ಅಭಿವೃದ್ಧಿ ಕೆಲಸದಲ್ಲಿ ಯಾರು ರಾಜಕೀಯ ಮಾಡಬಾರದು :ಕಾಗೆ

Pratibha Boi
ಅಭಿವೃದ್ಧಿ ಕೆಲಸದಲ್ಲಿ ಯಾರು ರಾಜಕೀಯ ಮಾಡಬಾರದು :ಕಾಗೆ
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:12; brp_del_th:0.1838,0.0000; brp_del_sen:0.0800,0.0000; motionR: 1; delta:null; bokeh:0; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 94.821304;aec_lux_index: 0;albedo: ;confidence: ;motionLevel: 0;weatherinfo: null;temperature: 43;zeissColor: bright;
WhatsApp Group Join Now
Telegram Group Join Now

ಕಾಗವಾಡ: ಅಭಿವೃದ್ಧಿ ಕೆಲಸದಲ್ಲಿ ಯಾರು ರಾಜಕೀಯ ಮಾಡಬಾರದು ಪಕ್ಷಪಾತವಿಲ್ಲದೇ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು ನನ್ನ ಕಳೆದ ೩೦ ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ಯಾವುದೇ ಪಕ್ಷದವರು ಬಂದರೆ ಅವರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಕ್ಷೇತ್ರದ ಅಭಿವೃದ್ದಿಯೇ ನನ್ನ ಪರಮ ಗುರಿ ಎಂದು ನಂಬಿದ್ದೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು

ಅವರು ಬುಧುವಾರ ದಿ.3ರಂದು ತಾಲ್ಲೂಕಿನ ಕಾಗವಾಡ ಮತಕ್ಷೇತ್ರದ ಮಂಗಾವತಿ -ಕಾಗವಾಡ,ಹಾಗೂ ಜುಗಳ-ಕಾಗವಾಡ ರಸ್ತೆ ಕಾಮಗಾರಿಗೆ ಗುದಲ್ಲಿ ಪೂಜೆ ಸಲ್ಲಿಸಿ ಮಾತನಾಡುತ್ತಾ ಕಾಗವಾಡ ಕ್ಷೇತ್ರದ ಮೂಲಭೂತ ಸೌಕರ್ಯಗಳಾದ ರಸ್ತೆ ,ಕುಡಿಯುವ ನೀರು , ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವದಾಗಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಕ್ಷೇತ್ರದಲ್ಲಿ ಉಳಿದಿರುವ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡುವದಾಗಿ ಮತ್ತು ಗುಣಮಟ್ಟದ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ನೀಗಾವಹಿಸಬೇಕು ಎಂದರು.
ಇ ಸಂದರ್ಭದಲ್ಲಿವೇಳೆ ಪಂಚಾಯತ್ ರಾಜಇಲಾಖೆಯ ಎಇಇ ವೀರಣ್ಣ ವಾಲಿ, ಜುಗೂಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಕಾಸಾಹೇಬ ಪಾಟೀಲ, ಬಾಳಸಾಹೇಬ ಪಾಟೀಲ, ಬಾಬಾಸಾಹೇಬ ಪಾಟೀಲ, ರಾಜು ಕಡೋಲೆ, ವಿಲಾಸ ಕಡೋಲೆ, ಸುಭಾಷ ಪಾಟೀಲ, ರಾಜುಗೌಡ ಪಾಟೀಲ, ಕಲಗೌಡ ಪಾಟೀಲ, ಎಂ.ಬಿ. ಕೊರಬು, ಸುರೇಶ ಪಾಟೀಲ, ಬಾಬಾಸಾಹೇಬ ತಾರದಾಳೆ, ಅನಿಲ ಸುಂಕೆ, ಉಮೇಶ ಪಾಟೀಲ, ರವಿ ಕುರಣೆ, ಸಂಜಯ ಮಿಣಚೆ, ಅಕ್ಷಯ ಪಾಟೀಲ, ಜಯಪಾಲ ಯಮಕನಮರಡಿ, ಜಹಾಂಗೀರ ಕಲಾವಂತ, ಮಹಾದೇವ ಕಾಂಬಳೆ ,ರವಿ ಮಾಳಿ, ಗುತ್ತಿಗೆದಾರರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article