ಸಿಂದಗಿ: ಗಣೇಶನ ವಿಜರ್ಸನೆ ಸಂದರ್ಭದಲ್ಲಿ ಗಜಾನನ ಯುವಕ ಮಂಡಳಿಗಳು ಜಾಗರೂಕತೆಯಿಂದ ಎಚ್ಚರಿಕೆ ವಹಿಸಿ ವಿದ್ಯುತ್ ತಂತಿಯೆಡೆಗೆ ಗಮನ ಹರಿಸಬೇಕು ಎಂದು ಸಿಂದಗಿ ಪಿಎಸ್‌ಐ ಆರೀಫ್ ಮುಷಾಪುರಿ ಮನವಿ ಮಾಡಿಕೊಂಡರು.
ಸಿಂದಗಿ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಗಜಾನನ ಯುವಕ ಮಂಡಳಿ, ರಾಗರಂಜಿನಿ ಸಂಗೀತ ಅಕಾಡೆಮಿ, ಎಬಿಸಿಡಿ ನೃತ್ಯ ತರಬೇತಿ ವತಿಯಿಂದ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗಣೇಶ ಚತುರ್ಥಿ ಎಂಬುದು ಕೇವಲ ಮನೆಯಲ್ಲಿ ಆಚರಣೆ ಮಾಡುವುದಲ್ಲ. ಸಾರ್ವಜನಿಕವಾಗಿ ಭಾರತದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಆಚರಣೆ ಮಾಡುವ ಹಬ್ಬ ಎಂದರು.
ಈ ವೇಳೆ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಸ್ವಾಮಿ ವಿವೇಕಾನಂದ ಗಜಾನನ ಮಂಡಳಿಯ ಅಧ್ಯಕ್ಷ ಮುತ್ತು ಮುಂಡೇವಾಡಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಜಾನನ ಯುವಕ ಮಂಡಳಿಗೆ ಸಹಕರಿಸಿ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ರಾಗರಂಜಿನಿ ಸಂಗೀತ ಅಕಾಡೆಮಿ, ಎಬಿಸಿಡಿ ನೃತ್ಯ ತರಬೇತಿಯ ಮಕ್ಕಳ ನೃತ್ಯ, ಸಂಗೀತ ಮತ್ತು ಪ್ರಶಾಂತ ಚೌಧರಿ ಅವರ ಹಾಸ್ಯ ಜನಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಶ್ರೀಕಾಂತ ಹೂಗಾರ, ರಾಗರಂಜಿನ ಸಂಗೀತ ಅಕಾಡೆಮಿಯ ಸಂಚಾಲಕ ಡಾ.ಪ್ರಕಾಶ ಮೂಡಲಗಿ, ಹಾಸ್ಯ ಕಲಾವಿದ ಪ್ರಶಾಂತ ಚೌಧರಿ, ಗುಂಡು ಹುಮನಾಬಾದ, ಶಿವಾನಂದ ನಿಗಡಿ, ಗಂಗಾಧರ ರುಕುಂಪುರ, ರವಿ ಕುಂಟೋಜಿ, ರವಿ ಗುಳೂರ, ಪ್ರಶಾಂತ ಬೂದಿಹಾಳ, ಸುಭಾಸ ಭಜಂತ್ರಿ, ಪ್ರಶಾಂತ ಬಿರಾದಾರ, ಬಿ.ಎಸ್.ಉಪ್ಪಾರ, ಎಸ್.ಎಲ್.ತಾರಾಪೂರ, ಸುರೇಶ ಹವಳಗಿ, ಬಸವರಾಜ ಬಡಿಗೇರ, ಕುಮಾರ ಕಿಣಗಿ ಸೇರಿದಂತೆ ಅನೇಕರು ಇದ್ದರು. ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿದರು. ಸಿದ್ಧಲಿಂಗ ಕಿಣಗಿ ವಂದಿಸಿದರು.