ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಬೇಕು: ನಟ ಮಾಸ್ಟರ್ ಆನಂದ್

Pratibha Boi
ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಬೇಕು: ನಟ ಮಾಸ್ಟರ್ ಆನಂದ್
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; motionR: null; delta:null; module: video;hw-remosaic: false;touch: (0.36150792, 0.14660732);sceneMode: 0;cct_value: 0;AI_Scene: (-1, -1);aec_lux: 157.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 49;
WhatsApp Group Join Now
Telegram Group Join Now

ಮಹಾಲಿಂಗಪುರ : ಆಸಕ್ತಿ ಮತ್ತು sಸಾಮರ್ಥ್ಯ ಇಲ್ಲದಿದ್ದರೂ ಎಲ್ಲಾ ವಿದ್ಯಾರ್ಥಿಗಳೂ ಒಂದೇ ರೀತಿಯ ವಿಷಯಗಳನ್ನು ಕಲಿಯಬೇಕಾಗಿದೆ, ಇದರಿಂದ ವಿಜ್ಞಾನ ವಿಷಯದಲ್ಲಿ ಸಾಮರ್ಥ್ಯ ಇದ್ದರೂ ಗಣಿತ ವಿಷಯದಲ್ಲಿ ಆಸಕ್ತಿ ಇಲ್ಲದಿದ್ದ ಕಾರಣ ವೈದ್ಯರಾಗುವ ತಮ್ಮ ಕನಸು ನನಸಾಗಲಿಲ್ಲ, ಡಾಕ್ಟರ್ ಆಗುವ ಬದಲು ಆಕ್ಟರ್ ಆದೆ. ಇದೇ ರೀತಿ ಅನಾವಶ್ಯಕ ಕಲಿಕೆಯ ಒತ್ತಡದಿಂದ ಬಹುತೇಕ ವಿದ್ಯಾರ್ಥಿಗಳು ಗುರಿ ಸಾಧಸುವಲ್ಲಿ ವಿಫಲಾಗುತ್ತಾರೆ ಆದ್ದರಿಂದ ಇಂತಹ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯ ಅವಶ್ಯಕತೆ ಇದೆ ಎಂದು ಚಲನಚಿತ್ರ ನಟ ಹಾಗೂ ಝೀಕನ್ನಡ ವಾಹಿನಿಯ ನಿರೂಪಕ ಮಾಸ್ಟರ್ ಆನಂದ ಹೇಳಿದರು.ಸ್ಥಳೀಯ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಾಲೆಗಳು ಶಿಕ್ಷಕರ ಭೂv ಕಾಲದ ಅನುಭವ, ಪಾಲಕರ ವರ್ತಮಾನದೊಂದಿಗೆ ಮಕ್ಕಳ ಭವಿಷ್ಯತ್ತಿನ ನಿರ್ಮಾಣ ಕೇಂದ್ರಗಳಾಗಿರುತ್ತವೆ, ಆದ್ದರಿಂದ ನನಗೆ ಶಾ, ಶಿಕ್ಷಕರು, ವಿದ್ಯಾರ್ಥಿಗಳ ಬಗ್ಗೆ ಅಪಾರ ಗೌರವವಿದೆ ಎಂದರು.ಸ್ಥಳೀಯ ಠಾಣೆಯ ಪಿಎಸ್‌ಐ ಕಿರಣ ಸತ್ತಿಗೇರಿ, ಕ್ರೈಂ ಪಿಎಸ್‌ಐ ಮಧು ಎಲ್. ಮಾತನಾಡಿದರು,ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ ಪಟೇಲ, ಉಪಾಧ್ಯಕ್ಷ ಶಿವಾನಂದ ತಿಪ್ಪಾ, ರಮೇಶ ಮುಳವಾಡ,ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ,ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದು ನಕಾತಿ, ಸೋಮು ಸಂಶಿ, ವಿಷ್ಣುಗೌಡ ಪಾಟೀಲ, ರಾಜು ತಾಳಿಕೋಟಿ, ಶಿವಾನಂದ ಕೋಳಿಗುಡ್ಡ, ಪಪ್ಪು ಹುರಕಡ್ಲಿ, ಪ್ರವೀಣ ಮುಂತಾದವರಿದ್ದರು. ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾಸ್ಟರ್ ಆನಂದ ಅವರ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

WhatsApp Group Join Now
Telegram Group Join Now
Share This Article