು. ಉಪಾಧ್ಯಕ್ಷ ಬಸವರಾಜ ಹಾದಿಮನಿ ಮಾತನಾಡಿ ಪ್ರಸಕ್ತ ಸಾಲಿಗೆ ೪೪೮೩೭೨.೯೭ ರೂ. ವ್ಯಾಪಾರಿ ಲಾಭ ಹೊಂದಿದ್ದು, ೨೦೨೫-೨೬ಕ್ಕೆ ಶೇರು ಬಂಡವಾಳ ೪೭೪೪೨೦೦೨, ಮೇಂಬರ ಶೇರು ೪೭೫೫೧೦೦೨ ಮತ್ತು ರಾಜ್ಯ ಸರ್ಕಾರದ ಶೇರು ೯೯೫೦೦ ಹೊಂದಿದೆ. ನಿಯಮದಂತೆ ಬೆಳೆಸಾಲ, ಟ್ರ್ಯಾಕ್ಟರ್ ಸಾಲ, ವಾಹನ ಸಾಲ, ಬಂಗಾರ ಆಭರಣ ಮೇಲೆ ಸಾಲ, ಮನೆ ಕಟ್ಟಡ ಸಾಲ, ರೋಖ ಪತ್ತಿನ ಸಾಲ ಮತ್ತು ಜಾಮೀನು ಸಾಲಗಳನ್ನು ಸಂಘವು ನೀಡುತ್ತಿದೆ ಎಂದರು. ಸಂಘದ ಮುಖ್ಯ ವ್ಯವಸ್ಥಾಪಕ ಸಂಗಪ್ಪ ಹಳ್ಳೂರ ಮಾತನಾಡಿ ಸಂಘವು ಆರಂಭಗೊಂಡು ೧೧೨ ವ?ಗಳಾಗಿವೆ. ಹುನಗುಂದ, ತಿಮ್ಮಾಪೂರ ಮತ್ತು ಬಾದವಾಡಗಿ ಗ್ರಾಮಗಳಲ್ಲಿ ಕಾರ್‍ಯನಿರ್ವಹಿಸುತ್ತಿದೆ. ಬಿಸಿಸಿ ಬ್ಯಾಂಕಿನ ಹಣಕಾಸು ಪ್ರತಿನಿಧಿ ಸೇರಿ ೧೩ಜನ ಆಡಳಿತ ಮಂಡಳಿಯನ್ನು ಹೊಂದಿದೆ. ಮುಖ್ಯ ಕಾರ್‍ಯನಿರ್ವಾಕ ಸೇರಿ ೧೮ ಜನ ಸಿಬ್ಬಂದಿ ಹಾಗೂ ೩ಜನಪಿಗ್ಮಿ ಎಜೆಂಟರು ಕಾರ್‍ಯನಿರ್ವಹಿಸುತ್ತಿದ್ದಾರೆ. ಸೆ.೨೩ರಂದು ಮುಂಜಾನೆ ೨೦-೩೦ಕ್ಕೆ ಬಸವ ಮಂಟಪದಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯುವದು. ಸಂಘದ ಎಲ್ಲ ?ರುದಾರರು. ಠೇವಣಿದಾರರು, ಸಾಲಗಾರರು ಆಗಮಿಸಬೇಕೆಂದು ಸಂಗಪ್ಪ ಹಳ್ಳೂರ ಮನವಿ ಮಾಡಿದರು. ನಿರ್ದೇಶಕರಾದ, ರವಿ ಹುಚನೂರ, ರವಿ ಹೂಲಗೇರಿ, ದೊಡಬಸಪ್ಪ ಬೆಳ್ಳಿಹಾಳ, ಕುಮಾಅರ ಘಟ್ಟಿಗನೂರ,ಚೇತನ ಮುಕ್ಕಣ್ಣವರ, ದೇವಪ್ಪ ಡಂಬಳ, ಸಂಗಮೇಶ ಭದ್ರಶಟ್ಟಿ, ದೀಪಾ ಸುಂಕದ, ಅನ್ನಪೂರ್ಣ ಹೊಸೂರ ಮತ್ತು ಸುಪರವೈಸರ್ ಜಿ.ಎಚ್. ಇಲಕಲ್ಲ ಮತ್ತು ಸಿಬ್ಬಂದಿ ಇದ್ದರು.

WhatsApp Group Join Now
Telegram Group Join Now
Share This Article