ರಾಮದುರ್ಗ: ಗ್ರಾಮೀಣ ಭಾಗದ ಮಕ್ಕಳಿಗೂ ಕಲಿಕೆಯಲ್ಲಿ ತಂತ್ರಜ್ಞಾನದ ಕಲಿಕಾ ಪರಿಕರಗಳನ್ನು ಬಳಸಿಕೊಳ್ಳಬೇಕಾದ ಅಗತ್ಯವಿದೆ ಎಂದು ವಿದ್ಯಾಭಾರತಿ ಶಿಕ್ಷಣ ಸಮಿತಿಯ ಸದಸ್ಯ ಪ್ರವೀಣ ನಂದೆಪ್ಪನವರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹಲಗತ್ತಿ ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ತಂತ್ರಜ್ಞಾನ ಕಲಿಕಾ ಪರಿಕರಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನದ ಯುಗದಲ್ಲಿ ಬೋಧನೆ ಹಾಗೂ ಕಲಿಕೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ಶಹರ ಮಕ್ಕಳಿಗಿಂತ ಗ್ರಾಮೀಣ ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಬಿ.ವೈ.ನಡಮನಿ ಮಾತನಾಡಿ, ಶಿಕ್ಷಕರು ಆಧುನಿಕ ಕಲಿಕಾ ಪದ್ದತಿಗಳನ್ನು ಅನುಸರಿಸಬೇಕು. ಎಲ್ಲಾ ಶಿಕ್ಷಕರಲ್ಲಿ ಹೊಂದಾಣಿಕೆ ಇದ್ದರೆ ಮಾತ್ರ ಮಕ್ಕಳಿಗೆ ಉತ್ತಮ ರೀತಿಯ ಕಲಿಕೆ ಏರ್ಪಡಲು ಸಾಧ್ಯವಿದೆ ಎಂದರು.
ವಿದ್ಯಾಭಾರತಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ವೈ.ಬಿ.ಕಕರಡ್ಡಿ ಮಾತನಾಡಿ, ಮಕ್ಕಳ ಕಲಿಕಾ ಸುಧಾರಣೆಗೆ ಪ್ರವೀಣ ನಂದೆಪ್ಪನವರ ಶಾಲೆಗೆ ತಂತ್ರಜ್ಞಾನ ಕಲಿಕಾ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದು, ಅವುಗಳ ಸದುಪಯೋಗ ಪಡೆಸಿಕೊಳ್ಳಬೇಕೆಂದು ತಿಳಿಸಿದರು.
ಸಂಸ್ಥೆಯ ಸದಸ್ಯರಾದ ರಾಮಕೃಷ್ಣ ಚವಲಾರ, ರವಿ ಗಲಬಿ, ಶ್ರೀನಿವಾಸ ದ್ಯಾವನ್ನವರ, ಪ್ರವೀಣ ನಂದೆಪ್ಪನವರ, ಪ್ರೊ. ವೆಂಕಟೇಶ ಹುಣಶಿಕಟ್ಟಿ, ಬಿ.ಎಸ್.ಮುಳ್ಳೂರ, ಬಸವರಾಜ ಮುಧೋಳ, ಉಮಾ ದೊಡಮನಿ, ಬಾಲಪ್ಪ ರುದ್ರಗೌಡ್ರ, ಸುರೇಶ ನಂದೆಪ್ಪನವರ, ಗೋವಿಂದಪ್ಪ ಅಂಬಲಜೇರಿ, ಪ್ರಕಾಶ ಚಿಕ್ಕುಂಬಿ, ಕಿಷ್ಟಪ್ಪ ನಾಯ್ಕರ್, ಮುಖ್ಯ ಶಿಕ್ಷಕ ಎಸ್.ಬಿ.ಉಪ್ಪಾರ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಶಾಲೆಗೆ ತಂತ್ರಜ್ಞಾನ ಕಲಿಕಾ ಪರಿಕರ ಕೊಡುಗೆಯಾಗಿ ನೀಡಿದ ಪ್ರವೀಣ ನಂದೆಪ್ಪನವರ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಬಿ.ವೈ. ನಡಮನಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
“ಶಿಕ್ಷಕರು ಆಧುನಿಕ ಕಲಿಕಾ ಪದ್ದತಿಗಳನ್ನು ಅನುಸರಿಸಬೇಕು”
