ರಾಮದುರ್ಗ: ತಾಲೂಕಿನ ಮುಳ್ಳೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದ ಅಂಗವಾಗಿ ಆ.೨೩ ರಂದು ಬೆಳಿಗ್ಗೆ ೯ ಗಂಟೆಗೆ ಮುಳ್ಳೂರ ಗ್ರಾಮದ ಅನ್ನದಾನೇಶ್ವರ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಶ್ರೀ ಪಟ್ಟದೇವರ ಭಜನಾ ಮಹಾಮಂಗಲೋತ್ಸವ ಜರುಗಲಿದೆ.
ಮುಂಜಾನೆ ೯ ಘಂಟೆಗೆ ಸುಂಗಲೆಯರ ಆರತಿ, ಕುಂಭಮೇಳದೊಂದಿಗೆ ಪಟ್ಟದೇವರ ಮೂರ್ತಿಯೊಂದಿಗೆ ಭಜನಾ ತಂಡ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಶ್ರೀಮಠಕ್ಕೆ ಆಗಮಿಸಿ, ಸಮಾವೇಶಗೊಳ್ಳಲಿದೆ. ಮಧ್ಯಾಹ್ನ ೧ ಘಂಟೆಗೆ ಮಹಾಪ್ರಸಾದವಿದೆ. ಕಾರಣ ಮುಳ್ಳೂರ ಸೇರಿದಂತೆ ಸುತ್ತಲಿನ ಗ್ರಾಮದ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನ್ನದಾನೇಶ್ವರರ ಕೃಪೆಗೆ ಪಾತ್ರರಾಗಬೇಕು ಎಂದು ಸಂಘಟಿಕರು ಪ್ರಕಟಣೆಯ ಮೂಲಕ ಕೋರಿದ್ದಾರೆ.
ನಾಳೆ ಶ್ರೀ ಪಟ್ಟದೇವರ ಭಜನಾ ಮಹಾಮಂಗಲೋತ್ಸವ
