ಸಂಕೇಶ್ವರ,ಸೆ.೦೨ : ಸತ್ಕಾರ್ಯಗಳೊಂದಿಗೆ ನಾಡಿನ ಮಠಮಾನ್ಯಗಳಿಗೆ ಮಾದರಿಯಾದ ತ್ರಿವಿಧ ದಾಸೋಹ ನಡೆಸುವ ಮೂಲಕ ನಿಡಸೋಸಿ ಮಠದ ಪೂಜ್ಯರು ಧಾರ್ಮಿಕ ಮೌಲ್ಯಗಳನ್ನು ಉನ್ನತಿಕರಿಸಿದ್ದಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಸಮೀಪದ ನಿಡಸೋಸಿ ದುರದುಂಡೀಶ್ವರ ಮಠದ ಮಹಾದಾಸೋಹ ಮಹೋತ್ಸವದಲ್ಲಿ ಶ್ರೀಗಳಿಂದ ಆಶೀರ್ವಾದ ಸ್ವೀಕರಿಸಿ ಮಾತನಾಡಿದ ಅವರು, ಧರ್ಮದ ಕಾರ್ಯಗಳು ಮನಸ್ಸಿನ ಪರಿವರ್ತನೆ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಭಕ್ತರೇ ನಡೆಸುವ ಈ ಮಹಾದಾಸೋಹ ಪರಂಪರೆ ನಾಡಿನಲ್ಲಿಯೇ ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಈ ಭಕ್ತಿ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದರು.
ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ದಾಸೋಹ ಎಂಬುದು ಮನದ ಕತ್ತಲು ಕಳೆದ ಜ್ಞಾನ ಬೆಳಕು ಹರಿಸುವ ಶಕ್ತಿ ಹೊಂದಿದ್ದು, ಶ್ರೀಮಠ ೩ ಶತಮಾನಗಳಿಂದ ಭಕ್ತಿ, ಅನ್ನ, ಅರಿವಿನ ದಾಸೋಹದ ಮೂಲಕ ನಾಡಿನ ಅಸಂಖ್ಯಾತ ಭಕ್ತರ ಶ್ರದ್ಧಾಕೇಂದ್ರವಾಗಿದೆ ಎಂದರು.
ಶ್ರೀ ಮಠದಲ್ಲಿ ಪಲ್ಲಕ್ಕಿ ಮಹೋತ್ಸವ ಶ್ರೀಮನ್ನಿರಂಜನ ಜಗದ್ಗುರು ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಉತ್ಸವ ಮೂರ್ತಿಯ ಪಲ್ಲಕ್ಕಿಯ ಮಹೋತ್ಸವವು ಸಕಲ ವಾದ್ಯ -ವೈಭವ ಬಿರುದಾವಳಿಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಮಧ್ಯಾಹ್ನ ಮಹಾದಾಸೋಹ ಶ್ರೀಮನ್ನಿರಂಜನ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ. ಮಹಾದಾಸೋಹದ ಪ್ರಸಾದ ಪೂಜಾ ಸಮಾರಂಭವು ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಇವರ ಅಮೃತ ಹಸ್ತದಿಂದ ಜರುಗಿತು.
ವಿಧಾನ ಪರಿಷತ್ ಮಾಜಿ ಸಚೇತಕ ಮಹಾಂತೇಶ ಕವಟಗಿಮಠ, ಸಾನಿಧ್ಯವನ್ನು ಬೆಳಗಾವಿ ಕಾರಂಜಿ ಮಠದ ಶಿವಬಸವ ಸ್ವಾಮೀಜಿ, ಅರಭಾಂವಿ ಗುರುಬಸವಲಿಂಗ ಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಬೆಂಡವಾಡ ಗುರುಸಿದ್ಧ ಸ್ವಾಮೀಜಿ, ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ, ಹಾರನಹಳ್ಳಿ ಚೇತನ ದೇವರು, ಸುನೀಲ ಹಿರೇಮಠ, ಹಿರಿಯ ಧುರೀಣ ಅಪ್ಪಾಸಾಹೇಬ ಶಿರಕೋಳಿ, ಶಿವಾನಂದ ಮುಡಸಿ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಆರ್.ಬಿ.ಪಾಟೀಲ, ನಿರಂಜನಗೌಡ ಪಾಟೀಲ, ಬಿ.ಎ. ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಾಕ್ಸ:
ಭಕ್ತರು ತಾವೇ ಸಕಲ ವ್ಯವಸ್ಥೆ ಮಾಡಿಕೊಂಡು ಹಿರಿಯರು ಹಾಕಿಕೊಟ್ಟ ಪರಂಪರೆಯನ್ನು ಮುಂದುವರೆಸುವ ಮೂಲಕ ಮಹಾದಾಸೋಹ ಮಹೋತ್ಸವವನ್ನು ಯಶಸ್ವಿಯಾಗಿಸಿದ್ದು, ಭಕ್ತಿಯೆಂದರೆ ಕೇವಲ ಪೂಜೆ, ಪ್ರಾರ್ಥನೆಯಲ್ಲ ಸೇವೆಯೂ ಆಗಿದೆ.
ಪಂಚನ ಡಾ. ಶಿವಲಿಂಗೇಶ್ವರ ಸ್ವಾಮೀಜಿ
ನಿಡಸೋಸಿ.