ಶ್ರೀ ಸಿದ್ದೇಶ್ವರ ಸ್ವಾಮೀಜಿ ಮೇಗಾ ಮಾರ್ಕೇಟಿನ ಮಾಳಿಗೆಗಳ ಹರಾಜು : ಡಿಪಾಜಿಟ್ ಕಡಿಮೆ ಮಾಡಲು ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧಾರ

Pratibha Boi
ಶ್ರೀ ಸಿದ್ದೇಶ್ವರ ಸ್ವಾಮೀಜಿ ಮೇಗಾ ಮಾರ್ಕೇಟಿನ ಮಾಳಿಗೆಗಳ ಹರಾಜು : ಡಿಪಾಜಿಟ್ ಕಡಿಮೆ ಮಾಡಲು ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧಾರ
WhatsApp Group Join Now
Telegram Group Join Now

ಇಂಡಿ: ಪಟ್ಟಣದ ಪುರಸಭೆ ಸಾಮಾನ್ಯ ಸಭೆಯು ಪುರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷ ಲಿಂಬಾಜಿ ರಾಠೋಡ ಇವರ ಅಧ್ಯಕ್ಷತೆಯಲ್ಲಿ ಶನಿವಾರರಂದು ಜರುಗಿತು. ಪುರಸಭೆ ಮುಖ್ಯಾಧಿಕಾರಿ ಸಿದ್ರಾಮ ಕಟ್ಟಿಮನಿ ಎಲ್ಲರನ್ನು ಸ್ವಾಗತಿಸಿ ಕಾಮಗಾರಿಗಳ ಹಾಗೂ ವಿವಿಧ ಯೋಜನೆಗಳ ವಿಷಯಗಳನ್ನು ಮುಂದಿಟ್ಟು ಚರ್ಚಿಸಲು ಕೊರಿದರು.
ಇಂಡಿ ಪುರಸಭೆಯಿಂದ ನೂತನವಾಗಿ ಕಟ್ಟಲ್ಪಟ್ಟ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮೇಗಾ ಮಾರ್ಕೇಟಿನ ಕೆಳ ಅಂತಸ್ತಿನ ಒಂದು ನೂರು ಅಂಗಡಿ ಬಾಡಿಗೆ ಕೊಡುವ ಟೆಂಡರ್ ಕರೆಯಲಾಗಿತ್ತು. ಆದರೆ ಯಾವ ಬಾಡಿಗೆದಾರರು ಭಾಗವಹಿಸಿರಲ್ಲಿಲ್ಲ. ಪ್ರತಿ ಅಂಗಡಿಗಳಿಗೆ ಡಿಪಾಜಿಟ್ ಮತ್ತು ಬಾಡಿಗೆ ನಿಗದಿಗಾಗಿ ಹರಾಜು ಮಾಡಬೇಕಾಗಿತ್ತು. ಸಾರ್ವಜನಿಕರು ಡಿಪಾಜಿಟ್ ಬಹಳವಾಗುತ್ತದೆ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದ್ದರು. ಹೀಗಾಗಿ ಈ ಕುರಿತು ಸಾಮಾನ್ಯ ಸಭೆಯಲ್ಲಿ ಡಿಪಾಜಿಟ್ ಕಡಿಮೆ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಒಕೂರಲಿನಿಂದ ತಿರ್ಮಾನಿಸಿ ಠರಾವು ಪಾಸ ಮಾಡಲಾಯಿತು.
೨೦೨೩-೨೪ ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ಪುರಸಭೆ ಇಂಡಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಉನ್ನತಿಕರಿಸಲು ಪೈಪಲೈನ್ ಕಾಮಗಾರಿ ಕೈ ಗೊಳ್ಳುವ ಹಾಗೂ ಪಟ್ಟಣದ ಬ್ಲಾಕ್ ನಂ ೩೦ ವಸತಿ ಉದ್ದೇಶದ ಕರಡು ವಿನ್ಯಾಸ ನಕ್ಷೆಗಳಿಗೆ ಅನುಮೋದನೆ ನೀಡುವ ಮತ್ತು ಬ್ಲಾಕ ನಂ ೫೦೦ ರ ವಾಣಿಜ್ಯ ಉದ್ದೇಶದ ತಾತ್ಕಾಲಿಕತಾಂತ್ರಿಕ ಅನುಮೋದನೆ ಪರಿಷ್ಕೃತ ವಿನ್ಯಾಸಕ್ಕೆ ಅನುಮೋದನೆ ನೀಡುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಉಮೇಶ ದೇಗಿನಾಳ, ಅಯೂಬ ಬಾಗವಾನ, ಶಬ್ಬೀರ ಖಾಜಿ, ಭೀಮನಗೌಡ ಪಾಟೀಲ, ಬನ್ನೆಮ್ಮ ಹದರಿ, ರೇಣುಕಾ ಉಟಗಿ, ಸುಜಾತಾ ಚನಗೊಂಡ, ಕವಿತಾ ಜಯರಾಮ ರಾಠೋಡ , ಸಿಬ್ಬಂದಿಗಳಾದ ವ್ಯವಸ್ಥಾಪಕ ಪ್ರವೀಣ ಸೋನಾರ, ಅಸ್ಲಂ ಖಾದಿಮ್, ಸೋಮು ನಾಯಕ, ಹುಚ್ಚಪ್ಪ ಶಿವಶರಣ ಚಂದು ಕಾಲೆಭಾಗ, ನಿಂಬಾಳಕರ ಮತ್ತಿತರಿದ್ದರು.

WhatsApp Group Join Now
Telegram Group Join Now
Share This Article