ಹುನಗುಂದ: ನಮ್ಮದು ಶೋಷಿತ ಸಮಾಜವಾಗಿದೆ. ಒಳ ಮೀಸಲಾತಿ ಯಲ್ಲಿ ಸಮಾಜಕ್ಕೆ ಅನ್ಯಾಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಡಿ ನ್ಯಾಯ ಪಡೆಯಬೇಕಾಗಿದೆ ಎಂದು ನಂದಿಕ್ಷೇತ್ರ ಮತ್ತು ಶಿವಣಗಿ ನೂಲಿಯ ಚಂದಯ್ಯಪೀಠದ ವೃ?ಭೇಂದ್ರ ಸ್ವಾಮೀಜಿ ಹೇಳಿದರು.
ಗುರುವಾರ ಪಟ್ಟಣದ ಬಸವ ಮಂಟಪದಲ್ಲಿ ಹುನಗುಂದ ಮತ್ತು ಇಳಕಲ್ ತಾಲ್ಲೂಕು ಕೊರಮ ಸಮಾಜದ ವತಿಯಿಂದ ನಡೆದ ಕಾಯಕಯೋಗಿ ಶಿವಶರಣ ನೂಲಿಯ ಚಂದಯ್ಯ ಅವರ ೯೧೮ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಮುದಾಯ ಶಿಕ್ಷಣ ಪಡೆದು ಸಂಘಟಿತರಾಗಿ ರಾಜಕೀಯ ಪ್ರಜ್ಞೆ ಮೂಡಲಿ. ಕೊರಮ ಸಮುದಾಯದ ವೀರಶೈವ ಒಳಪಂಗಡಗಳಲ್ಲಿ ಒಂದಾಗಿದ್ದು, ವೀರಶೈವ ನಿಗಮ ಮಂಡಳಿಯಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ. ಸಮುದಾಯದ ಪ್ರಮುಖ ಬೇಡಿಕೆ ಭವನ ನಿರ್ಮಾಣಕ್ಕೆ ?೫೦ ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ನೂಲಿಯ ಚಂದಯ್ಯನವರು ಬಸವಣ್ಣನವರ ಅನುಯಾಯಿಯಾಗಿ ಕಾಯಕ ಮತ್ತು ದಾಸೋಹ ತತ್ವದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.
ಕೆಲೂರು ಪ್ರೌಢಶಾಲೆಯ ಶಿಕ್ಷಕ ತಮ್ಮಣ್ಣೆಪ್ಪ ಭಜಂತ್ರಿ ಉಪನ್ಯಾಸ ನೀಡಿದರು.
ಕೊರಮ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಭಜಂತ್ರಿ, ಶ್ರೀದೇವಿ ಉತ್ಲಾಸರ್, ಕೊರಮ ಸಮಾಜದ ತಾಲ್ಲೂಕು ಅಧ್ಯಕ್ಷ ಸಂಗಪ್ಪ ಭಜಂತ್ರಿ, ನೀಲಕಂಠಪ್ಪ ಭಜಂತ್ರಿ, ಬಸಪ್ಪ ಹುನಕುಂಟಿ, ಬಾಯಕ್ಕ ಮೇಟಿ ಮಾತನಾಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶರಣ ನೂಲಿಯ ಚಂದಯ್ಯನವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯೊಂದಿಗೆ ಮಹಿಳೆಯರು ಕುಂಭ ಹೊತ್ತು ಸಾಗಿದರು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ , ಇಳಕಲ್ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ವಿಜಯ ಗದ್ದನಕೇರಿ, ಇಳಕಲ್ ತಾಲ್ಲೂಕು ಕೊರಮ ಸಮಾಜದ ಅಧ್ಯಕ್ಷ ತುಕಾರಾಂ ಭಜಂತ್ರಿ, ಮಹಾಂತೇಶ ಭಜಂತ್ರಿ, ಬಾಬು ಭಜಂತ್ರಿ, ಬಸಪ್ಪ ಭಜಂತ್ರಿ, ರಾಜಕುಮಾರ ಬಾದವಾಡಗಿ ಇತರರಿದ್ದರು.
ಒಳ ಮೀಸಲಾತಿ ಯಲ್ಲಿ ಸಮಾಜಕ್ಕೆ ಅನ್ಯಾಯವಾಗಿದೆ : ವೃಷಭೇಂದ್ರ ಸ್ವಾಮೀಜಿ
