ಇಂಡಿ : ಮರಗೂರ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ೨೦೨೪-೨೫ನೆ ಸಾಲಿನ ೭ನೇ ವಾರ್ಷಿಕ ಸರ್ವಸಾಧಾರಣ ಸಭೆ ಸೆ.೧೪ರಂದು ಬೆಳಗ್ಗೆ ೧೧ಕ್ಕೆ ಕಾರ್ಖಾನೆಯ ಆವರಣದಲ್ಲಿ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈಗಾಗಲೇ ಸದಸ್ಯರಿಗೆ ಸಭೆಯ ನೋಟಿಸ್ ಹಾಗೂ ವರದಿ ಕಳುಹಿಸಲಾಗಿದೆ. ಎಲ್ಲ ಸದಸ್ಯರು ಸಮಯಕ್ಕೆ ಸರಯಾಗಿ ಸಭೆಯಲ್ಲಿ ಉಪಸ್ಥಿತರಿರಲು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.