ರಾಮದುರ್ಗ: ತಾಲೂಕಿನ ಚಿಲಮೂರ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನೂತನ ಗ್ರಾಮ ಘಟಕವನ್ನು ಕರವೇ ಗೌರವಾಧ್ಯಕ್ಷ ಜಹೂರ ಹಾಜಿ ಹಾಗೂ ತಾಲೂಕಾಧ್ಯಕ್ಷ ವಿಜಯಕುಮಾರ ರಾಠೋಡ ಉದ್ಘಾಟಿಸಿದರು.
ಗೌರವಾಧ್ಯಕ್ಷ ಜಹೂರ ಹಾಜಿ ಮಾತನಾಡಿ, ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಗ್ರಾಮದ ಅಭಿವೃದ್ದಿಗೆ ಪೂಕರವಾಗಿ ಗ್ರಾಮ ಘಟಕದ ಪದಾಧಿಕಾರಿಗಳು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ತಾಲೂಕಾಧ್ಯಕ್ಷ ವಿಜಯಕುಮಾರ ರಾಠೋಡ ಮಾತನಾಡಿ, ಕನ್ನಡ ನಾಡಿನ ರಕ್ಷಣೆ ಹಾಗೂ ಗಡಿನಾಡ ಸಮಸ್ಯೆಗಳಿಗೆ ಸದಾ ಹೋರಾಡುವಲ್ಲಿ ಕರವೇ ಸಂಘಟನೆ ಶ್ರಮಿಸಲಿದೆ. ನೂತನ ಪದಾಧಿಕಾರಿಗಳು ಮಾತೃ ಭಾಷೆಯನ್ನು ಕಾಪಾಡಲು ಸಿದ್ದರಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷೆ ರೂಪಾ ಅರಮನಿ. ಗ್ರಾಮೀಣ ಅಧ್ಯಕ್ಷ ಹಣಮಂತ ಕುಲಗೋಡ. ಕಾರ್ಮಿಕ ಘಟಕ ಅಧ್ಯಕ್ಷ ಗಣೇಶ ದೊಡಮನಿ. ತಾಲೂಕಾ ಪ್ರಧಾನ ಕಾರ್ಯದರ್ಶಿ ಆನಂದ ಜಾಧವ. ಯುವ ಘಟಕ ಅಧಕ್ಷ ಕೃಷ್ಣಾ ರಾಠೋಡ. ತಾಲೂಕಾ ಸಂಘಟನಾ ಕಾರ್ಯದರ್ಶಿ ಸಾಗರ ಮುನವಳ್ಳಿ. ಮಾಂತೇಶ ಪಾಶ್ಚಾಪೂರ. ಹಾಗೂ ಗ್ರಾಮ ಘಟಕ ಅಧ್ಯಕ್ಷ ಮಂಜು ರೊಟ್ಟಿ. ಉಪಾಧ್ಯಕ್ಷ ಸುರೇಶ ವಡೆಕನ್ನವರ. ಕಾರ್ಯದರ್ಶಿ ಯಲ್ಲಪ್ಪ ಚೀಲಕಂಜಿ. ಖಜಾಂಚಿ ಯಲ್ಲಪ್ಪ ಧಳವಾಯಿ ಸೇರಿದಂತೆ ಸರ್ವ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು ಮತ್ತು ಚಿಲಮೂರ ಗ್ರಾಮದ ಯುವ ಮಿತ್ರರು, ಹಿರಿಯರು ಉಪಸ್ಥಿತರಿದ್ದರು.
ಕರವೇ ನೂತನ ಗ್ರಾಮ ಘಟಕ ಉದ್ಘಾಟನೆ
