ದಿ ಸಂಕೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘಕ್ಕೆ 90 ಲಕ್ಷ ನಿವ್ವಳ ಲಾಭ

Pratibha Boi
ದಿ ಸಂಕೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘಕ್ಕೆ  90 ಲಕ್ಷ ನಿವ್ವಳ ಲಾಭ
WhatsApp Group Join Now
Telegram Group Join Now
ಸಂಕೇಶ್ವರ : ದಿ ಸಂಕೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 2024–25ನೇ ಸಾಲಿನಲ್ಲಿ 90 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇಕಡಾ 25ರಷ್ಟು ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಅಮರ ನಲವಡೆ ಹೇಳಿದರು.
ಪಟ್ಟಣದ ಶ್ರೀ ಸಾಯಿ ಭವನದಲ್ಲಿ ನಡೆದ 26ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,  ಸದಸ್ಯರ ಸಹಕಾದಿಂದ ಸಂಘವು
ಅಭಿವೃದ್ಧಿಯತ್ತ ಆಗುತ್ತಿದ್ದು, ಪ್ರಸ್ತುತ 646 ಸದಸ್ಯರೊಂದಿಗೆ 6.79 ಲಕ್ಷ ಶೇರು ಬಂಡವಾಳ ಹೊಂದಿದೆ. 39.38 ಕೋಟಿ ದುಡಿಯುವ ಬಂಡವಾಳದೊಂದಿಗೆ ಸಂಘವು 2024–25 ಆರ್ಥಿಕ ವರ್ಷದ ಅಂತ್ಯಕ್ಕೆ ಸಂಘವು 90 ಲಕ್ಷ 31 ಸಾವಿರ ನಿವ್ವಳ ಲಾಭಗಳಿಸಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಸಂಘದ ಸಂಸ್ಥಾಪಕರಾದ ದಿ. ಮಧುಗರ ನಲವಡೆ ಮತ್ತು ದಿ. ಅಶೋಕ ಕರಜಗಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.
ಸಂದರ್ಭದಲ್ಲಿ ಹಿರಣ್ಯಕೇಶಿ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆನಂದ ಶಿಂಧೆ ಮತ್ತು ಉಪಾಧ್ಯಕ್ಷ ಸಚೀನ ಕಾಂಬಳೆ ಅವರನ್ನು ಸಂಘದ ವತಿಯಿಂದ ಗೌರವಿಸಿ ಸತ್ಕರಿಸಲಾಯಿತು.
ಸಂಘದ ಉಪಾಧ್ಯಕ್ಷ ಅಭಿಜೀತ ಕುರಣಕರ ನಿರ್ದೇಶಕರಾದ ಕೃಷ್ಣಾ ಸುಗಂಧಿ, ಜಯಪ್ರಕಾಶ ಖಾಡೆ, ಶ್ರೀಕಾಂತ ಪರೀಟ, ಬಸಗೌಡಾ ಪಾಟೀಲ, ರವೀಂದ್ರ ಕಾಂಬಳೆ, ಜಾಕೀರ ಬೆಟಗೇರಿ, ಅಶ್ವಿನಿ ಚೌಗಲೆ, ವಂದನಾ ಕ್ಷೀರಸಾಗರ ಮುಖಂಡರಾದ ಅಜೀತ ಕರಜಗಿ, ಅರ್ಜುನ ಕರಜಗಿ, ಆರ್ಯನ್ ನಲವಡೆ, ಇಶಾನ್ ನಲವಡೆ,  ಮು.ಕಾ.ನಿ ವಿಜಯ ಬೋಟೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅಕ್ಷಯ ಕದಂ ಸ್ವಾಗತಿಸಿದರು, ಕುಮಾರ ಕಿವಂಡಾ ನಿರೂಪಿಸಿದರು, ಕೊನೆಯಲ್ಲಿ ಸಂದೀಪ್ ಕದಂ ವಂದಿಸಿದರು.
WhatsApp Group Join Now
Telegram Group Join Now
Share This Article