ಇಂಡಿ: ಪ್ರತಿಯೊಬ್ಬ ಶಿಕ್ಷಕರು ತಮ್ಮ ಕರ್ತವ್ಯ ಅರಿತುಕೊಂಡು ಬೋದನೆ ಮಾಡಿದಾಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ ಸಿಗುತ್ತದೆ. ಆ ನಿಟ್ಟಿನಲ್ಲಿ ತಾಲೂಕಿನ ೬೨ ಸಾವಿರ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯ ನಿಮ್ಮ ಕೈಯಲ್ಲಿ ಇದೆ. ಕಳೇದ ಸಾಲಿನಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರಿಕ್ಷೇ ಫಲಿತಾಂಶ ತೃಪ್ತಿಕರವಾಗಿಲ್ಲವೆಂದು ವಿಶಾದ ವ್ಯಕ್ತ ಪಡಿಸಿದ ಅವರು ಇನ್ನೂ ಮುಂದೆ ಹಾಗೆ ಆಗದಂತೆ ಶಿಕ್ಷಕರು ಮುಂಜಾಗೃತೆ ವಹಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಶಿಕ್ಷಕರಿಗೆ ಕಿವಿ ಹೇಳಿದರು.
ಅವರು ಸೋಮವಾರರಂದು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೃಷ್ಠಿಯನ್ನು ಬ್ರಹ್ಮನು ರಚಿಸಿದರೆ ಶಿಕ್ಷಕ ಪ್ರಪಂಚ ಸೃಷ್ಟಿಸುವ ಶಿಲ್ಪಿಯಾಗಿದ್ದು ಶಿಕ್ಷಕರು ಮಕ್ಕಳ ಅಭಿರುಚಿಗೆ ಅನುಗುಣವಾಗಿ ಶಿಕ್ಷಣ ನೀಡಬೇಕು. ಆ ನಿಟ್ಟಿನಲ್ಲಿ ಕಾರ್ಯೋನ್ಮೂಖರಾಗಿ ಶಿಕ್ಷಕರು ನಿರಂತರ ಬೋದನೆಯಲ್ಲಿ ತೊಡಗುವುದು ಅವಶ್ಯಕವಾಗಿದೆ. ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಶಿಕ್ಷಕರ ಮುತುವರ್ಜಿವಹಿಸಬೇಕು. ಆಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಲು ಸಾಧ್ಯ. ತಾಲೂಕಿನಲ್ಲಿ ಯಾರು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ ಅಂತವರನ್ನು ಹಿಂದು ಮುಂದೆ ನೊಡದೆ ನಿರ್ದಾಕ್ಷೀಣವಾಗಿ ಬೇರೆಡೆ ಕಳಿಸಲಾಗುವುದು ಎಂದು ಎಚ್ಚರಿಸಿದರು. ಪೂಜ್ಯ ಬಂಥನಾಳ ಸಂಗನಬಸವ ಶ್ರೀಗಳು ಶಾಲೆ ಜೀವಂತ ದೇವರ ಗುಡಿ ಎಂದು ಭಾವಿಸಿ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೆ ಮೂಡಿಪಾಗಿಟ್ಟು ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿ ಶಾಲೆಗಳನ್ನು ಕಟ್ಟಿದ ಮಹಾನ ಶರಣರು ಎಂದರು.
.
ಮುಖ್ಯಅತಿಥಿಗಳಾಗಿ ಡಾ. ಯಶವಂತ ಕೊಕ್ಕನವರ, ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ ಶಿಕ್ಷಕರ ಮೌಲ್ಯಯುತ ಪವಿತ್ರ ಜೀವನದ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಯೀದಾ ಮುಜಾವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಇಲಿಯಾಸ ಬೋರಾಮಣಿ, ಶಿವಯೋಗಪ್ಪ ಚನಗೊಂಡ, ಬಿ.ಸಿ.ಸಾವಕಾರ, ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಹೂರ, ಆರ್.ವಿ.ಪಾಟೀಲ, ವಾಯ್.ಟಿ.ಪಾಟೀಲ, ಎಸ್.ವಿ.ಹರಳಯ್ಯ, ಎಸ್.ಡಿ.ಪಾಟೀಲ, ನಿಜಣ್ಣ ಕಾಳೆ, ಬಿವಾಯ್ ಗೊರನಾಳ ಮತ್ತಿತರಿದ್ದರು. ನಿವೃತ್ತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಆರ್.ನಡಗಡ್ಡಿ, ನೊಡೆಲ್ ಅಧಿಕಾರಿ ಎ.ಓ.ಹೂಗಾರ ಮಾತನಾಡಿದರು.