ದೇವನಹಳ್ಳಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆದಿದೆ. ಗುದದ್ವಾರದಲ್ಲಿ ಚಿನ್ನ ಅಡಗಿಸಿ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಮೂವರ ಬಂಧನ ಮಾಡಲಾಗಿದೆ. ಶ್ರೀಲಂಕಾದ ಕೊಲೊಂಬೊದಿಂದ 6E 1168 ವಿಮಾನದಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದಿದ್ದ ಪ್ರಯಾಣಿಕರ ತಪಾಸಣೆ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ.
ತಪಾಸಣೆ ವೇಳೆ ಮೂವರು ಆರೋಪಿಗಳು ಪೆಸ್ಟ್ ರೂಪದಲ್ಲಿ ಗುದದ್ವಾರದಲ್ಲಿ ಚಿನ್ನ ಅಡಗಿಸಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಪೆಸ್ಟ್ ರೂಪದಲ್ಲಿ ಇಟ್ಟುಕೊಂಡು ಬಂದಿದ್ದ 1 ಕೋಟಿ 19 ಲಕ್ಷದ 38 ಸಾವಿರ ಮೌಲ್ಯದ 1,670 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳಿಂದ ತೀವ್ರ ವಿಚಾರಣೆ ನಡೆಯುತ್ತಿದೆ.
ಈ ಹಿಂದೆ ಮನುಷ್ಯರ ದೇಹದಿಂದ ಸೂಜಿ, ಪಿನ್ನು, ಕಬ್ಬಿಣದ ತುಂಡುಗಳು, ಮುಂತಾದ ಚಿಕ್ಕ ಚಿಕ್ಕ ವಸ್ತುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ದೇಹದಿಂದ ಹೊರಗೆ ತೆಗೆದ ಅನೇಕ ಘಟನೆಗಳು ನಡೆದಿತ್ತು. ಇಂತಹ ಚಿಕ್ಕ ವಸ್ತುಗಳನ್ನು ದೇಹದಿಂದ ಹೊರತೆಗೆಯುವುದು ವೈದ್ಯರಿಗೆ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿಯ ದೇಹದಲ್ಲಿರುವ ವಸ್ತುವನ್ನು ಕಂಡು ವೈದ್ಯರಿಗೆ ಆಘಾತವನ್ನುಂಟಾಗಿದೆ. ಮಧ್ಯಪ್ರದೇಶದ ವ್ಯಕ್ತಿಯೊಬ್ಬನ ಗುದದ್ವಾರದಿಂದ ಸೋರೆಕಾಯಿ ಅನ್ನು ವೈದ್ಯರು ತೆಗೆದುಹಾಕಿದ್ದು, ಇದು ಅಚ್ಚರಿಗೆ ಕಾರಣವಾಗಿದೆ. ಈ ಸುದ್ದಿ ಈಗ ಹೆಚ್ಚು ವೈರಲ್ (Viral News) ಆಗಿದೆ.