ನೈಋತ್ಯ ರೈಲ್ವೆ ಇಲಾಖೆಗೆ ವಂಚನೆ: 3ಅಧಿಕಾರಿಗಳಿಗೆ ದಂಡ, 4 ವರ್ಷ ಜೈಲು

Ravi Talawar
ನೈಋತ್ಯ ರೈಲ್ವೆ ಇಲಾಖೆಗೆ ವಂಚನೆ: 3ಅಧಿಕಾರಿಗಳಿಗೆ ದಂಡ, 4 ವರ್ಷ ಜೈಲು
WhatsApp Group Join Now
Telegram Group Join Now

ಬೆಂಗಳೂರು, ನವೆಂಬರ್​ 08: ವಂಚನೆಯಿಂದ ರೈಲ್ವೆ ಇಲಾಖೆಗೆ ಉಂಟಾದ ನಷ್ಟ ಹಿನ್ನೆಲೆ ಬೆಂಗಳೂರು ನೈಋತ್ಯ ರೈಲ್ವೆಯ ಮೂವರು ಅಧಿಕಾರಿಗಳಿಗೆ 2,35,000 ರೂ. ದಂಡದೊಂದಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ಸಿಬಿಐ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿದೆ. ದಕ್ಷಿಣ-ಪಶ್ಚಿಮ ರೈಲ್ವೆಯ ರವಾನೆ ವಿಭಾಗದ ಅಧೀಕ್ಷಕ ಎಂ. ನಾಗರಾಜ್, ಪರ್ಸನಲ್ ಬ್ರಾಂಚ್ ಕ್ಲರ್ಕ್ ಶಾದಾಬ್ ಖಾನ್ ಮತ್ತು ನಿವೃತ್ತ ಅಕೌಂಟ್ಸ್ ಅಸಿಸ್ಟೆಂಟ್​ ಆಗಿದ್ದ ಶ್ರೀಮತಿ. ಪದ್ಮಿನಿ ಶಿಕ್ಷೆಗೊಳಗಾದವರು.

WhatsApp Group Join Now
Telegram Group Join Now
Share This Article