ಖಾಯಂ ಜನತಾ ನ್ಯಾಯಾಲಯದಿಂದ ಶೀಘ್ರಗತಿಯಲ್ಲಿ ವ್ಯಾಜ್ಯಗಳ ಇತ್ಯಾರ್ಥ : ನ್ಯಾ. ಪಲ್ಲೇದ

Pratibha Boi
ಖಾಯಂ ಜನತಾ ನ್ಯಾಯಾಲಯದಿಂದ ಶೀಘ್ರಗತಿಯಲ್ಲಿ ವ್ಯಾಜ್ಯಗಳ ಇತ್ಯಾರ್ಥ : ನ್ಯಾ. ಪಲ್ಲೇದ
Oplus_0
WhatsApp Group Join Now
Telegram Group Join Now

ಹುನಗುಂದ: ಯಾವುದೇ ಕೋರ್ಟ್ ಫೀ ಇಲ್ಲದೆ,ಕಡಿಮೆ ಅವಧಿಯಲ್ಲಿ ಶೀಘ್ರಗತಿಯಲ್ಲಿ ವ್ಯಾಜ್ಯಗಳನ್ನು ಇತ್ಯಾರ್ಥಗೊಳಿಸಿ ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಕೆಲಸ ಖಾಯಂ ಜನತಾ ನ್ಯಾಯಾಲಯ ಮಾಡುತ್ತಿದೆ ಎಂದು ಬೆಳಗಾವಿ ಮತ್ತು ಬಾಗಲಕೋಟಿ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷರು ಹಾಗೂ ಜಿಲ್ಲಾ ನ್ಯಾಯಾಧೀಶ ರವೀಂದ್ರ ಪಲ್ಲೇದ ಹೇಳಿದರು.
ಪಟ್ಟಣದ ನ್ಯಾಯಾಲಯದ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಹುನಗುಂದ, ಇಳಕಲ್ ವಕೀಲರ ಸಂಘದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಖಾಯಂ ಜನತಾ ನ್ಯಾಯಾಲಯದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುವ ವಾಯು,ರಸ್ತೆ,ಜಲಮಾರ್ಗಗಳ ವಿ?ಯ, ಬ್ಯಾಂಕಿಂಗ್ ವ್ಯವಸ್ಥೆ, ಹೆಸ್ಕಾಂ ಸೇರಿದಂತೆ ೧೧ ವಿ?ಯಗಳ ಕುರಿತು ವಿವಿಧ ಸಂಸ್ಥೆಗಳ ಮೇಲೆ ಸಾರ್ವಜನಿಕರಿಗಾದ ಅನ್ಯಾಯದ ವಿರುದ್ಧ ಪರಿಹಾರ ಮತ್ತು ನ್ಯಾಯಕ್ಕಾಗಿ ಖಾಯಂ ಜನತಾ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿ ಒಂದು ಕೋಟಿವರೆಗೂ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಪ್ರಕರಣ ಅಥವಾ ಅರ್ಜಿ ಸಲ್ಲಿಸಲು ಘಟನೆ ನಡೆದ ಮೂರು ವ?ದವರೆಗೆ ಅವಕಾಶವಿರುತ್ತೆದೆ.ಖಾಯಂ ಜನತಾ ನ್ಯಾಯಾಲಯಕ್ಕೆ ಬರುವ ಮುಂಚೆ ಯಾವುದೇ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿರಬಾರದು, ನಮ್ಮ ನ್ಯಾಯಾಲಯದಲ್ಲಿ ಕೇಸ್ ನಡೆಯುವ ಸಂದರ್ಭದಲ್ಲಿ ಬೇರೊಂದು ನ್ಯಾಯಾಲಯದಲ್ಲಿ ಕೇಸ್ ಮಾಡುವಂತಿಲ್ಲ.ಗ್ರಾಹಕರ ನ್ಯಾಯಾಲಯ ಮತ್ತು ಇತರೆ ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಅಫೀಲ್ ಹೋಗಲು ಅವಕಾಶ ಇದೆ ಆದರೆ ನಮ್ಮ ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣಗಳನ್ನು ಅಫೀಲ್ ಹೋಗಲು ಬರುವುದಿಲ್ಲ.ಕಕ್ಷಿಧಾರರಿಗೆ ತೃಪ್ತಿ ಎನ್ನಿಸದಿದ್ದರೇ ರಿಟ್ ಗಳ ಮೂಲಕ ಹೈಕೋರ್ಟಿಗೆ ಹೋಗಬಹುದು. ಇದರ ಪ್ರಯೋಜನನ್ನು ಬಾಗಲಕೋಟೆ ಜಿಲ್ಲೆಯ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಹೆಚ್ಚುವರಿ ಹಾಗೂ ಸಂಚಾರಿ ನ್ಯಾಯಾಲಯದ ನ್ಯಾಯಾಧೀಶ ಜಿ.ಎ. ಮೂಲಿಮನಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ದೇಶದ ಜನಸಂಖ್ಯೆ ಹೆಚ್ಚಿದಂತೆ ಪ್ರಕರಣಗಳ ಸಂಖ್ಯೆಯು ಸಹ ಹೆಚ್ಚಾಗುತ್ತದೆ. ಅದರಲ್ಲಿ ಸದ್ಯದ ಕಾನೂನು ಜೆಟಿಲವಾಗಿರುವುದರಿಂದ ಶೀಘ್ರಗತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಇಂತಹ ನ್ಯಾಯಾಲಯದಲ್ಲಿ ಯಾವದೇ ಹಣವಿಲ್ಲದೇ ಮತ್ತು ಕಡಿಮೆ ಅವಧಿಯಲ್ಲಿ ನ್ಯಾಯವನ್ನು ಪಡೆದುಕೊಳ್ಳಲು ಅವಕಾಶವಿದೆ. ಇದರ ಸದುಪಯೋಗವನ್ನು ಪಡಿಸಿಕೊಳ್ಳಿ ಎಂದರು.
ವೇದಿಕೆಯಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಹನಮಂತರಾವ್ ಕುಲಕರ್ಣಿ, ಪ್ರಧಾನ ದಿವಾಣಿ ನ್ಯಾಯಾಧೀಶ ಬಸವರಾಜ ನೇಸರಗಿ, ಅಪರ ದಿವಾಣಿ ನ್ಯಾಯಾಧೀಶ ಮಹಾಂತೇಶ ಮಠದ, ಹುನಗುಂದ ಮತ್ತು ಇಳಕಲ್ ವಕೀಲರ ಸಂಘದ ಅಧ್ಯಕ್ಷರಾದ ಮಾಧವ ದೇಶಪಾಂಡೆ, ಎಂ.ಎಸ್.ಹೊಸೂರ ಸೇರಿದಂತೆ ಅನೇಕರು ಇದ್ದರು.ವಕೀಲ ಶಿವು ವಾಲಿಕಾರ ಸ್ವಾಗತಿಸಿ,ವಕೀಲ ರಮೇಶ ಕೋಕಟಿ ನಿರೂಪಿಸಿ, ವಕೀಲ ಶಿವು ತಾರಿವಾಳ ವಂದಿಸಿದರು.
ಬಾಕ್ಸ್- ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆಗೆ ಸೇರಿದ ಈ ಖಾಯಂ ಜನತಾ ನ್ಯಾಯಾಲಯದಲ್ಲಿ ಸಾಕ? ಪ್ರಕರಣಗಳು ಶೀಘ್ರಗತಿಯಲ್ಲಿ ಇತ್ಯಾರ್ಥವಾಗಿವೆ. ತೃಪ್ತಿದಾಯಕ ನ್ಯಾಯ ಮತ್ತು ಪರಿಹಾರವೂ ಕೂಡ ಸಿಕ್ಕಿದೆ. ಬೆಳಗಾವಿ ಜಿಲ್ಲೆಯ ಜನರು ಮಾತ್ರ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಆದರೆ ಬಾಗಲಕೋಟೆ ಜಿಲ್ಲೆಯ ಅಲ್ಲೊಂದು ಇಲ್ಲೊಂದು ಪ್ರಕರಣ ಬಿಟ್ರೆ ಯಾರು ಕೂಡಾ ಖಾಯಂ ಜನತಾ ನ್ಯಾಯಾಲಯದ ಕಡೆಗೆ ಬರುತ್ತಿಲ್ಲದಿರುವುದು ಒಂದು ನೋವಿನ ಸಂಗತಿಯಾಗಿದೆ. ರವೀಂದ್ರ ಪಲ್ಲೇದ. ಅಧ್ಯಕ್ಷರು ಖಾಯಂ ಜನತಾ ನ್ಯಾಯಾಲಯ ಬೆಳಗಾವಿ, ಬಾಗಲಕೋಟೆ

 

 

 

WhatsApp Group Join Now
Telegram Group Join Now
Share This Article