ಸಮಾಜಕ್ಕೆ ಮಾದರಯಾಗಲು ನವದಂಪತಿಗಳಿಗೆ ಶಾಸಕ ಕಾಶಪ್ಪನವರ ಕರೆ

Pratibha Boi
ಸಮಾಜಕ್ಕೆ ಮಾದರಯಾಗಲು ನವದಂಪತಿಗಳಿಗೆ ಶಾಸಕ ಕಾಶಪ್ಪನವರ ಕರೆ
WhatsApp Group Join Now
Telegram Group Join Now

ಹುನಗುಂದ; ನವದಂಪತಿಗಳು ಒಗ್ಗಟ್ಟಾಗಿ ಸುಖ ಜೀವನ ನಡೆಸಿ ಸಮಾಜಕ್ಕೆ ಮಾದರಯಾಗಬೇಕೆಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಇಲ್ಲಿನ ಶ್ರೀ ಸಂಗಮೇಶ್ವರ ಜಾತ್ರ ಮಹೋತ್ಸವ ನಿಮಿತ್ಯ ಪ್ರತಿ ವರ್ಷದಂತೆ ಹಮ್ಮಿಕೊಂಡ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಿದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾವಹಿಸಿ ಅವರು ಮಾತನಾಡಿದರು. ಗುರುಹಿರಿಯರ ಆಶೀರ್ವಾದದೊಂದಿಗೆದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನೀವುಗಳು ಪುಣ್ಯವಂತರು. ಇಲ್ಲಿನ ಸಂಗಮೇಶ್ವರ ಜೀರ್ಣೋದ್ದಾರ ಸಮೀತಿಯು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಲಿಂಗಧೀಕ್ಷೆ ಮತ್ತು ಉಚಿತ ಸಾಮೂಹಿಕ ವಿವಾಹ ಹಮ್ಮಜಿಕೊಳ್ಳುತ್ತರಿಉವದು ಶ್ಲಾಘನೀಯ. ಹಿಂದುಳಿದ ಕಲ್ಯಾಣ ಇಲಾಖೆಯಿಂದ ಅಪೂರ್ಣಗೊಂಡ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ನೀಡಲಾಗುವದು ಎಂದು ಭರವಸೆ ನೀಡಿದರು. ಹಡಗಲಿ ರುದ್ರಮುನಿ ಶಿವಾಚಾರ್‍ಯರು, ಗಚ್ಚಿನಮಠದ ಅಮರೇಶ್ವರ ದೇವರು ಮಾತನಾಡಿದರು. ಸಮೀತಿ ಅಧ್ಯಕ್ಷ ಶೇಖರಪ್ಪ ಬಾದವಾಡಗಿ, ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಶಿವಾನಂದ ಕಂಠಿ, ಅರುಣ ದುದ್ಗಿ, ಬಸವರಾಜ ಹೊಸೂರ, ರಾಜಕುಮಾರ ಬಾದವಾಡಗಿ, ಈರಣ್ಣ ಅಂಗಡಿ, ಮಹಾಂತೇಶ ಅವಾರಿ ಮತ್ತಿತರರು ಇದ್ದರು. ಸಾಮೂಹಿಕ ವಿವಾಹದಲ್ಲಿ ೮ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಐವರು ಲಿಂಗಧಿಕ್ಷೆ ಪಡೆದರು.

 

 

WhatsApp Group Join Now
Telegram Group Join Now
Share This Article