ಬೆಂಗಳೂರು: ನಕಲಿ ನೋಟುಗಳನ್ನು ತಯಾರಿಸಿ ಕೊಡುವುದಾಗಿ ಹಣ ಪಡೆದು ವಂಚಿಸಲು ಯತ್ನಿಸುತ್ತಿದ್ದ ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಕಲಿ ನೋಟುಗಳ ವರ್ಗಾವಣೆಗೆ ಯತ್ನಿಸುತ್ತಿದ್ದ ತಮಿಳುನಾಡಿನ ತಿರುನಲ್ವೇಲಿ ಮೂಲದ ಮಿರಾನ್ ಮೊಹಿದುದ್ದೀನ್, ಶೇಖ್ ಮೊಹಮ್ಮದ್ ಹಾಗೂ ರಾಜೇಶ್ವರನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ನೀಡಿದರೆ ಅದಕ್ಕೆ ಪ್ರತಿಯಾಗಿ ಮೂರರಷ್ಟು ಅಧಿಕವಾದ ಅಸಲಿಯಂತೆಯೇ ಇರುವ ನಕಲಿ ನೋಟುಗಳನ್ನು ನೀಡುವುದಾಗಿ ವ್ಯಾಪಾರಸ್ಥರು, ಉದ್ಯಮಿಗಳನ್ನು ಆರೋಪಿಗಳು ನಂಬಿಸುತ್ತಿದ್ದರು. ಆರಂಭದಲ್ಲಿ ಅವರ ನಂಬಿಕೆ ಗಳಿಸಲು ಅಸಲಿಯಂತೇ ಇರುವ ಕೆಲವು ನೋಟುಗಳನ್ನು ನೀಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.