ಹುನಗುಂದ; ೧೧ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ೧೩ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ ಸುಧೀರ್ಘ ಸೇವೆ ಸಲ್ಲಿಸುತ್ತ ವಿಶ್ವಮಾನ್ಯತೆಗೆ ಮತ್ತು ನಿರಾಶವಾದಿಗೆ ಹಾಗೂ ದೇಶದ ಪ್ರಜೆಗಳ ಪ್ರೀತಿಗೆ ಹೆಸರಾದ ಭಾರತದ ಪ್ರಧಾನಿ ನರೇಂದ್ರ ಮೋದಿಜಿಗೆ ದೇವರು ಆರೋಗ್ಯ ಆಯುಷ್ಯ ಹೆಚ್ಚಿಸಲಿ ಎಂದು ಪ್ರಾರ್ಥಿಸಿ ಅವರ ೭೬ನೇ ಹುಟ್ಟು ಹಬ್ಬಕ್ಕೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಶುಭ ಹಾರೈಸಿದರು. ಬುಧವಾರ ಬೆಳಿಗ್ಗೆ ಪ್ರಧಾನಿ ಮೋದಿಯವರ ೭೬ನೇ ಹುಟ್ಟು ಹಬ್ಬದ ನಿಮಿತ್ಯ ಬಿಜೆಪಿ ಕಾರ್ಯಕರ್ತರ ಜೊತೆಗೆ ನಗರದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ಹಣ್ಣು ವಿತರಿಸಿ ಆಸ್ಪತ್ರೆಯ ಎಲ್ಲ ರೋಗಿಗಳು ತೀವ್ರವಾಗಿ ಗುಣಮುಖರಾಗಲೆಂದು ಹರಸಿದರು. ನಂತರ ಮಾತನಾಡಿದ ಅವರು ಪ್ರಧಾನಿಯವರು ದೇಶಕ್ಕಾಗಿ ಹಗಲಿರುಳು ದುಡಿದು ಸ್ವಂತಕ್ಕೆ ಏನು ಬಯಸದೆ ದೇಶದ ಅಭ್ಯುದಯ ಮತ್ತು ಅಭಿವೃದ್ದಿಗೆ ಸದಾ ಶ್ರಮಿಸಿ ೨೫ವರ್ಷಗ ಕಾಲ ವಿಶ್ರಾಂತಿ ಪಡೆಯದ ಮೋದೀಜಿ ಹಲವಾರು ಭಾಷೆಗಳಲ್ಲಿ ಮಾತನಾಡಿ ಯುವಕರಂತೆ ವಿಶ್ವದಾದ್ಯಂತ ತಿರುಗಾಡಿ ಶತ್ರು ದೇಶಗಳನ್ನು ಮಿತ್ರ ದೇಶಗಳನ್ನಾಗಿಸಿಕೊಂಡಿದ್ದಾರೆ. ಹಿಂದಿನ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ದೇಶದ ಆರ್ಥಿಕ ಸ್ಥಿತಿ ೧೦ಕ್ಕೂ ಮೇಲ್ಪಟ್ಟಿತ್ತು. ಆದರೆ ಮೋದಿಜಿಯವರು ೧೧ವರ್ಷ ಪ್ರಧಾನಿ ಅವದಿಯಲ್ಲಿ ಆರ್ಥಿಕ ಸ್ಥಾನ ೪ನೇ ಸ್ಥಾನಕ್ಕೆ ಬಂದಿದೆ. ಇಂಥ ಪ್ರಧಾನಿ ಪಡೆಯಲು ನಾವೆಲ್ಲ ಪುಣ್ಯ ಮಾಡಿದ್ದೇವೆಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ತಿಳಿಸಿದರು. ಮುಖಂಡ ರಾಜಕುಮಾರ ಬಾದವಾಡಗಿ ಮಾತನಾಡಿದರು. ಮಲ್ಲಯ್ಯ ಮೂಗನೂರಮಠ, ಡಾ. ಬಸವರಾಜ ಕಡಿವಾಲ, ಅಮರೇಶ ಹಳಪೇಟಿ, ಬಸವರಾಜ ಹುನಕುಂಟಿ, ವೀರೇಶ ಕುರ್ತಕೋಟಿ, ಮಹಾಂತೇಶ ಚಿತ್ತವಾಡಗಿ, ಬಸವರಾಜ ಹೊಸೂರ, ಮುತ್ತಣ್ಣ ಹಂಡಿ, ಶಿವು ಬಾವಿಕಟ್ಟಿ, ಪ್ರಕಾಶಗೌಡ ಪಾಟೀಲ, ಮಲ್ಲು ಚೂರಿ, ಮಲ್ಲಪ್ಪ ಕುಂಬಾರ, ದ್ಯಾವಮ್ಮ ಪಾಟೀಲ ಸೇರದಂತೆ ಇತರರು ಪಾಲ್ಗೊಂಡಿದ್ದರು.