“ಎಲ್.ಐ.ಸಿ ಜನರಿಗೆ ಅತ್ಯಂತ ಹತ್ತಿರ ಮತ್ತು ವಿಶ್ವಾಸಾರ್ಹ ಸಂಸ್ಥೆಯಾಗಿದೆ”

Pratibha Boi
“ಎಲ್.ಐ.ಸಿ  ಜನರಿಗೆ ಅತ್ಯಂತ ಹತ್ತಿರ ಮತ್ತು ವಿಶ್ವಾಸಾರ್ಹ ಸಂಸ್ಥೆಯಾಗಿದೆ”
filter: 0; jpegRotation: 0; fileterIntensity: 0.000000; filterMask: 0;
WhatsApp Group Join Now
Telegram Group Join Now

ರಾಮದುರ್ಗ: ದೇಶ ಹಾಗೂ ವಿದೇಶಗಳಲ್ಲಿ ಸಾರ್ವಜನಿಕರಿಗೆ ವಿಮಾ ಸೇವೆಯನ್ನು ಒದಗಿಸುವದರ ಜೊತೆಗೆ ಇನ್ನಿತರ ಅಂಗ ಸಂಸ್ಥೆಗಳ ಮೂಲಕ ಇತರೆ ಯೋಜನೆಗಳನ್ನು ತಲುಪಿಸುವ ಮೂಲಕ ಭಾರತೀಯ ಜೀವ ವಿಮಾ ನಿಗಮ ಬೃಹತ್ ಹಾಗೂ ಆರ್ಥಿಕ ಸದೃಡ ಸಂಸ್ಥೆಯಾಗಿ ಹೊರಹೊಮ್ಮಿ ಇಂದು ೬೯ ನೇ ವರ್ಷವನ್ನು ಪೂರೈಸಿದೆ ಎಂದು ಶಾಖಾ ವ್ಯವಸ್ಥಾಪಕ ಸಂತೋಷ ರೆಡ್ಡಿ ಹೇಳಿದರು.
ಪಟ್ಟಣದ ಎಲ್.ಐ.ಸಿ ಶಾಖೆಯಲ್ಲಿ ೬೯ ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದ ಅವರು, ಎಲ್.ಐ.ಸಿ ಸಂಸ್ಥೆ ಜನರಿಗೆ ಅಷ್ಟೇ ಅಲ್ಲದೇ ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿಕೊಟ್ಟಿದೆ. ಅಲ್ಲದೇ ಜನರಿಗೆ ಬೇಕಾದ ಪಾಲಿಸಿಗಳನ್ನು ಒದಗಿಸುವಲ್ಲಿ ಸಂಸ್ಥೆ ಮುಂದಾಗಿದೆ. ಅವಧಿ ಮುಗಿದ ಪಾಲಿಸಿದಾದದರಿಗೆ ಹಾಗೂ ಅನಾಹುತ ಉಂಟಾಗಿ ಮರಣ ಹೊಂದಿದ್ದಲ್ಲಿ ಅಂತಹ ವಾರಸುದಾರರಿಗೆ ನಿಗದಿತ ಸಮಯದಲ್ಲಿ ಹಣ ಸಂದಾಯ ಮಾಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್.ಐ.ಸಿ ವಿಮಾ ಸಂಸ್ಥೆ ಇಂದು ಸಾಕಷ್ಟು ಪ್ರಗತಿಯಲ್ಲಿದ್ದು, ಜನರಿಗೆ ಅತ್ಯಂತ ಹತ್ತಿರ ಮತ್ತು ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ಯುವಕರು, ವೃದ್ದರಿಗೂ ವಿಮೆ ಮಾಡಿಸುವಂತಹ ಯೋಜನೆಗಳನ್ನು ಸಂಸ್ಥೆ ತಂದಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜನರ ಅವಶ್ಯಕತೆಯನ್ನು ಅರಿತುಕೊಂಡು ಅವರ ಮನಸ್ಥಿತಿಗೆ ಹೊಂದುವಂತ ಪಾಲಿಸಿಗಳನ್ನು ಸಂಸ್ಥೆ ಒದಗಿಸಿಕೊಟ್ಟಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಕುಟುಂಬ ರಕ್ಷಣೆ ಹಾಗೂ ಆರ್ಥಿಕ ಭದ್ರತೆಗೆ ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಆಡಳಿತಾಧಿಕಾರಿ ನಾಗರಾಜ ಸಾಂಬ್ರಾಣಿ, ಅಭಿವೃದ್ದಿ ಅಧಿಕಾರಿಗಳಾದ ಆರ್.ಎಸ್. ಹಣಬರ, ಅಕ್ಷಯ ಆಲಮಟ್ಟಿ, ವೈ.ಎಚ್. ಹಗೇದ, ಹಿರಿಯ ಪ್ರತಿನಿಧಿ ಲಕ್ಷ್ಮಣ ಬಿಲ್ಲಾರ ಸೇರಿದಂತೆ ಅನೇಕರು ಎಲ್.ಐ.ಸಿ ನಡೆದುಬಂದ ದಾರಿ ಹಾಗೂ ಜನರಿಗೆ ನೀಡುವ ಸೇವೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ಶಿವಾನಂದ ಕಲಾದಗಿ, ಹಿರಿಯ ಪ್ರತಿನಿಧಿಗಳಾದ ದಾದೆಸಾಬ ಭಾವಾಖಾನ್, ಸೈಯದಸಾಬ ಸೈಯದ, ಸೇರಿದಂತೆ ಹಿರಿಯ ಹಾಗೂ ಕಿರಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article